SBI ಗ್ರಾಹಕರಿಗೊಂದು ಮಹತ್ವದ ಮಾಹಿತಿ : ತಪ್ಪದೇ ಈ 3 ಕೆಲಸಗಳನ್ನ ಮಾಡಿ
ಕೆವೈಸಿ ಹೆಸರಿನಲ್ಲಿ ವಂಚನೆ ಮಾಡುವ ಬಗ್ಗೆ ಎಸ್‌ಬಿಐ ಎಚ್ಚರಿಕೆ
ನವದೆಹಲಿ : ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಗ್ರಾಹಕರಾಗಿದ್ದರೆ, ಈ ಸುದ್ದಿ ನಿಮ್ಗೆ ಮುಖ್ಯ ಮಾಹಿತಿಯಾಗುತ್ತೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 44 ಕೋಟಿ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನ ರವಾನಿಸಿದೆ. ಕೆವೈಸಿ ಹೆಸರಿನಲ್ಲಿ ವಂಚನೆ ಮಾಡುವ ಬಗ್ಗೆ ಎಸ್‌ಬಿಐ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಬ್ಯಾಂಕ್ ಟ್ವಿಟರ್ ಮೂಲಕ ತನ್ನ ಗ್ರಾಹಕರನ್ನ ಕೇಳಿದೆ. ಇನ್ನು ಕೆವೈಸಿ ಪರಿಶೀಲನೆಯ ಹೆಸರಿನಲ್ಲಿ ವಂಚಕರು ಜನರನ್ನ ಮೋಸ ಮಾಡುತ್ತಿದ್ದಾರೆ ಎಂದು ಬ್ಯಾಂಕ್ ತನ್ನ ಪೋಸ್ಟ್ ಮೂಲಕ ತಿಳಿಸಿದೆ. ಇನ್ನು ಎಲ್ಲಾ ಎಸ್‌ಬಿಐ ಗ್ರಾಹಕರು(SBI Customers) ಜೂನ್ 30 ರೊಳಗೆ ಕೆವೈಸಿ ಮಾಡುವುದು ಕಡ್ಡಾಯವಾಗಿದ್ದು, ಪೂರ್ಣಗೊಳಿಸದವರ ಬ್ಯಾಂಕ್ ಖಾತೆ ಅಮಾನತುಗೊಳ್ಳಬೋದು.
Corona 3rd Wave : 2 ರಿಂದ 4 ವಾರದ ಒಳಗಡೆ ಕೊರೋನಾ 3ನೇ ಅಲೆ : ತಜ್ಞರ ಎಚ್ಚರಿಕೆ
ಎಸ್‌ಬಿಐ(State Bank of India) ಏನು ಹೇಳಿದೆ? ಬ್ಯಾಂಕ್ ಪ್ರಕಾರ, ವಂಚಕರು ನಿಮ್ಮ ವೈಯಕ್ತಿಕ ವಿವರಗಳನ್ನ ಸಂಗ್ರಹಿಸಲು ಬ್ಯಾಂಕ್ / ಕಂಪನಿಯ ಪ್ರತಿನಿಧಿಯಾಗಿ ನಟಿಸುತ್ತಾರೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಲಾಗುತ್ತದೆ. ಗ್ರಾಹಕರು ಈ ಸಂದೇಶಕ್ಕೆ ಬಲಿಯಾಗಬಾರದು ಮತ್ತು ಕೆವೈಸಿಗಾಗಿ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಒಂದ್ವೇಳೆ ಗ್ರಾಹಕರು ಮೋಸ ಹೋಗಿದ್ದಲ್ಲಿ ತಕ್ಷಣವೇ ಅದರ ಬಗ್ಗೆ ಸೈಬರ್ ಅಪರಾಧಕ್ಕೆ ತಿಳಿಸಿ ಎಂದಿದೆ.
ಇದನ್ನೂ ಓದಿ : ದೈನಂದಿನ ಡೇಟಾ ಲಿಮಿಟ್ ಇಲ್ಲ, ಜಿಯೋಗೆ ಟಕ್ಕರ್ ನೀಡಲು ಹೊಸ ಪ್ಲಾನ್ ಪರಿಚಯಿಸಿದ ಏರ್ಟೆಲ್
ಬ್ಯಾಂಕ್ ತಪ್ಪದೇ ಈ 3 ಕೆಲಸಗಳನ್ನ ಮಾಡುವಂತೆ ಹೇಳಿದೆ!
1. ಯಾವುದೇ ಅಜ್ಞಾತ ಲಿಂಕ್ ಅನ್ನು ಕ್ಲಿಕ್ ಮಾಡುವುದನ್ನ ನಿಲ್ಲಿಸಿ.
2.ಬ್ಯಾಂಕ್ ಎಂದಿಗೂ ಕೆವೈಸಿ ನವೀಕರಣ(KYC Update)ಕ್ಕಾಗಿ ಲಿಂಕ್ ಕಳುಹಿಸುವುದಿಲ್ಲ.
3. ನಿಮ್ಮ ಮೊಬೈಲ್ ಮತ್ತು ವೈಯಕ್ತಿಕ ಮಾಹಿತಿಯನ್ನ ಯಾರೊಂದಿಗೂ ಹಂಚಿಕೊಳ್ಳಬೇಡಿ.
ಇದನ್ನೂ ಓದಿ : petrol price today: ಏರುಗತಿಯಲ್ಲಿ ಪೆಟ್ರೋಲ್, 21 ಜಿಲ್ಲೆಗಳಲ್ಲಿ ಬೆಲೆ 99.99/ಲೀಟರ್
ಮನೆಯಲ್ಲಿ ಕುಳಿತು KYC ನವೀಕರಿಸಿ!
ವಿಶೇಷವೆಂದರೆ, ಕೊರೋನಾ(Corona)ದ ಮಧ್ಯೆ, ಎಸ್‌ಬಿಐ ತನ್ನ ಖಾತೆದಾರರಿಗೆ ಕೆವೈಸಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸುವ ಸೌಲಭ್ಯವನ್ನು ನೀಡಿದೆ. ಕೆವೈಸಿ ಅಪ್‌ಡೇಟ್‌ಗಾಗಿ, ಗ್ರಾಹಕರು ತಮ್ಮ ವಿಳಾಸ ಪುರಾವೆ ಮತ್ತು ಗುರುತಿನ ಚೀಟಿಯನ್ನು ನೋಂದಾಯಿತ ಇಮೇಲ್ ಅಥವಾ ಪೋಸ್ಟ್ ಮೂಲಕ ಕಳುಹಿಸಬೇಕಾಗುತ್ತದೆ.ನೀವು ನಿಮ್ಮ ಡಾಕ್ಯುಮೆಂಟ್‌ಗಳನ್ನ ಅದೇ ಮೇಲ್ ಐಡಿಯಿಂದ ಕಳುಹಿಸುತ್ತೀರಿ, ಅದನ್ನು ನೀವು ಬ್ಯಾಂಕಿನಲ್ಲಿ ನವೀಕರಿಸಿದ್ದೀರಿ. ಆ ಇಮೇಲ್‌ನಿಂದ, ದಾಖಲೆಗಳ ಸ್ಕ್ಯಾನ್ ಮಾಡಿದ ನಕಲನ್ನ ಬ್ಯಾಂಕ್ ಶಾಖೆಯ ಇಮೇಲ್ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.
ಇದನ್ನೂ ಓದಿ : ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.