Security Agencies Issue High Alert - ಗಡಿಭಾಗದಲ್ಲಿ ಉಗ್ರರ ಒಗ್ಗೂಡುವಿಕೆ ಹಾಗೂ ಕುಂತಂತ್ರದ ಹಿನ್ನೆಲೆ ದೇಶದ ಭದ್ರತಾ ಸಂಸ್ಥೆಗಳು ಜಮ್ಮು ಕಾಶ್ಮೀರದಲ್ಲಿ  (Jammu-Kashmir) ಉಗ್ರದಾಳಿಯ ಕುರಿತು ಹೈ ಅಲರ್ಟ್ ಜಾರಿಗೊಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು. ರಾಜ್ಯದ ಗುಪ್ತಚರ ಇಲಾಖೆ ಹಾಗೂ ಭದ್ರತಾ ಇಲಾಖೆಗಳ (Security Agencies) ಜೊತೆಗೆ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಈ ದಾಳಿಗಳನ್ನು ವಿಫಲಗೊಳಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಆಗಸ್ಟ್ ಮೂರನೇ ವಾರದಲ್ಲಿ ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ಜೈಶ್-ಎ-ಮೊಹಮ್ಮದ್ (Jaish-E-Mohammad) ಮುಖ್ಯಸ್ಥ ಮಸೂದ್ ಅಜರ್ (Masood Azar) ಮತ್ತು ತಾಲಿಬಾನ್ ನಾಯಕರ (Taliban Leadership) ನಡುವಿನ ಭೇಟಿಯ ಬಗ್ಗೆ ಮಾಹಿತಿ ಪಡೆದ ನಂತರ ಎಲ್ಲಾ ಗುಪ್ತಚರ ಸಂಸ್ಥೆಗಳಿಗೆ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ಈ ಸಭೆಯಲ್ಲಿ, ಜೈಶ್ ಸಂಘಟನೆ ಭಾರತದಲ್ಲಿ ದಾಳಿಗಳನ್ನು ನಡೆಸಲು ತಾಲಿಬಾನ್ ನಾಯಕರ ಸಹಾಯವನ್ನು ಕೋರಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ-Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್


"ನಾವು ಸಾಮಾಜಿಕ ಮಾಧ್ಯಮದಲ್ಲಿ ನಿಗಾ ಇಡುವಂತೆ ಗುಪ್ತಚರ ಸಂಸ್ಥೆಗಳನ್ನು(Intellegence Agencies) ಕೇಳಿದ್ದೇವೆ. ಆಗಸ್ಟ್ 24 ರಂದು ಶ್ರೀನಗರದಲ್ಲಿ ಗ್ರೆನೇಡ್ ದಾಳಿ ನಡೆಸಲು ಸಂಚು ರೂಪಿಸಿರುವ  ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರ ಚಲನವಲನದ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದು, ಸಮನ್ವಯಕ್ಕಾಗಿ ಎಲ್ಲಾ ಏಜೆನ್ಸಿಗಳನ್ನು ಎಚ್ಚರಿಸಲಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.  ಎಲ್ಲಾ ರಾಜ್ಯಗಳು ಭದ್ರತೆಯನ್ನು ಹೆಚ್ಚಿಸಲು ಮತ್ತು ಭಯೋತ್ಪಾದನಾ ನಿಗ್ರಹ ಘಟಕಗಳನ್ನು ಹೆಚ್ಚಿನ ಜಾಗರೂಕತೆ ವಹಿಸಲು ಹೇಳಲಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Pakistan ಚಿತ್ರಣವನ್ನು ಬದಲಾಯಿಸಲು ಪತ್ರಕರ್ತರ ಮೊರೆ ಹೋದ ಪಾಕಿಸ್ತಾನ, ನೀಡಿದೆ ಈ ದೊಡ್ಡ ಜವಾಬ್ದಾರಿ


ಆಗಸ್ಟ್ 15 ರಂದು, ತಾಲಿಬಾನ್ ಕಾಬೂಲ್ ಅನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಬಳಿಕ ಅಲ್ಲಿನ ಯುಎಸ್ ಬೆಂಬಲಿತ ಸರ್ಕಾರ ಪತನಗೊಂಡಿದೆ. ಇದರ ನಂತರ, ಅನೇಕ ದೇಶಗಳು ತಮ್ಮ ನಾಗರಿಕರು ಮತ್ತು ರಾಜತಾಂತ್ರಿಕರನ್ನು ಕಾಬೂಲ್‌ನಿಂದ (Kabul) ಸ್ಥಳಾಂತರಿಸಲು ಆರಂಭಿಸಿವೆ. ದೇಶವನ್ನು ತೊರೆಯಲು ಬಯಸುವ ಸಾವಿರಾರು ಜನರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ಭಾರತವು 'ದೇವಿ ಶಕ್ತಿ' ಮಿಷನ್ (Devi Shakti Mission) ಅಡಿಯಲ್ಲಿ ತನ್ನ ನಾಗರಿಕರೊಂದಿಗೆ ಹಿಂದೂ ಮತ್ತು ಸಿಖ್ ಆಫ್ಘನ್ನರನ್ನು ಸ್ಥಳಾಂತರಿಸುವಲ್ಲಿ ತೊಡಗಿದೆ. ಏತನ್ಮಧ್ಯೆ, ಗುರುವಾರ, ಇಸ್ಲಾಮಿಕ್ ಸ್ಟೇಟ್‌ನ ಖೊರಾಸನ್ ಮಾಡ್ಯೂಲ್ ವಿಮಾನ ನಿಲ್ದಾಣದ ಹೊರಗೆ ಫಿದಾಯೀನ್ (Fidayin Attack) ದಾಳಿಯನ್ನು ನಡೆಸಿದೆ. 13 ಅಮೆರಿಕನ್ ಸೈನಿಕರು ಸೇರಿದಂತೆ ಕನಿಷ್ಠ 170  ಜನರು ಈ ದಾಳಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 


ಇದನ್ನೂ ಓದಿ-Kabul Blast Update: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ಬಗ್ಗೆ ಅಮೇರಿಕ ಎಚ್ಚರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.