ನವದೆಹಲಿ: ಆದಾಯ ತೆರಿಗೆ ಇಲಾಖೆಯ ನಿಯಮಗಳ ಅನುಸಾರ ಒಂದು ವೇಳೆ ಕಳೆದ ಮೂರುವರ್ಷಗಳಲ್ಲಿ ನೀವು ಆದಾಯ ತೆರಿಗೆ ರಿಟರ್ನ್ ಪಾವತಿಸದೆ ಹೋಗಿದ್ದಲ್ಲಿ, 20 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಕ್ಯಾಶ್ ವಿಥ್ ಡ್ರಾ ಮೇಲೆ ಆದಾಯ ತೆರಿಗೆ ಸೆಕ್ಷನ್ 194 ಎನ್ ಅಡಿ TDS ಕಡಿತಗೊಳಿಸಲಾಗುತ್ತದೆ. ಹೀಗಾಗಿ ಸದ್ಯ ಭಾರತೀಯ ಸ್ಟೇಟ್ ಬ್ಯಾಂಕ್ ಒಟ್ಟು ಮೂರು ನಿಯಮಗಳ ಕುರಿತು ಮಾಹಿತಿ ನೀಡಿದ್ದು. ಈ ನಿಯಮಗಳ ಅಡಿ ವರ್ಷದಲ್ಲಿ 20 ಲಕ್ಷ ಕ್ಕೂ ಅಧಿಕ ಹಣ ವಿಥ್ ಡ್ರಾ ಮಾಡಿದಾಗಲೂ ಕೂಡ ನೀವು TDS ಪಾವತಿಸುವ ಅಗತ್ಯವಿಲ್ಲ. ಹಾಗಾದರೆ ಆ ನಿಯಮಗಳು ಯಾವವು ಎಂಬುದನ್ನೊಮ್ಮೆ ತಿಳಿಯೋಣ.


COMMERCIAL BREAK
SCROLL TO CONTINUE READING

ಈ ವಿಷಯಗಳ ಬಗ್ಗೆ ಜಾಗ್ರತೆ ವಹಿಸಿ, TDS ಕಡಿತವಾಗುವುದಿಲ್ಲ
ಒಂದು ವರ್ಷದಲ್ಲಿ 20 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯುವ ಗ್ರಾಹಕರು ತಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಬ್ಯಾಂಕಿನಲ್ಲಿ ಸಲ್ಲಿಸಬೇಕು. ಪ್ಯಾನ್ ಇಲ್ಲದಿದ್ದರೆ, ನಿಮ್ಮ ಹೆಚ್ಚಿನ ಟಿಡಿಎಸ್ ಅನ್ನು ಕಡಿತಗೊಳಿಸಬಹುದು. ನಿಮ್ಮ ಆದಾಯ ತೆರಿಗೆ ರಿಟರ್ನ್‌ನ ಪ್ರತಿಯನ್ನು ಬ್ಯಾಂಕಿಗೆ ಸಲ್ಲಿಸಿ.


ಕಳೆದ ಮೂರು ವರ್ಷಗಳಿಂದ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದಲ್ಲಿ ಈ ತೆರಿಗೆ ದರಗಳು ಜುಲೈ 1, 2020 ರಿಂದ ಅನ್ವಯವಾಗುತ್ತವೆ
20 ಲಕ್ಷದವರೆಗೆ ಹಣವನ್ನು ಹಿಂಪಡೆಯಲು ನೀವು ನಿಮ್ಮ CIF ಖಾತೆಯಲ್ಲಿ ಪ್ಯಾನ್ ವಿವರಗಳನ್ನು ನೀಡಿದ್ದರೆ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ. ಒಂದು ವೇಳೆ ನೀವು CIF ಖಾತೆಯಿಂದ 20 ಲಕ್ಷದಿಂದ ಒಂದು ಕೋಟಿ ರೂಪಾಯಿಗೆ ಮೊತ್ತವನ್ನು ಹಿಂಪಡೆದಿದ್ದು ಮತ್ತು ಪ್ಯಾನ್ ಕಾರ್ಡ್ ವಿವರ ಸಲ್ಲಿಸಿದ್ದರೆ ನಿಮಗೆ ಕೇವಲ ಶೇ.2 ರಷ್ಟು ಮತ್ತು ಒಂದು ವೇಳೆ ಪ್ಯಾನ್ ವಿವರ ನೀಡದೆ ಸಂದರ್ಭದಲ್ಲಿ ಶೇ.20 ಟಿಡಿಎಸ್ ಕಡಿತಗೊಳಿಸಲಾಗುತ್ತದೆ.


