ಲಾಕ್ಡೌನ್ ನಡುವೆ ಪೋಷಕರಿಗೆ ಹೊರೆಯಾದ ಶಾಲಾ ಶುಲ್ಕ
ಲಾಕ್ಡೌನ್ ನಡುವೆ ಶಾಲಾ ಶುಲ್ಕ ಹೆಚ್ಚಾಗಿರುವುದು ಪೋಷಕರ ಸಮಸ್ಯೆಯನ್ನು ಹೆಚ್ಚಿಸಿದೆ.
ನವದೆಹಲಿ : ಲಾಕ್‌ಡೌನ್ ಮಧ್ಯೆ ದೇಶದ ಅನೇಕ ರಾಜ್ಯಗಳಲ್ಲಿ ಮಕ್ಕಳ ಶಾಲಾ ಶುಲ್ಕ ಹೆಚ್ಚಾಗಿದೆ. ಈ ಕಾರಣದಿಂದಾಗಿ ಲಾಕ್‌ಡೌನ್ ಸಮಯದಲ್ಲಿ ಶುಲ್ಕದಲ್ಲಿ ಸ್ವಲ್ಪ ಪರಿಹಾರಕ್ಕಾಗಿ ಕಾಯುತ್ತಿರುವಾಗ ಪೋಷಕರ ಸಮಸ್ಯೆ ಹೆಚ್ಚಾಗುತ್ತದೆ. ಈಗ ಶಾಲಾ ನಿರ್ವಹಣೆಯ ಈ ಹೆಜ್ಜೆಯನ್ನು ಪೋಷಕರು ವಿರೋಧಿಸಲು ಪ್ರಾರಂಭಿಸಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಮನವಿ:
ಈ ಸಂದರ್ಭದಲ್ಲಿ ಶಾಲಾ ಶುಲ್ಕ ಹೆಚ್ಚಾಗಿರುವುದರ ಕುರಿತು ಬೇಸರ ವ್ಯಕ್ತಪಡಿಸಿರುವ ಪೋಷಕರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಆನ್‌ಲೈನ್ ವಿನಂತಿಗಳನ್ನು ಕಳುಹಿಸುತ್ತಿದ್ದಾರೆ. ಇದರಲ್ಲಿ ಶಾಲೆಗಳು ಮತ್ತೆ ತೆರೆಯುವವರೆಗೆ ಈ ಶೈಕ್ಷಣಿಕ ಅಧಿವೇಶನದ ಶುಲ್ಕವನ್ನು ಹೆಚ್ಚಿಸದಂತೆ ಶಾಲೆಗಳಿಗೆ ಸೂಚಿಸಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.
ಲಾಕ್‍ಡೌನ್ (Lockdown) ಮಧ್ಯೆ ಶುಲ್ಕ ಹೆಚ್ಚಳದ ಬಗ್ಗೆ ಶಾಲೆಯಿಂದ ಮಾಹಿತಿ ಬಂದಿದೆ ಎಂದು ನೋಯ್ಡಾದ ಶಾಲೆಯಲ್ಲಿ ಓದುತ್ತಿರುವ ಮಗುವಿನ ಪೋಷಕರಾದ ಪಿ. ಜೋಶಿ ಹೇಳಿದರು. ಶಾಲಾ ಶುಲ್ಕ ಮತ್ತು ಸಾರಿಗೆಯ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಈ ನಿಟ್ಟಿನಲ್ಲಿ 2020-21ರ ಶೈಕ್ಷಣಿಕ ವರ್ಷದ ವೆಚ್ಚದಲ್ಲಿ ಮಕ್ಕಳ ವಿದ್ಯಾಭ್ಯಾಸವೂ ಬಹಳ ದುಬಾರಿಯಾಗಲಿದೆ ಎಂದು ತಿಳಿಸಿದರು.
ಗುರ್ಗಾಂವ್‌ನ ನಿವಾಸಿಯಾದ ಜಾಗೃತಿ ಶುಕ್ಲಾ ಎಂಬ ಪೋಷಕರು ಮಾತನಾಡಿ ಶಾಲೆಗಳಲ್ಲಿ ಶಿಕ್ಷಕರಿಗೆ ಸಂಬಳವನ್ನು ಪಾವತಿಸಬೇಕೆಂಬ ಕಾಳಜಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಅವರು ಶುಲ್ಕವನ್ನು ಮನ್ನಾ ಮಾಡಲು ಸಾಧ್ಯವಿಲ್ಲ. ಆದರೆ ಕನಿಷ್ಠ ಈ ಕಷ್ಟದ ಸಮಯದಲ್ಲಿ ಶುಲ್ಕ ಹೆಚ್ಚಳವನ್ನು ತಪ್ಪಿಸಬಹುದು ಎಂದರಲ್ಲದೆ ಈ ನಿಟ್ಟಿನಲ್ಲಿ ಸರ್ಕಾರ ಏಕೆ ಯಾವುದೇ ಆದೇಶವನ್ನು ಜಾರಿಗೊಳಿಸುತ್ತಿಲ್ಲ? ಎಂದು ಪ್ರಶ್ನಿಸಿದರು.
ಕೊರೊನಾವೈರಸ್ (Coronavirus) ಅನ್ನು ಎದುರಿಸಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯ ಹಿನ್ನೆಲೆಯಲ್ಲಿ ಮಾರ್ಚ್ ಮಧ್ಯದಲ್ಲಿ ಶಾಲೆಗಳನ್ನು ಮುಚ್ಚಲಾಯಿತು. 21 ದಿನಗಳ ಲಾಕ್‌ಡೌನ್ ಅವಧಿ ಇಂದು ಕೊನೆಗೊಂಡಿತ್ತು, ಆದರೆ ಈಗ ಅದನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಆದಾಗ್ಯೂ ಅನೇಕ ಶಾಲೆಗಳು ಈಗಾಗಲೇ ಆನ್‌ಲೈನ್‌ನಲ್ಲಿ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿವೆ.
ಶುಲ್ಕವನ್ನು ಹೆಚ್ಚಿಸದಂತೆ ರಾಜ್ಯ ಸರ್ಕಾರಗಳು ಈಗಾಗಲೇ ಸೂಚನೆಗಳನ್ನು ನೀಡಿವೆ. ಇದಲ್ಲದೆ ಲಾಕ್‌ಡೌನ್ ಸಮಯದಲ್ಲಿ ಪೋಷಕರಿಗೆ ಶುಲ್ಕ ಪಾವತಿಸುವಂತೆ ಶಾಲೆಗಳು ಒತ್ತಾಯಿಸಬಾರದು ಎಂದು ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಘೋಷಿಸಿವೆ. ದೆಹಲಿ ಸರ್ಕಾರವು ಶುಲ್ಕದಲ್ಲಿ ಯಾವುದೇ ಪರಿಹಾರದ ಬಗ್ಗೆ ಯಾವುದೇ ಸೂಚನೆಗಳನ್ನು ನೀಡಿಲ್ಲ ಮತ್ತು ದೆಹಲಿಯ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳಕ್ಕೆ ಸರ್ಕಾರದ ಶುಲ್ಕ ಹೆಚ್ಚಳ ನಿರ್ವಹಣಾ ಸಮಿತಿಯ ಅನುಮೋದನೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿವೆ.