Sero Survey: ಭಾರತದಲ್ಲಿ COVID-19 ಸೋಂಕಿನ ಅಪಾಯ ಇನ್ನೂ ಕಡಿಮೆಯಾಗಿಲ್ಲ
ಐಸಿಎಂಆರ್ನ ಇತ್ತೀಚಿನ ಸಮೀಕ್ಷೆಯಲ್ಲಿ 10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನಸಂಖ್ಯೆಯ 21% ಕ್ಕಿಂತ ಹೆಚ್ಚು ಜನರು ಈ ಹಿಂದೆ ಕೋವಿಡ್ -19 ಸೋಂಕಿಗೆ ಒಡ್ಡಿಕೊಂಡಿದ್ದಾರೆ ಎಂದು ಕಂಡುಹಿಡಿದಿದೆ.
National Serosurvey: ದೇಶದಲ್ಲಿ ಕರೋನಾದ ಹಾನಿ ಕ್ರಮೇಣ ಕಡಿಮೆಯಾಗುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಪ್ರತಿದಿನ ಇಳಿಕೆ ಕಂಡುಬರುತ್ತಿದೆ. ಏತನ್ಮಧ್ಯೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಇತ್ತೀಚಿನ ರಾಷ್ಟ್ರೀಯ ಸಿರೊ ಸಮೀಕ್ಷೆಯಲ್ಲಿ 10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನಸಂಖ್ಯೆಯ ಶೇಕಡಾ 21 ಕ್ಕಿಂತ ಹೆಚ್ಚು ಜನರು ಈ ಹಿಂದೆ ಕರೋನಾವೈರಸ್ (Coronavirus) ಸೋಂಕು ಹೊಂದಿರುವುದು ಕಂಡುಬಂದಿದೆ. ಜನಸಂಖ್ಯೆಯ ಹೆಚ್ಚಿನ ಭಾಗವು ಇನ್ನೂ ಸೋಂಕಿನ ಅಪಾಯದಲ್ಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಐಸಿಎಂಆರ್ ನ ಮೂರನೇ ರಾಷ್ಟ್ರೀಯ ಸಿರೊ ಸಮೀಕ್ಷೆ (Sero Survey) ಯನ್ನು ಡಿಸೆಂಬರ್ 17 ಮತ್ತು ಜನವರಿ 8 ರ ನಡುವೆ ನಡೆಸಲಾಯಿತು. ಈ ಅವಧಿಯಲ್ಲಿ 18 ವರ್ಷ ಮತ್ತು ಮೇಲ್ಪಟ್ಟ 28,589 ಜನರನ್ನು ಸಮೀಕ್ಷೆ ಮಾಡಲಾಗಿದೆ. ಈ ಪೈಕಿ 21.4 ಪ್ರತಿಶತ ಜನರು ಈ ಹಿಂದೆ ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಅದೇ ಸಮಯದಲ್ಲಿ, 10 ರಿಂದ 17 ವರ್ಷದೊಳಗಿನ 25.3 ಪ್ರತಿಶತ ಮಕ್ಕಳಲ್ಲಿಯೂ ಇದು ದೃಢಪಟ್ಟಿದೆ ಎಂದು ಐಸಿಎಂಆರ್ (ICMR) ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ 19.1 ರಷ್ಟು ಜನಸಂಖ್ಯೆಯಲ್ಲಿ SARS-COV-2 ಇರುವುದಕ್ಕೆ ಪುರಾವೆಗಳಿವೆ ಎಂದು ಭಾರ್ಗವ ಹೇಳಿದರು, ಆದರೆ ನಗರ ಕೊಳೆಗೇರಿಗಳಲ್ಲಿ 31.7 ರಷ್ಟು ಜನಸಂಖ್ಯೆ ಇದೆ. ಸಮೀಕ್ಷೆಯ ಸಮಯದಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಾದವರಲ್ಲಿ 23.4 ಪ್ರತಿಶತದಷ್ಟು ಜನರು ಸಹ ಕೆಲವು ಸಮಯದಲ್ಲಿ ಸೋಂಕಿಗೆ ಒಳಗಾಗಿರುವುದು ಕಂಡು ಬಂದಿದೆ ಎಂದವರು ವಿವರಿಸಿದರು.
