SBI ಗ್ರಾಹಕರಿಗೆ ಸಂತಸದ ಸುದ್ದಿ, ಯಾವುದೇ ಶುಲ್ಕವಿಲ್ಲದೆ ಮನೆಯಲ್ಲಿಯೇ ಸಿಗಲಿವೆ ಈ 8 ಸೇವೆಗಳು

ದೇಶದ ಸಾರ್ವತ್ರಿಕ ವಲಯದ ಅತಿದೊಡ್ಡ ಸರ್ಕಾರಿ ಬ್ಯಾಂಕ್  ಭಾರತೀಯ ಸ್ಟೇಟ್ ಬ್ಯಾಂಕ್(SBI) ತನ್ನ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ ಮೂಲಕ ಅನೇಕ ವಿಶೇಷ ಸೌಲಭ್ಯಗಳನ್ನು ನೀಡುತ್ತದೆ.

  • Sep 05, 2020, 13:59 PM IST

ನವದೆಹಲಿ: ದೇಶದ ಸಾರ್ವತ್ರಿಕ ವಲಯದ ಅತಿದೊಡ್ಡ ಸರ್ಕಾರಿ ಬ್ಯಾಂಕ್  ಭಾರತೀಯ ಸ್ಟೇಟ್ ಬ್ಯಾಂಕ್(SBI) ತನ್ನ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ ಮೂಲಕ ಅನೇಕ ವಿಶೇಷ ಸೌಲಭ್ಯಗಳನ್ನು ನೀಡುತ್ತದೆ. ಖಾತೆ ಬಾಕಿ ಪರಿಶೀಲಿಸುವುದರಿಂದ ಹಿಡಿದು ಹಣವನ್ನು ವರ್ಗಾವಣೆ ಮಾಡುವವರೆಗೆ ಹಲವು ಸೌಲಭ್ಯಗಳಿವೆ. ಇಂದು, ಎಸ್‌ಬಿಐ ನೆಟ್ ಬ್ಯಾಂಕಿಂಗ್ 8 ವಿಶೇಷ ವೈಶಿಷ್ಟ್ಯಗಳ ಬಗ್ಗೆ ನಾವು ನಿಮಗೆ ತಿಳಿಸುತ್ತಿದ್ದೇವೆ. ಬ್ಯಾಂಕ್ ನ ಈ ಸೇವೆಗಳನ್ನು ನೀವು ಮನೆಯಿಂದಲೇ ಪಡೆಯಬಹುದು.

1 /6

ಗ್ರಾಹಕರು ತಮ್ಮ ವೈಯಕ್ತಿಕ ಬ್ಯಾಂಕಿಂಗ್‌ಗೆ ಸಂಬಂಧಿಸಿದ 8 ಕೆಲಸಗಳನ್ನು ಮನೆಯಿಂದಲೇ ಮಾಡಬಹುದು ಎಂದು ಎಸ್‌ಬಿಐ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದೆ. ಇದಕ್ಕಾಗಿ, ಅವರು ಎಲ್ಲಿಯೂ ಹೋಗಬೇಕಾಗಿಲ್ಲ, ಆದರೆ ಮನೆಯಲ್ಲಿ ಬ್ಯಾಂಕಿಂಗ್ ಮಾಡಲು, ನೀವು ನೆಟ್ ಬ್ಯಾಂಕಿಂಗ್ ಐಡಿ ಪಾಸ್ವರ್ಡ್ ಹೊಂದಿರುವುದು ಕಡ್ಡಾಯವಾಗಿದೆ ಎಂದು ಬ್ಯಾಂಕ್ ಹೇಳಿದೆ.

2 /6

ಗ್ರಾಹಕ ಫಂಡ್ ವರ್ಗಾವಣೆ, ಎಟಿಎಂ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ, ಚೆಕ್ ಬುಕ್‌ಗಾಗಿ ಅರ್ಜಿ ಸಲ್ಲಿಸಿ, ಯುಪಿಐ ಪಿನ್ ಅನ್ನು ಸಕ್ರಿಯಗೊಳಿಸಿ-ನಿಷ್ಕ್ರಿಯಗೊಳಿಸಿ, ಆನ್‌ಲೈನ್‌ನಲ್ಲಿ ಪೇ-ಟ್ಯಾಕ್ಸ್, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಿ, ಬಿಲ್ ಪಾವತಿಗಳು, ಖಾತೆಗಳನ್ನು ತೆರೆಯುವುದು ಹಾಗೂ ನಿರ್ವಹಿಸುವುದು ಈ 8 ಕೆಲಸಗಳನ್ನು ನೀವು ನೆಟ್ ಬ್ಯಾಂಕಿಂಗ್ ಮೂಲಕ ಮನೆಯಲ್ಲಿಯೇ ಕುಳಿತು ಮಾಡಬಹುದು.

