Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್

ತಾಲಿಬಾನ್ ಭಯೋತ್ಪಾದಕರು ಕಾಬೂಲ್ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ. ತಾಲಿಬಾನ್‌ನ 313 ಬದ್ರಿ ವಿಶೇಷ ಪಡೆಗಳ ಘಟಕವು ಕಾಬೂಲ್ ವಿಮಾನ ನಿಲ್ದಾಣದ ಮಿಲಿಟರಿ ವಿಭಾಗದಲ್ಲಿ ಪ್ರವೇಶ ಪಡೆದಿದೆ. 

Written by - Yashaswini V | Last Updated : Aug 28, 2021, 07:45 AM IST
  • ತಾಲಿಬಾನ್ ಭಯೋತ್ಪಾದಕರು ಕಾಬೂಲ್ ವಿಮಾನ ನಿಲ್ದಾಣವನ್ನು ಪ್ರವೇಶಿಸಿರುವುದಾಗಿ ಹೇಳಿಕೊಂಡಿದೆ
  • ತಾಲಿಬಾನ್‌ನ 313 ಬದ್ರಿ ವಿಶೇಷ ಪಡೆಗಳ ಘಟಕವು ಕಾಬೂಲ್ ವಿಮಾನ ನಿಲ್ದಾಣದ ಮಿಲಿಟರಿ ವಿಭಾಗದಲ್ಲಿ ಪ್ರವೇಶ ಪಡೆದಿದೆ ಎಂದು ಹೇಳಲಾಗುತ್ತಿದೆ
  • ಏತನ್ಮಧ್ಯೆ, ಕಾಬೂಲ್ ವಿಮಾನ ನಿಲ್ದಾಣದ ಮಿಲಿಟರಿ ಭಾಗದಲ್ಲಿ ಯುಎಸ್ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಪೆಂಟಗನ್ ಪ್ರತಿಪಾದಿಸಿತು
Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್  title=
Taliban takes control of parts of Kabul airport (Image courtesy: sourced/Al Hijrat)

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಲ್ಲಣ ಸೃಷ್ಟಿಸಿರುವ ತಾಲಿಬಾನ್ ಭಯೋತ್ಪಾದಕರು ಕಾಬೂಲ್ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಯುಎಸ್ ಸೈನ್ಯವನ್ನು ಹಿಂತೆಗೆದುಕೊಳ್ಳಲು ಆಗಸ್ಟ್ 31 ರ ಗಡುವು ಮುಂಚಿತವಾಗಿ, ತಾಲಿಬಾನ್ ಶುಕ್ರವಾರ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲವು ಭಾಗಗಳ ಮೇಲೆ ಹಿಡಿತ ಸಾಧಿಸಿದೆ ಎಂದು ಹೇಳಿಕೊಂಡಿದೆ. ತಾಲಿಬಾನ್‌ನ 313 ಬದ್ರಿ ವಿಶೇಷ ಪಡೆಗಳ ಘಟಕವು ಕಾಬೂಲ್ ವಿಮಾನ ನಿಲ್ದಾಣದ ಮಿಲಿಟರಿ ವಿಭಾಗದಲ್ಲಿ ಪ್ರವೇಶ ಪಡೆದಿದೆ ಎಂದು ಹೇಳಲಾಗುತ್ತಿದೆ. 

ಈ ಕುರಿತಂತೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ತಾಲಿಬಾನ್ ವಕ್ತಾರ ಬಿಲಾಲ್ ಕರಿಮಿ, "ಇಂದು, ಕಾಬೂಲ್ ವಿಮಾನ ನಿಲ್ದಾಣದ ಸೇನಾ ಭಾಗದ ಮೂರು ಪ್ರಮುಖ ಸ್ಥಳಗಳನ್ನು ಅಮೆರಿಕನ್ನರು ಸ್ಥಳಾಂತರಿಸಿದ್ದಾರೆ ಮತ್ತು ಇಸ್ಲಾಮಿಕ್ ಎಮಿರೇಟ್‌ನ ನಿಯಂತ್ರಣದಲ್ಲಿದೆ ... ಈಗ, ಒಂದು ಸಣ್ಣ ಭಾಗವು ಅಮೆರಿಕನ್ನರ ಬಳಿ ಉಳಿದಿದೆ" ಎಂದು ತಿಳಿಸಿದ್ದಾರೆ.

