ದೆಹಲಿಯ ತೀಸ್ ಹಜಾರಿ ಕೋರ್ಟ್ ನಲ್ಲಿ ಪೊಲೀಸ್,ವಕೀಲರ ನಡುವೆ ಘರ್ಷಣೆ, ಕಾರಿಗೆ ಬೆಂಕಿ
ದೆಹಲಿಯ ಟಿಸ್ ಹಜಾರಿ ನ್ಯಾಯಾಲಯದಲ್ಲಿ ಶನಿವಾರ ದೆಹಲಿ ಪೊಲೀಸರು ಮತ್ತು ವಕೀಲರ ನಡುವಿನ ಘರ್ಷಣೆ ವೇಳೆ ಕಾರಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ನವದೆಹಲಿ: ದೆಹಲಿಯ ಟಿಸ್ ಹಜಾರಿ ನ್ಯಾಯಾಲಯದಲ್ಲಿ ಶನಿವಾರ ದೆಹಲಿ ಪೊಲೀಸರು ಮತ್ತು ವಕೀಲರ ನಡುವಿನ ಘರ್ಷಣೆ ವೇಳೆ ಕಾರಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಗಲಾಟೆ ವೇಳೆ ಗುಂಡಿನ ಶಬ್ದಗಳು ಕೇಳಿಬಂದಿದ್ದು, ಘಟನೆ ವೇಳೆ ವಕೀಲರೊಬ್ಬರು ಗಾಯಗೊಂಡಿದ್ದಾರೆ, ಅವರನ್ನು ಸೇಂಟ್ ಸ್ಟೀಫನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಕೆಲವು ವಕೀಲರು ಮತ್ತು ಪೊಲೀಸ್ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದು, ಕೊನೆಗೆ ಅದು ಸಂಘರ್ಷಕ್ಕೆ ತಲುಪಿತು ಎನ್ನಲಾಗಿದೆ.ಮೂರನೇ ಬೆಟಾಲನ್ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ. ಆದಾಗ್ಯೂ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೆ ವೇಳೆ ತೀಸ್ ಹಾಜರಿ ಬಾರ್ ಅಸೋಸಿಯೇಷನ್‌ನ ಅಧಿಕಾರಿ ಜೈ ಬಿಸ್ವಾಲ್ ಮಾತನಾಡಿ, 'ಅವರು ನ್ಯಾಯಾಲಯಕ್ಕೆ ಬರುವಾಗ ಪೊಲೀಸ್ ವಾಹನವು ವಕೀಲರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು. ವಕೀಲರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಅವರನ್ನು ಗೇಲಿಮಾಡಲಾಯಿತು ಮತ್ತು ಆರು ಪೊಲೀಸ್ ಸಿಬ್ಬಂದಿ ಅವರನ್ನು ಹೊಡೆದರು. ಜನರು ಇದನ್ನು ನೋಡಿ ಪೊಲೀಸರನ್ನು ಕರೆದರು' ಎಂದು ಹೇಳಿದ್ದಾರೆ.
ಜೈ ಬಿಸ್ವಾಲ್ ಇನ್ನು ಮುಂದುವರೆದು 'ಎಸ್‌ಎಚ್‌ಒ ಮತ್ತು ಸ್ಥಳೀಯ ಪೊಲೀಸರು ಬಂದರು ಆದರೆ ಒಳಗೆ ಹೋಗಲು ಅವಕಾಶವಿರಲಿಲ್ಲ. ನಾವು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದೇವೆ ಮತ್ತು ಆರು ನ್ಯಾಯಾಧೀಶರೊಂದಿಗೆ ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ ಆದರೆ ಅವರಿಗೆ ಒಳಗೆ ಹೋಗಲು ಸಹ ಅವಕಾಶವಿರಲಿಲ್ಲ'. ಅವರು ಹೊರಡಲು ಪ್ರಾರಂಭಿಸಿದಾಗ, ಪೊಲೀಸರು ಗುಂಡುಗಳನ್ನು ಹಾರಿಸಿದರು' ಎಂದು ಜೈ ಬಿಸ್ವಾಲ್ ಹೇಳಿದರು.