3 /6

ಇದಕ್ಕಾಗಿ ಮೊದಲು ಭಾರತೀಯ ಸ್ಟೇಟ್ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಆಗಿರುವ  www.onlinesbi.com ಗೆ ಭೇಟಿ ನೀಡಿ. ಹೋಮ್ ಪೇಜ್ ತೆರೆದುಕೊಳ್ಳುತ್ತಿದ್ದಂತೆ PERSONAL BANKING ನಲ್ಲಿರುವ  New User Registration ಮೇಲೆ ಕ್ಲಿಕ್ಕ ಮಾಡಿ.

4 /6

ಇದೀಗ ನಿಮ್ಮ ಮುಂದೆ ಒಂದು ಪಾಪ್-ಅಪ್ ತೆರೆದುಕೊಳ್ಳಲಿದೆ. ಇದರಲ್ಲಿ ನಿಮಗೆ ಬ್ಯಾಂಕ್ ಮೂಲಕ ಇಂಟರ್ನೆಟ್ ಬ್ಯಾಂಕಿಂಗ್ ಗಾಗಿ ಪ್ರೀ-ಪ್ರಿಂಟೆಡ್ ಕಿಟ್ ಲಭಿಸಿದೆಯೇ ಅಥವಾ ಇಲ್ಲವೇ ಎಂದು ಕೇಳಲಾಗುತ್ತದೆ. ಲಭಿಸಿದ್ದರೆ ಮುಂದುವರೆಯದಂತೆ ಹೇಳಲಾಗುತ್ತದೆ.  ಒಂದು ವೇಳೆ ಲಭಿಸಿಲ್ಲ ಎಂದಾದಲ್ಲಿ OK ಮೇಲೆ ಕ್ಲಿಕ್ಕಿಸಿ. ಈಗ ನಿಮ್ಮ ಮುಂದೆ New User Register ಪುಟ ತೆರೆದುಕೊಳ್ಳಲಿದ್ದು, ಬಳಿಕ ನೆಕ್ಸ್ಟ್ ಮೇಲೆ ಕ್ಲಿಕ್ಕಿಸಿ.

5 /6

ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ ನಿಮಗೆ ನಿಮ್ಮ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಲು ಹೇಳಲಾಗುವುದು. ಇದರಲ್ಲಿ ನೀವು ಬ್ಯಾಂಕ್ ಖಾತೆ ಸಂಖ್ಯೆ, CIF ಸಂಖ್ಯೆ, ಬ್ರಾಂಚ್ ಕೋಡ್, ಕಂಟ್ರಿ, ಬ್ಯಾಂಕ್ ಅಕೌಂಟ್ ಜೊತೆಗೆ ಬ್ಯಾಂಕ್ ನೊಂದಿಗೆ ನೊಂದಯಿಸಲಾಗಿರುವ ನಿಮ್ಮ ಅಧಿಕೃತ ಮೊಬೈಲ್ ಸಂಖೆಯ ಮಾಹಿತಿ ನೀಡಬೇಕು. ಬಳಿಕ Facility Required ಸೆಕ್ಷನ್ ಗೆ ಭೇಟಿ ನೀಡಿ ಅಲ್ಲಿ ನೀಡಲಾಗಿರುವ ಮೂರು ರೀತಿಯ ಟ್ರಾನ್ಸ್ಯಾಕ್ಶನ್ ಆಪ್ಶನ್ ಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ Submit ಬಟನ್ ಮೇಲೆ ಕ್ಲಿಕ್ಕಿಸಬೇಕು.

6 /6

ಈಗ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ವರ್ಡ್ (OTP) ಬರಲಿದೆ. ಅದನ್ನು ಕೇಳಿದ ಜಾಗದಲ್ಲಿ ನಮೂದಿಸಿ. ಈಗ ನೀವು ನಿಮ್ಮ ಯುಸರ್ ಐಡಿ ಹಾಗೂ ಪಾಸ್ವರ್ಡ್ ನಿರ್ಧರಿಸಬೇಕು. ಯಶಸ್ವಿಯಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ನೀವು SBIನ ನೆಟ್ ಬ್ಯಾಂಕಿಂಗ್ ಸೇವೆಯ ಲಾಭ ಪಡೆಯಬಹುದಾಗಿದೆ.