ನವದೆಹಲಿ:ಲಾಕ್‌ಡೌನ್ (Lockdown) ಅವಧಿಯಲ್ಲಿ ನೀವೂ ಕೂಡ ನಿಮ್ಮ ಕೆಲಸ  ಕಳೆದುಕೊಂಡಿದ್ದು ಮತ್ತು ಗೃಹ ಸಾಲ ಅಥವಾ ಕಾರು ಸಾಲದ ಇಎಂಐ ಅನ್ನು ಹೇಗೆ ಮರುಪಾವತಿಸುವುದು ಎಂಬ ಬಗ್ಗೆ ಚಿಂತೆ ನಿಮಗೂ ಕಾಡುತ್ತಿದ್ದರೆ, ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ, ಎಸ್‌ಬಿಐ (SBI) ತನ್ನ ಇದೇ ರೀತಿಯ ಗ್ರಾಹಕರಿಗೆ ನೂತನ ಸೌಲಭ್ಯ ಪರಿಚಯಿಸಿದೆ. ಎಸ್‌ಬಿಐ ತನ್ನ ಚಿಲ್ಲರೆ ಸಾಲ ಗ್ರಾಹಕರಿಗೆ ಪೋರ್ಟಲ್ ವೊಂದನ್ನು ಆರಂಭಿಸಿದೆ. ಈ ಪೋರ್ಟಲ್ ಮೂಲಕ ನೀವು ನಿಮ್ಮ ಯಾವುದೇ ರೀತಿಯ ಸಾಲದ ರೀಸ್ಟ್ರಕ್ಚರಿಂಗ್ ಮಾಡಬಹುದಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ- ಇನ್ಮುಂದೆ Debit Card ಅಲ್ಲ, Watch ಬಳಸಿ ಈ ಕೆಲಸ ಮಾಡಿ, SBI ಆರಂಭಿಸಿದೆ ಈ ಅದ್ಭುತ ಸೇವೆ


ಈ ಪೋರ್ಟಲ್ ಮಾಧ್ಯಮದ ಮೂಲಕ SBI ಕೊರೊನಾ ಅಥವಾ ಲಾಕ್ ಡೌನ್ ಕಾರಣ ತಮ್ಮ ನೌಕರಿ ಕೆಳೆದುಕೊಂಡ ಗ್ರಾಹಕರ ಸಮಸ್ಯೆಗಳ ಬಗೆಹರಿಸಲು ಬಯಸುತ್ತಿದೆ ಎಂದು ಬ್ಯಾಂಕ್ ಹೇಳಿದೆ ಹಾಗೂ ಈ ಸ್ಕೀಮ್ ನ ಲಾಭ ಪಡೆದು ಮುಂದಿನ 6, 8, 9 ಅಥವಾ 12 ತಿಂಗಳಲ್ಲಿ ಹೊಸ ಉದ್ಯೋಗವನ್ನು ಪಡೆಯಬಹುದು. ಆದರೆ, ಗ್ರಾಹಕರಿಗೆ ಯಾವಾಗ ನೌಕರಿ ಸಿಗಲಿದೆ ಎಂಬುದನ್ನು ಗ್ರಾಹಕರೇ ತಮ್ಮ ಮೌಲ್ಯಮಾಪನ ನಡೆಸಿ ಈ ಅವಧಿಯನ್ನು ನಿರ್ಧರಿಸಬೇಕು ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.


ಇದನ್ನು ಓದಿ- SBI ಗ್ರಾಹಕರಿಗೆ ಸಂತಸದ ಸುದ್ದಿ, ಯಾವುದೇ ಶುಲ್ಕವಿಲ್ಲದೆ ಮನೆಯಲ್ಲಿಯೇ ಸಿಗಲಿವೆ ಈ 8 ಸೇವೆಗಳು


ಹೇಗೆ ಅರ್ಜಿ ಸಲ್ಲಿಸಬೇಕು?
ಈ ಕುರಿತು ಹೇಳಿಕೆ ನೀಡಿರುವ SBI, ಇದಕ್ಕಾಗಿ ಅರ್ಜಿ ಸಲ್ಲಿಸ ಬಯಸುವರು  ನಮ್ಮ ಶಾಖೆಗಳಿಗೆ ಭೇಟಿ ನೀಡದೆ, ಮೊದಲು ಈ ಪೋರ್ಟಲ್ ಮೂಲಕ ತಮ್ಮ ಅರ್ಹತೆಯನ್ನು ಪರೀಶಿಲಿಸಬೇಕು ಎಂದು ಹೇಳಿದೆ. ಇದಕ್ಕಾಗಿ ಮೊದಲು ಎಸ್‌ಬಿಐ www.sbi.co.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಅಪ್ಲಿಕೇಶನ್‌ಗಾಗಿ ಒಟಿಪಿ ಮೊಬೈಲ್ ಫೋನ್‌ನಲ್ಲಿ ನಿಮಗೆ ಬರುತ್ತದೆ. ಅರ್ಜಿ ಸಲ್ಲಿಸಿದ ನಂತರ ನೀವು ಈ ಮೊರೆಟೋರಿಯಂಗೆ ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದು ತಿಳಿಯಲಿದೆ. ನೀವು ಅರ್ಹರಾಗಿದ್ದರೆ , ನಿಮಗೆ ರೆಫೆರೆನ್ಸ್ ಸಿಗಲಿದೆ. ಈಗ ನೀವು ಬ್ಯಾಂಕ್ ಶಾಖೆಗೆ ಹೋಗಬೇಕಾಗುತ್ತದೆ. ಉಳಿದ ಕಾಗದಪತ್ರಗಳನ್ನು ನೀವು ಅಲ್ಲಿ ಪೂರ್ಣಗೊಳಿಸಬೇಕು. ಉಲ್ಲೇಖ ಸಂಖ್ಯೆ 30 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂಬುದನ್ನು ನೆನಪಿಡಿ. ದಾಖಲೆಗಳ ಪರಿಶೀಲನೆಯ ನಂತರವೇ ಪುನರ್ರಚನೆ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ.