ಇದನ್ನೂ ಓದಿ - Corona Vaccine Updates: ಕೊರೊನಾ ವ್ಯಾಕ್ಸಿನ್ ಕುರಿತು ವದಂತಿ ಹಬ್ಬಿಸಿದರೆ ಹುಷಾರ್! ಕೇಂದ್ರದ ವಾರ್ನಿಂಗ್
ಸಮೀಕ್ಷೆಯ ಅವಧಿಯಲ್ಲಿ 7,171 ಆರೋಗ್ಯ ಕಾರ್ಯಕರ್ತರ ರಕ್ತದ ಮಾದರಿಗಳನ್ನು ಸಹ ತೆಗೆದುಕೊಳ್ಳಲಾಗಿದೆ ಮತ್ತು ಈ ಪೈಕಿ 25.7 ರಷ್ಟು ಜನರು ಸೋಂಕಿನ ಹಿಡಿತದಲ್ಲಿರುವುದು ಖಚಿತವಾಗಿದೆ. ಮೊದಲ ಮತ್ತು ಎರಡನೆಯ ರಾಷ್ಟ್ರೀಯ ಸಿರೊ ಸಮೀಕ್ಷೆಯ ಸಮಯದಲ್ಲಿ, 70 ರಾಜ್ಯಗಳ 700 ಹಳ್ಳಿಗಳು ಅಥವಾ ವಾರ್ಡ್‌ಗಳನ್ನು ಆಯ್ಕೆ ಮಾಡಿದ 21 ರಾಜ್ಯಗಳಲ್ಲಿ, ಮೂರನೇ ಸಮೀಕ್ಷೆಯನ್ನು ಅದೇ ಸ್ಥಳಗಳಲ್ಲಿ ನಡೆಸಲಾಯಿತು ಎಂದು ಭಾರ್ಗವ ತಿಳಿಸಿದ್ದಾರೆ.
ಕರೋನಾವೈರಸ್ ಸ್ಥಿತಿಯ ಬಗ್ಗೆ ಆರೋಗ್ಯ ಸಚಿವಾಲಯವು ದೇಶದಲ್ಲಿ ಕರೋನಾವೈರಸ್ (Coronavirus) ಸೋಂಕಿನ ಪ್ರಮಾಣವು ಶೇಕಡಾ 5.42 ರಷ್ಟಿದೆ ಮತ್ತು ಅದು ಕಡಿಮೆಯಾಗುತ್ತಿದೆ. ಕಳೆದ ಮೂರು ವಾರಗಳಲ್ಲಿ 47 ಜಿಲ್ಲೆಗಳಲ್ಲಿ ಒಂದೇ ಒಂದು ಹೊಸ ಸೋಂಕಿನ ಪ್ರಕರಣವೂ ವರದಿಯಾಗಿಲ್ಲ ಮತ್ತು 251 ಜಿಲ್ಲೆಗಳಲ್ಲಿ ಒಬ್ಬ ಕೋವಿಡ್ -19 ರೋಗಿಯೂ ಸಾವನ್ನಪ್ಪಿಲ್ಲ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ - ಎರಡನೇ ಹಂತದಲ್ಲಿ Corona Vaccine ಪಡೆಯಲಿರುವ ಪ್ರಧಾನಿ ಮೋದಿ
ದೇಶದಲ್ಲಿ ಈವರೆಗೆ 1,239 ಖಾಸಗಿ ಸಂಸ್ಥೆಗಳು ಮತ್ತು 5,912 ಸಾರ್ವಜನಿಕ ಸಂಸ್ಥೆಗಳನ್ನು ಕೋವಿಡ್ -19 ವಿರೋಧಿ ಲಸಿಕೆಗಾಗಿ ಬಳಸಲಾಗುತ್ತಿದೆ. ಗುರುವಾರ ತನಕ 45,93,427 ಜನರಿಗೆ ಕೋವಿಡ್ -19 ಲಸಿಕೆ (Covid 19 Vaccine) ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.