petrol price today: ಏರುಗತಿಯಲ್ಲಿ ಪೆಟ್ರೋಲ್, 21 ಜಿಲ್ಲೆಗಳಲ್ಲಿ ಬೆಲೆ 99.99/ಲೀಟರ್

petrol price today : 21 ಜಿಲ್ಲೆಗಳಲ್ಲಿ ಪೆಟ್ರೋಲ್ ನಾಗಾಲೋಟದಲ್ಲಿದೆ. ಧಾರಣೆ ಸತತ  ಏರುಗತಿಯಲ್ಲಿದೆ. ಬಾಗಲಕೋಟೆ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಬಿಜಾಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ್, ಹಾಸನ, ಹಾವೇರಿ, ಕೊಡಗು, ಕೊಪ್ಪಳ, ಮಂಡ್ಯ, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪೆಟ್ರೋಲ್/ಲೀಟರ್ 99.99 ರೂಪಾಯಿ ದಾಖಲಾಗಿದೆ.

Written by - Ranjitha R K | Last Updated : Jun 18, 2021, 08:56 AM IST
  • 21 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ನಾಗಾಲೋಟದಲ್ಲಿದೆ
  • ಒಟ್ಟಾರೆ ಎಲ್ಲಾ ಜಿಲ್ಲೆಗಳಲ್ಲೂ ಪೆಟ್ರೋಲಿಗೆ 99.99/ಲೀಟರ್ ನೀಡಬೇಕಾಗಿದೆ
  • ಡೀಸೆಲ್ ಬೆಲೆ ಕೂಡಾ ಏರುಗತಿಯಲ್ಲೇ ಇದೆ
petrol price today: ಏರುಗತಿಯಲ್ಲಿ ಪೆಟ್ರೋಲ್, 21 ಜಿಲ್ಲೆಗಳಲ್ಲಿ ಬೆಲೆ 99.99/ಲೀಟರ್ title=
21 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ನಾಗಾಲೋಟದಲ್ಲಿದೆ (file photo)

ಬೆಂಗಳೂರು : 21 ಜಿಲ್ಲೆಗಳಲ್ಲಿ ಪೆಟ್ರೋಲ್ ನಾಗಾಲೋಟದಲ್ಲಿದೆ (petrol price today). ಧಾರಣೆ ಸತತ  ಏರುಗತಿಯಲ್ಲಿದೆ. ಬಾಗಲಕೋಟೆ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಬಿಜಾಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ್, ಹಾಸನ, ಹಾವೇರಿ, ಕೊಡಗು, ಕೊಪ್ಪಳ, ಮಂಡ್ಯ, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪೆಟ್ರೋಲ್/ಲೀಟರ್ 99.99 ರೂಪಾಯಿ ದಾಖಲಾಗಿದೆ. 

ಬೆಂಗಳೂರು ಗ್ರಾಮಾಂತರ 99.83/ಲೀಟರ್, ದಕ್ಷಿಣ ಕನ್ನಡ 99.63/ಲೀಟರ್, ಧಾರವಾಡ 99.98/ಲೀಟರ್,  ಗುಲ್ಬರ್ಗಾ 99.92 / ಲೀಟರ್, ಕೋಲಾರ 99.88/ಲೀಟರ್,  ಮೈಸೂರು 99.73/ಲೀಟರ್, ಉಡುಪಿ 99.46/ಲೀಟರ್ ದರ (Petrol price) ದಾಖಲಾಗಿದೆ. ಅಂದರೆ ಈ ಜಿಲ್ಲೆಗಳಲ್ಲಿ ಕೂಡಾ ಪೆಟ್ರೋಲ್ ಬೆಲೆ ನೂರು ರೂಪಾಯಿ ಸನಿಹದಲ್ಲಿಯೇ ಇದೆ. ಕೆಲವೊಂದು ಪೈಸೆಗಳ ವ್ಯತ್ಯಾಸ  ಇದೆ ಅಷ್ಟೇ. ಗ್ರಾಹಕರು ನೂರು ರೂಪಾಯಿ ಕೊಟ್ಟೆ ಪೆಟ್ರೋಲ್ ಖರೀದಿಸಬೇಕಾಗಿದೆ. 

