Kabul Blast Update: ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಗುರುವಾರ ಎರಡು ಆತ್ಮಾಹುತಿ ದಾಳಿ ನಡೆದಿದ್ದು ಇದರಲ್ಲಿ 13 ಅಮೆರಿಕನ್ ಸೈನಿಕರು ಸೇರಿದಂತೆ ಒಟ್ಟು 72 ಜನರು ಸಾವನ್ನಪ್ಪಿದ್ದಾರೆ. ಈ ದಾಳಿಯ ನಂತರ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಈ ದುರ್ಘಟನೆ ಕಾರಣರಾದವರನ್ನು ನಾವು ಕ್ಷಮಿಸುವುದಿಲ್ಲ ಮತ್ತು ಈ ದಾಳಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಏತನ್ಮಧ್ಯೆ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಭಯೋತ್ಪಾದಕ ದಾಳಿ ಸಂಭವಿಸಬಹುದು ಎಂದು ಅಮೆರಿಕ ಎಚ್ಚರಿಕೆಯನ್ನು ನೀಡಿದೆ.
ಮತ್ತೊಂದು ಭಯೋತ್ಪಾದಕ ದಾಳಿ ಬಗ್ಗೆ ಅಮೇರಿಕ ಎಚ್ಚರಿಕೆ:
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೆ ಬಾಂಬ್ ದಾಳಿ (Kabul Airport Bomb Blast) ನಡೆಯಬಹುದು ಎಂದು ಅಮೇರಿಕ ಆತಂಕ ವ್ಯಕ್ತಪಡಿಸಿದೆ ಮತ್ತು ಭಯೋತ್ಪಾದಕರು ಶೀಘ್ರದಲ್ಲೇ ಕಾರ್ ಬಾಂಬ್ ಮೂಲಕ ಮತ್ತೊಂದು ಸ್ಫೋಟವನ್ನು ನಡೆಸಬಹುದು ಎಂದು ಎಚ್ಚರಿಸಿದೆ. ಅಮೇರಿಕನ್ ಬ್ರಾಡ್ ಕಾಸ್ಟ್ ಕಂಪನಿಯ ಪ್ರಕಾರ, ಕಾಬೂಲ್ ವಿಮಾನ ನಿಲ್ದಾಣದ ನಾರ್ತ್ ಗೇಟ್ ಅನ್ನು ಕಾರ್ ಬಾಂಬ್ ನಿಂದ ಸ್ಫೋಟಿಸಬಹುದು ಎಂದು ವರದಿಯಾಗಿದೆ. ಗುಪ್ತಚರ ಸಂಸ್ಥೆಗಳಿಂದ ಪಡೆದ ಮಾಹಿತಿಯ ನಂತರ, ಅಮೆರಿಕವು ತನ್ನ ಸೈನಿಕರು ಮತ್ತು ಕಾಬೂಲ್‌ನಲ್ಲಿರುವ ನಾಗರಿಕರಿಗೆ ಈ ಬಗ್ಗೆ ಎಚ್ಚರಿಸಿದೆ.