SBI ಮೊರೆಟೋರಿಯಂನ ಕೆಲ ಆವಶ್ಯಕ ಮಾಹಿತಿ
ಯೋಜನೆ ಏನು?

ಎಸ್‌ಬಿಐನ ಈ ಯೋಜನೆಯಡಿಯಲ್ಲಿ, ನಿಮ್ಮ ಸಾಲದ ಕಂತನ್ನು ನೀವು ಎರಡು ವರ್ಷಗಳವರೆಗೆ ಮುಂದೂಡಬಹುದು, ಆದರೆ ಈ ಅವಧಿಯಲ್ಲಿ ಬಡ್ಡಿ ಏರುತ್ತಲೇ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಈ ಮೊರಟೋರಿಯಂ ಈ ಹಿಂದೆ RBIಘೋಷಿಸಿದ್ದ, ಮೊರಟೋರಿಯಂಗಿಂತ ಭಿನ್ನವಾಗಿದೆ ಎಂಬ ಇನ್ನೊಂದು ವಿಷಯ.


EMI ಮೊತ್ತ ಹೆಚ್ಚಾಗಲಿದೆ
ಸಾಲವನ್ನು ಪುನರ್ರಚಿಸುವ ಯಾವುದೇ ಗ್ರಾಹಕರು ಉಳಿದ ಸಾಲದ ಅವಧಿಗೆ ವಾರ್ಷಿಕ 0.35% ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅಂದರೆ, ಸಾಲದ ಅವಧಿಯು ಹೆಚ್ಚಾಗುವುದಲ್ಲದೆ, ಬಡ್ಡಿಯ ಮೌಲ್ಯಮಾಪನವನ್ನು ಸಹ ನವೀಕರಿಸಲಾಗುತ್ತದೆ, ಅಂದರೆ ಇಎಂಐ ಕೂಡ ಹೆಚ್ಚಾಗಲಿದೆ ಎಂದರ್ಥ.


ಯೋಗ್ಯತೆ
ಫೆಬ್ರವರಿ 2020 ಕ್ಕೆ ಹೋಲಿಸಿದರೆ ಆಗಸ್ಟ್ 2020 ರಲ್ಲಿ ನಿಮ್ಮ ಸಂಬಳ ಕಡಿಮೆಯಾಗಿದ್ದರೆ. ಲಾಕ್‌ಡೌನ್‌ನಲ್ಲಿ ನಿಮ್ಮ ಸಂಬಳವನ್ನು ಕಡಿತಗೊಳಿಸಲಾಗಿದೆ ಅಥವಾ ಮುಂದಕ್ಕೆ ಸಾಗಿಸಲಾಗಿದೆ. ನಿಮ್ಮ ಉದ್ಯೋಗ ಹೋಗಿದೆ ಅಥವಾ ವ್ಯವಹಾರ ನಿಂತುಹೋಗಿದೆ. ನೀವೇ ವ್ಯವಹಾರ ಮಾಡಿದರೆ ಮತ್ತು ಲಾಕ್‌ಡೌನ್‌ನಿಂದಾಗಿ ನಿಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ ಅಥವಾ ಕಡಿಮೆ ಮಾಡಲಾಗಿದೆ ಎಂಬ ಪರಿಸ್ಥಿತಿಯಲ್ಲಿ, ನೀವು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು.


ಯಾವ ಸಾಲಗಳು ಇದರಲ್ಲಿ ಶಾಮೀಲಾಗಿವೆ
ಗೃಹ ಸಾಲ, ವಾಹನ ಸಾಲ, ಶಿಕ್ಷಣ  ಸಲ ಇದರ ವ್ಯಾಪ್ತಿಗೆ ಬರಲಿವೆ. ನೀವು ವೈಯಕ್ತಿಕ ಸಾಲವನ್ನು ತೆಗೆದುಕೊಂಡಿದ್ದರೆ, ಅದು ಸಹ ಅದರ ವ್ಯಾಪ್ತಿಗೆ ಬರುತ್ತದೆ.


ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ಇದಕ್ಕಾಗಿ ನೀವು 24 ಡಿಸೆಂಬರ್ 2020 ರೊಳಗೆ ಅರ್ಜಿ ಸಲ್ಲಿಸಬಹುದು. ಮೊರೆಟೋರಿಯಂ ಅವಧಿಯಲ್ಲಿ ನೀವು ಸಾಲದ ಇಎಂಐ ಪಾವತಿಸಬೇಕಾಗಿಲ್ಲ.