ಇದನ್ನೂ ಓದಿ : Indian Currency: ನಿಮ್ಮ ಬಳಿಯೂ ಈ ರೀತಿಯ 10 ರೂ. ನೋಟು ಇದ್ದರೆ, 25,000 ರೂ. ಗಳಿಸುವ ಅವಕಾಶ

ಡೀಸೆಲ್ ಕೂಡಾ ಏರುಗತಿಯಲ್ಲಿ..!
ರಾಜ್ಯದಲ್ಲಿ ಡೀಸೆಲ್ ಬೆಲೆ (Diesel rate) ಕೂಡಾ ಏರುತ್ತಲೇ ಇದೆ. ಡೀಸೆಲ್ ಬೆಲೆ ಬಾಗಲಕೋಟೆಯಲ್ಲಿ 93.63/ಲೀಟರ್, ಬೆಂಗಳೂರಿನಲ್ಲಿ 92.97/ಲೀಟರ್, ಬೆಂಗಳೂರು ಗ್ರಾಮಾಂತರ 92.66/ಲೀಟರ್, ಬೆಳಗಾವಿ 93.45/ಲೀಟರ್,  ದಕ್ಷಿಣ ಕನ್ನಡ 92.44/ಲೀಟರ್,  ದಾವಣಗೆರೆ 94.39/ಲೀಟರ್, ಧಾರವಾಡ 92.82/ಲೀಟರ್, ಹಾಸನ 92.71/ಲೀಟರ್, ಗುಲ್ಬರ್ಗಾ 92.76/ಲೀಟರ್, ಮೈಸೂರು 92.57/ಲೀಟರ್, ರಾಮನಗರ 93.37/ಲೀಟರ್, ಉಡುಪಿ 92.29 ರೂಪಾಯಿ ದಾಖಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ನಡುವೆ ಕೇವಲ 7 ರಿಂದ 9 ರೂಪಾಯಿ ವ್ಯತ್ಯಾಸ ಅಷ್ಟೇ ದಾಖಲಾಗಿದೆ. 

ಸತತ ಬೆಲೆ ಏರಿಕೆಯಿಂದ ವಾಹನ ಸವಾರರು ಕಂಗಾಲಾಗಿ ಹೋಗಿದ್ದಾರೆ.  ಪೆಟ್ರೋಲ್ ಮತ್ತು ಡೀಸೆಲ್ (Petrol diesel price) ಹೆಚ್ಚು ಕಡಿಮೆ ಒಂದೇ ವೇಗದಲ್ಲಿ ಮೇಲಕ್ಕೇರುತ್ತಿದೆ. ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ (petrol price today) ನೂರನ್ನು ದಾಟಿದೆ. ಕೆಲವು ಕಡೆ ಡೀಸೆಲ್ ದರ ಕೂಡಾ ನೂರರ ಅಸುಪಾಸಿನಲ್ಲಿದೆ. ರಾಜಸ್ತಾನದ ಶ್ರೀಗಂಗಾ ನಗರದಲ್ಲಿ ಪೆಟ್ರೋಲ್ ಬೆಲೆ 106 ರೂಪಾಯಿ ಅಜೂಬಾಜಿನಲ್ಲಿದೆ. ದೇಶದ ಇತರ ಮಹಾನಗರಗಳಲ್ಲಿಯೂ ಪೆಟ್ರೊಲ್ ಬೆಲೆ ನೂರರ ಗಡಿ ದಾಟಿದೆ.  

ಇದನ್ನೂ ಓದಿ : LPG Cylinder Offer: ಜೂನ್ 30 ರ ಮೊದಲು ಬುಕಿಂಗ್ ಮಾಡಿ ಕೇವಲ 10 ರೂ.ಗೆ ಸಿಲಿಂಡರ್‌ ಖರೀದಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News