ಕೇವಲ 45 ನಿಮಿಷಗಳಲ್ಲಿ ಅಗ್ಗದ ಸಾಲ ನೀಡಲಿದೆ SBI 6 ತಿಂಗಳವರೆಗೆ EMI ಬಗ್ಗೆ ಚಿಂತಿಸಬೇಕಿಲ್ಲ
ಈ ಸಮಯದಲ್ಲಿ, ನಿಮಗೆ ಹಣದ ಅಗತ್ಯವಿದ್ದರೆ, ನೀವು ಸ್ವಲ್ಪವೂ ಚಿಂತಿಸಬೇಕಾಗಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗಾಗಿ ತುರ್ತು ಸಾಲವನ್ನು ತಂದಿದೆ.
ನವದೆಹಲಿ : ಈ ಸಮಯದಲ್ಲಿ ನಿಮಗೆ ಹಣದ ಅಗತ್ಯವಿದ್ದರೆ ನೀವು ಅದಕ್ಕಾಗಿ ಚಿಂತಿಸಬೇಕಿಲ್ಲ. ಕಾರಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಮಗಾಗಿ ತುರ್ತು ಸಾಲ ಸೌಲಭ್ಯ ನೀಡುತ್ತಿದ್ದು ಈ ಸಾಲವನ್ನು ತೆಗೆದುಕೊಳ್ಳಲು ನೀವು ಬ್ಯಾಂಕಿಗೆ ಹೋಗಬೇಕಾಗಿಲ್ಲ. ನೀವು ಈ ಸಾಲವನ್ನು ಮನೆಯಿಂದಲೇ ಪಡೆಯುತ್ತೀರಿ. ಈ ಸಾಲದ ವಿಶೇಷವೆಂದರೆ ಇದಕ್ಕಾಗಿ ನೀವು ಹಲವಾರು ದಿನಗಳವರೆಗೆ ಕಾಯಬೇಕಾಗಿಲ್ಲ. ಈ ಸಾಲವು ಕೇವಲ 45 ನಿಮಿಷಗಳಲ್ಲಿ ನಿಮ್ಮ ಖಾತೆಗೆ ಬರುತ್ತದೆ.
6 ತಿಂಗಳ ಇಎಂಐ ನೀಡುವ ಅಗತ್ಯವಿಲ್ಲ :
ಲಾಕ್ ಡೌನ್ ದೃಷ್ಟಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸಾಲ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ತುರ್ತು ಸಾಲವು ಎಸ್‌ಬಿಐ ಗ್ರಾಹಕರಿಗೆ ಮಾತ್ರ. ಸಾಲ ತೆಗೆದುಕೊಳ್ಳುವ ಗ್ರಾಹಕರಿಗೆ 6 ತಿಂಗಳವರೆಗೆ ಕಂತುಗಳನ್ನು (EMI) ನೀಡುವ ಅಗತ್ಯವಿಲ್ಲ ಎಂದು ಬ್ಯಾಂಕ್ ಹೇಳಿದೆ. ಅಂದರೆ ನೀವು ಮೇ ತಿಂಗಳಲ್ಲಿ ಎಸ್‌ಬಿಐನಿಂದ ತುರ್ತು ಸಾಲವನ್ನು ತೆಗೆದುಕೊಂಡರೆ ಅಕ್ಟೋಬರ್ ವರೆಗೆ ಇಎಂಐ ಪಾವತಿಸುವ ಅಗತ್ಯವಿಲ್ಲ. ನಿಮ್ಮ ಇಎಂಐ ಆರು ತಿಂಗಳ ನಂತರ ಮಾತ್ರ ಪ್ರಾರಂಭವಾಗುತ್ತದೆ.
ಈ ಸಾಲಕ್ಕೆ ಪಾವತಿಸಬೇಕಾದ ಬಡ್ಡಿ?
ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಈ ಸಾಲ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ವೈಯಕ್ತಿಕ ಸಾಲಕ್ಕಾಗಿ ಗ್ರಾಹಕರು ಶೇಕಡಾ 10.50 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ದಿನದ 24 ಗಂಟೆಗಳು ವಾರದ ಏಳು ದಿನಗಳು ಈ ಸಾಲಕ್ಕಾಗಿ ಅರ್ಜಿ ಹಾಕಬಹುದು.
ಲೋನ್ ಎಷ್ಟು ಸಿಗಲಿದೆ?
ವೈಯಕ್ತಿಕ ಸಾಲ: ಎರಡು ಲಕ್ಷ ರೂಪಾಯಿಗಳವರೆಗೆ
ಪಿಂಚಣಿ ಸಾಲ: ಎರಡೂವರೆ ಲಕ್ಷ ರೂಪಾಯಿ ವರೆಗೆ
ಸೇವಾ ವರ್ಗ: ಐದು ಲಕ್ಷ ರೂಪಾಯಿಗಳವರೆಗೆ
ಸಾಲಕ್ಕಾಗಿ ಈ ರೀತಿ ಅಪ್ಲೈ ಮಾಡಿ:
ಈ ಸಾಲಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕು. ಆ ಸುಲಭ ಹಂತಗಳನ್ನು ನಾವು ನಿಮಗೆ ತಿಳಿಸುತ್ತೇವೆ.
ಗ್ರಾಹಕರು ಮೊದಲು PAPL <ಖಾತೆ ಸಂಖ್ಯೆಯ ಕೊನೆಯ 4 ಅಂಕಿಗಳನ್ನು> ತಮ್ಮ ನೋಂದಾಯಿತ ಸಂಖ್ಯೆಯಿಂದ 567676 ಗೆ ಕಳುಹಿಸಬೇಕು
ನೀವು ಸಾಲ ತೆಗೆದುಕೊಳ್ಳಲು ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನಿಮಗೆ ಬ್ಯಾಂಕಿನ ಸಂದೇಶದ ಮೂಲಕ ತಿಳಿಸಲಾಗುತ್ತದೆ.
ಅರ್ಹ ಗ್ರಾಹಕರು ನಾಲ್ಕು ಪ್ರಕ್ರಿಯೆಗಳಲ್ಲಿ ಸಾಲ ಪಡೆಯುತ್ತಾರೆ
ಇದಕ್ಕಾಗಿ ಬ್ಯಾಂಕ್ ವತಿಯಿಂದ ನಿಮಗೆ ಸಂದೇಶ ಬಂದ ನಂತರ, ಎಸ್‌ಬಿಐ ಅಪ್ಲಿಕೇಶನ್‌ನಲ್ಲಿ ಅವೈಲ್ ನೌ (Avail Now) ಕ್ಲಿಕ್ ಮಾಡಿ.
ಇದರ ನಂತರ ಸಾಲದ ಸಮಯ ಮತ್ತು ಮೊತ್ತವನ್ನು ಆಯ್ಕೆ ಮಾಡಿ.
ಇದರ ನಂತರ ನೋಂದಾಯಿತ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ. ನೀವು ಒಟಿಪಿ ನಮೂದಿಸಿದ ಕೂಡಲೇ ಹಣ ನಿಮ್ಮ ಖಾತೆಗೆ ಬರುತ್ತದೆ.