ಇದನ್ನೂ ಓದಿ - ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈರನ್ನು ಗೃಹ ಬಂಧನದಲ್ಲಿರಿಸಿದ ತಾಲಿಬಾನ್
ಗುರುವಾರ ನಡೆದ ಬಾಂಬ್ ದಾಳಿಯಲ್ಲಿ 72 ಜನರು ಸಾವನ್ನಪ್ಪಿದ್ದಾರೆ:
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಗುರುವಾರ ನಡೆದ ಸರಣಿ ಬಾಂಬ್ ದಾಳಿಯಲ್ಲಿ 72 ಜನರು ಸಾವನ್ನಪ್ಪಿದ್ದಾರೆ ಮತ್ತು 143 ಜನರು ಗಾಯಗೊಂಡಿದ್ದಾರೆ. ಪೆಂಟಗನ್ ಭದ್ರತಾ ಅಧಿಕಾರಿಯ ಪ್ರಕಾರ, ಈ ಭಯೋತ್ಪಾದಕ ದಾಳಿಯಲ್ಲಿ 13 ಅಮೆರಿಕನ್ ಸೈನಿಕರು ಕೂಡ ಹುತಾತ್ಮರಾಗಿದ್ದಾರೆ ಮತ್ತು 18 ಸೈನಿಕರು ಗಾಯಗೊಂಡಿದ್ದಾರೆ. ಕಾಬೂಲ್ ಸ್ಫೋಟದ ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅಮೇರಿಕ ಅಧ್ಯಕ್ಷ ಜೋ ಬಿಡೆನ್ (Joe Biden), ಈ ದಾಳಿಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು. ಇದನ್ನು ನಾವು ಕ್ಷಮಿಸುವುದಿಲ್ಲ. ಈ ಗಾಯವನ್ನು ನಾವು ಮರೆಯುವುದಿಲ್ಲ. ಇದಕ್ಕೆ ಕಾರಣರಾದವರನ್ನು ನಾವು ಹುಡುಕಿ ಹುಡುಕಿ ಬೇಟೆಯಾಡುತ್ತೇವೆ ಮತ್ತು ಈ ಸಾವುಗಳಿಗೆ ಅವರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮೊದಲಿನಿಂದಲೂ, ಈ ಬಾಂಬ್ ಸ್ಫೋಟಗಳ ಹಿಂದೆ ಐಸಿಸ್ ಭಯೋತ್ಪಾದಕ (ISIS Terrorist) ಸಂಘಟನೆ ಇದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ತಡರಾತ್ರಿಯಲ್ಲಿ ಭಯೋತ್ಪಾದಕ ಸಂಘಟನೆ ISIS-K ತನ್ನ ಟೆಲಿಗ್ರಾಂ ಖಾತೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣದ ಮೇಲಿನ ದಾಳಿಯ ಹೊಣೆ ಹೊತ್ತುಕೊಂಡಿದೆ.
ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಸಲೇಹ್ ಟ್ವೀಟ್ :
ಕಾಬೂಲ್ ನಲ್ಲಿ ಎರಡು ಆತ್ಮಾಹುತಿ ಬಾಂಬ್ ದಾಳಿ ನಡೆದ ಒಂದು ದಿನದ ನಂತರ, ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ (Amarullah Saleh) ಹೇಳಿಕೆ ನೀಡಿದ್ದಾರೆ. ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ, ತಾಲಿಬಾನ್ ಮತ್ತು ಹಕ್ಕಾನಿ ಜಾಲದ ಮೂಲ ಐಸಿಸ್ ನಂತಹ ಭಯೋತ್ಪಾದಕ ಸಂಘಟನೆ ಎಂದು ಬರೆದಿದ್ದಾರೆ. ಐಸಿಸ್ ಜೊತೆಗಿನ ಮೈತ್ರಿಯನ್ನು ತಾಲಿಬಾನ್ ನಿರಾಕರಿಸುತ್ತಲೇ ಇರಬಹುದು. ಆದರೆ ಅದಕ್ಕೆ ನಮ್ಮಲ್ಲಿ ಎಲ್ಲ ಪುರಾವೆಗಳಿವೆ. ಪಾಕಿಸ್ತಾನವು ಕ್ವೆಟ್ಟಾ ಶೂರಾದಲ್ಲಿ ಮಾಡುತ್ತಿರುವ ರೀತಿಯಲ್ಲಿಯೇ ತಾಲಿಬಾನ್ ಐಸಿಸ್ ಜೊತೆಗಿನ ಸಂಬಂಧವನ್ನು ನಿರಾಕರಿಸುತ್ತಿದೆ ಎಂದವರು ಹೇಳಿದ್ದಾರೆ.
Every evidence we have in hand shows that IS-K cells have their roots in Talibs & Haqqani network particularly the ones operating in Kabul. Talibs denying links with ISIS is identical/similar to denial of Pak on Quetta Shura. Talibs hv leanred vry well from the master. #Kabul
— Amrullah Saleh (@AmrullahSaleh2) August 27, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