Afghanistan, Taliban

ಇದನ್ನೂ ಓದಿ- Kabul Blast Update: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ಬಗ್ಗೆ ಅಮೇರಿಕ ಎಚ್ಚರಿಕೆ

ಗಮನಾರ್ಹವಾಗಿ, ಇಲ್ಲಿಯವರೆಗೆ ಕಾಬೂಲ್ ವಿಮಾನ ನಿಲ್ದಾಣವನ್ನು (Kabul Airport) ಯುಎಸ್ ಸೈನ್ಯವು ಆಕ್ರಮಿಸಿಕೊಂಡಿತ್ತು. ಕಾಬೂಲ್ ವಿಮಾನ ನಿಲ್ದಾಣದ ಮೂಲಕ ಇಡೀ ವಿಶ್ವವನ್ನು ಅಫ್ಘಾನಿಸ್ತಾನಕ್ಕೆ ಸಂಪರ್ಕಿಸಲಾಯಿತು. ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರರಾಷ್ಟ್ರಗಳು ಯುದ್ಧ-ಹಾನಿಗೊಳಗಾದ ದೇಶದಿಂದ ಸ್ಥಳಾಂತರಿಸುವಿಕೆಯನ್ನು ಪೂರ್ಣಗೊಳಿಸಲು ಆಗಸ್ಟ್ 31 ಗಡುವು ವಿಧಿಸಿವೆ.

ಏತನ್ಮಧ್ಯೆ, ಕಾಬೂಲ್ ವಿಮಾನ ನಿಲ್ದಾಣದ ಮಿಲಿಟರಿ ಭಾಗದಲ್ಲಿ ಯುಎಸ್ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಪೆಂಟಗನ್ ಪ್ರತಿಪಾದಿಸಿತು. ತಾಲಿಬಾನ್ (Taliban) ವಿಮಾನ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಲ್ಲ ಎಂದು ಅದು ಭರವಸೆ ನೀಡಿದೆ.

ಇದನ್ನೂ ಓದಿ- Pakistan ಚಿತ್ರಣವನ್ನು ಬದಲಾಯಿಸಲು ಪತ್ರಕರ್ತರ ಮೊರೆ ಹೋದ ಪಾಕಿಸ್ತಾನ, ನೀಡಿದೆ ಈ ದೊಡ್ಡ ಜವಾಬ್ದಾರಿ

ಯುಎಸ್ ಸೆಂಟ್ರಲ್ ಕಮಾಂಡ್‌ನ ಮುಖ್ಯಸ್ಥ ಜನರಲ್ ಫ್ರಾಂಕ್ ಮೆಕೆಂಜಿ  (Frank McKenzie), ಸೈನ್ಯವನ್ನು ಹೆಚ್ಚು ಜಾಗರೂಕರಾಗಿರಲು ಕೇಳಲಾಗಿದೆ ಎಂದು ಹೇಳಿದರು. ಐಸಿಸ್ ಇನ್ನಷ್ಟು ದಾಳಿ ನಡೆಸುವ ಭೀತಿ ಇದೆ. ವಿಮಾನ ನಿಲ್ದಾಣವನ್ನು ಮತ್ತೆ ಟಾರ್ಗೆಟ್ ಮಾಡಬಹುದು. ಆದಾಗ್ಯೂ, ವಿಮಾನ ನಿಲ್ದಾಣವನ್ನು ನಿರ್ವಹಿಸುವ ತಾಲಿಬಾನ್ ಯಾವುದೇ ಅಧಿಕಾರವನ್ನು ಹೊಂದಿಲ್ಲ ಎಂದು ಯುಎಸ್ ಹೇಳಿಕೊಂಡಿದೆ.

ಗಮನಾರ್ಹವಾಗಿ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಕೂಡ ಕಾಬೂಲ್‌ನಲ್ಲಿ ಹೆಚ್ಚಿನ ಸ್ಫೋಟಗಳು ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇನ್ನು ಮುಂದೆ ಈ ಭೂಮಿಯಲ್ಲಿ ವಾಸಿಸಲು ಬಯಸುವುದಿಲ್ಲ ಎಂದು ಅವರು ಹೇಳಿದರು. ಇದಲ್ಲದೇ, ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಶುಕ್ರವಾರ ಯುಎಸ್ ಕಾಬೂಲ್ ವಿಮಾನ ನಿಲ್ದಾಣವನ್ನು ಮತ್ತೆ ಅಫ್ಘಾನ್ ಜನರಿಗೆ ವರ್ಗಾಯಿಸುವುದಾಗಿ ಹೇಳಿದೆ. ನಮ್ಮ ನಿರ್ಗಮನದ ನಂತರ, ನಾವು ಕಾಬೂಲ್ ವಿಮಾನ ನಿಲ್ದಾಣವನ್ನು ಮತ್ತೆ ಅಫ್ಘಾನ್ ಜನರಿಗೆ ವರ್ಗಾಯಿಸುತ್ತೇವೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News