ಒಂದು ಕೋಟಿ ರೂ.ಗಿಂತ ಹೆಚ್ಚಿನ ವಿಥ್ ಡ್ರಾಗೆ ಎಷ್ಟು TDS ಕಡಿತಗೊಳ್ಳುತ್ತದೆ?
ಒಂಚು ವೇಳೆ ನೀವು ಒಂದು ಕೋಟಿ ರೂ.ಗಿಂತ ಹೆಚ್ಚನ ಮೌಲ್ಯ ಹಿಂಪಡೆದಿದ್ದು ಹಾಗೂ ಪ್ಯಾನ್ ಕಾರ್ದ್ಹ್ ಮಾಹಿತಿ ನೀಡಿದ್ದಾರೆ ಶೇ.5ರಷ್ಟು TDS ಕಡಿತಗೊಳ್ಳುತ್ತದೆ. ಇನ್ನೊಂದೆಡೆ ಪ್ಯಾನ್ ಕಾರ್ಡ್ ಮಾಹಿತಿ ನೀಡದೆ ಹೋದ ಸಂದರ್ಭದಲ್ಲಿ ಶೇ.20ರಷ್ಟು TDS ಕಡಿತಗೊಳಿಸಲಾಗುತ್ತದೆ.


CIF ನಲ್ಲಿ ಗ್ರಾಹಕರ ಮಾಹಿತಿ ಸುರಕ್ಷಿತವಾಗಿರುತ್ತದೆ
CIF (ಗ್ರಾಹಕ ಮಾಹಿತಿ ಫೈಲ್) ಒಂದು ಬಹುಮುಖ್ಯವಾದ ಫೈಲ್ ಆಗಿದ್ದು, ಇದರ ಸಹಾಯದಿಂದ ಬ್ಯಾಂಕ್ ಖಾತೆಯನ್ನು ಟ್ರ್ಯಾಕ್ ಮಾಡಲಾಗುತ್ತದೆ ಅಥವಾ ಹುಡುಕಲಾಗುತ್ತದೆ. ನಾವು ಸರಳ ಭಾಷೆಯಲ್ಲಿ ಅರ್ಥಮಾಡಿಕೊಂಡರೆ, ಯಾವುದೇ ಗ್ರಾಹಕರ ಸಂಪೂರ್ಣ ಮಾಹಿತಿ ಬ್ಯಾಂಕ್ ನ ಸಿಐಎಫ್ ಫೈಲ್ ನಲ್ಲಿ ಇರಿಸಲಾಗುತ್ತದೆ.


ಈ ಕೆಲಸಕ್ಕೆ ಬಳಸಲಾಗುತ್ತದೆ CIF
ಸಿಐಎಫ್ (ಗ್ರಾಹಕ ಮಾಹಿತಿ ಫೈಲ್) ನಲ್ಲಿರುವ ಮಾಹಿತಿಯ ಸಹಾಯದಿಂದ, ಬ್ಯಾಂಕಿನ ನೌಕರರು ವ್ಯಕ್ತಿಯ ಖಾತೆಯ ಎಲ್ಲಾ ವಹಿವಾಟುಗಳನ್ನು ಮತ್ತು ಕೆಲಸವನ್ನು ಪೂರ್ಣಗೊಳಿಸುತ್ತಾರೆ. ನಿಮ್ಮ ಬ್ಯಾಂಕ್ ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸುವಾಗಲೂ ಕೂಡ ಕೆಲವೊಮ್ಮೆ ಸಿಐಎಫ್ ಸಂಖ್ಯೆ ಅಗತ್ಯವಾಗಿರುತ್ತದೆ.