Corona Vaccine Updates: ಕೊರೊನಾ ವ್ಯಾಕ್ಸಿನ್ ಕುರಿತು ವದಂತಿ ಹಬ್ಬಿಸಿದರೆ ಹುಷಾರ್! ಕೇಂದ್ರದ ವಾರ್ನಿಂಗ್

Covid-19 Vaccine: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ, ರಾಜ್ಯಗಳು ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಪ್ರಕಾರ, ಕರೋನಾ ವ್ಯಾಕ್ಸಿನೇಷನ್ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವ ಜನರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.

Written by - Nitin Tabib | Last Updated : Jan 25, 2021, 06:45 PM IST
  • ಕೊರೊನಾ ವ್ಯಾಕ್ಸಿನ್ ಬಗ್ಗೆ ವದಂತಿ ಹಬ್ಬಿಸಿದರೆ ಹುಷಾರ್
  • ಕ್ರಮಕೈಗೊಳ್ಳಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ ಕೇಂದ್ರ.
  • ಈ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಹೇಳಿದ್ದೇನು?
Corona Vaccine Updates: ಕೊರೊನಾ ವ್ಯಾಕ್ಸಿನ್ ಕುರಿತು ವದಂತಿ ಹಬ್ಬಿಸಿದರೆ ಹುಷಾರ್! ಕೇಂದ್ರದ ವಾರ್ನಿಂಗ್  title=
Corona Vaccine Updates (File Photo)

Covid-19 Vaccine Updates - ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ (Coronavirus Pandemic) ರೋಗವನ್ನು ನಿಗ್ರಹಿಸಲು ದೇಶಾದ್ಯಂತ ಮಹಾ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇನ್ನೊಂದೆಡೆ  ಸ್ಥಳೀಯ ಲಸಿಕೆಗಳ ಬಗ್ಗೆ ಹರಡುತ್ತಿರುವ ವದಂತಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಎಚ್ಚರಿಕೆ ನೀಡಿದೆ (Spreading Rumor's About Vaccines). ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಈ ನಿಟ್ಟಿನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಪ್ರಕಾರ, ವದಂತಿಗಳನ್ನು ಹರಡುತ್ತಿರುವವರು ಅಥವಾ ಕರೋನಾ ವ್ಯಾಕ್ಸಿನೇಷನ್ ಬಗ್ಗೆ ಹರಡುತ್ತಿರುವ ವದಂತಿಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಅಲ್ಲಿನ ಸರ್ಕಾರಗಳು ಕ್ರಮ ಕೈಗೊಳ್ಳಬಹುದು ತಿಳಿಸಲಾಗಿದೆ.

ವದಂತಿ ಮತ್ತು ಸುಳ್ಳು ಸುದ್ದಿಗಳನ್ನು ತಡೆಯಲು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಜನರ ಮೇಲೆ ಕ್ರಮ ಕೈಗೊಳ್ಳುವ ಆವಶ್ಯಕತೆ ಇದೆ ಎಂದು ಗೃಹ ಕಾರ್ಯದರ್ಶಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಇದರೊಂದಿಗೆ, ನೈಜ ಸಂಗತಿಗಳ ಆಧಾರದ ಮೇಲೆ ವಿಶ್ವಾಸಾರ್ಹ ಮಾಹಿತಿಯನ್ನು ಪ್ರಸಾರ ಮಾಡಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ವದಂತಿಯನ್ನುಂಟುಮಾಡುವ ಸಂಸ್ಥೆಗಳು ಮತ್ತು ಕಾನೂನು ನಿಬಂಧನೆಗಳ ಅಡಿಯಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ದಂಡನಾತ್ಮಕ ಕ್ರಮ ತೆಗೆದುಕೊಳ್ಳಬಹುದು.

ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಸುರಕ್ಷಿತವಾಗಿವೆ
ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute Of India) ತಯಾರಿಸಿರುವ ಕೋವಿಶೀಲ್ಡ್ (Covishield) ಹಾಗೂ ಭಾರತ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ (Covaxin) ಲಸಿಕೆಗಳು ಸುರಕ್ಷಿತವಾಗಿದ್ದು ಎರಡು ಲಸಿಕೆಗಳು ಕೊರೊನಾ ವಿರುದ್ಧ ರೋಗಪ್ರತಿರೋಧಕ ಶಕ್ತಿ ಒದಗಿಸುತ್ತವೆ ಎಂದು ರಾಷ್ಟ್ರೀಯ ಔಷಧ ನಿಯಂತ್ರಕ ಪ್ರಾಧಿಕಾರ ಈಗಾಗಲೇ ಸ್ಪಷ್ಟಪಡಿಸಿದೆ ಎಂಬುದರ ಮೇಲೆ ಅಜಯ್ ಭಲ್ಲಾ ಒತ್ತು ನೀಡಿದ್ದಾರೆ.

ಇದನ್ನು ಓದಿ-ಲಸಿಕೆ ಪಡೆದ ಬಳಿಕ Manipal Hospital ಚೇರಮನ್ ಡಾ. ಸುದರ್ಶನ್ ಬಲ್ಲಾಳ್ ಪ್ರತಿಕ್ರಿಯೆ ಏನು?

ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿವೆ ಈ ವದಂತಿಗಳು
ದೇಶಾದ್ಯಂತ ಈಗಾಗಲೇ ಕೊರೊನಾ ವ್ಯಾಕ್ಸಿನೇಷನ್(Corona Vaccination) ಕಾರ್ಯಕ್ರಮ ಆರಂಭಗೊಂಡಿದೆ. ವ್ಯಾಕ್ಸಿನ್ ಪಡೆದ ಬಳಿಕ ಕೆಲ ಜನರು ಸಾವನ್ನಪ್ಪಿದ್ದಾರೆ ಎಂಬ ವದಂತಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪಸರಿಸಲಾಗುತ್ತಿದೆ. ಆದರೆ, ಈ ಸಾವುಗಳಿಗೆ ಹಾಗೂ ಲಸಿಕಾಕರಣ ಕಾರ್ಯಕ್ರಮಕ್ಕೆ ಯಾವುದೊಂದು ಸಂಬಂಧವಿಲ್ಲ. ಈ ವದಂತಿಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳದಂತೆ ಹಾಗೂ ಪ್ರಾಣಕ್ಕೆ ಕುತ್ತು ಎಂಬಿತ್ಯಾದಿ ವದಂತಿಗಳೂ ಕೂಡ ಶಾಮೀಲಾಗಿವೆ.

ಇದನ್ನು ಓದಿ-ವಿದೇಶಗಳಿಗೂ Corona Vaccine ನೀಡಲು ನಿರ್ಧಾರ !

ನಾಗರಿಕರಿಗೆ ಮನವಿ ಮಾಡಿದ PM Narendra Modi
ಕೋವಿಡ್ -19 ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಭಾರತೀಯ ವಿಜ್ಞಾನಿಗಳು ತಮ್ಮ ಕರ್ತವ್ಯವನ್ನು ಪೂರೈಸಿದ್ದಾರೆ ಮತ್ತು 'ಸರಿಯಾದ ಮಾಹಿತಿಯೊಂದಿಗೆ ಸುಳ್ಳು ಮತ್ತು ವದಂತಿಗಳನ್ನು ಹರಡುವ ಪ್ರತಿಯೊಂದು ನೆಟ್‌ವರ್ಕ್ ಅನ್ನು ಸೋಲಿಸುವ ಮೂಲಕ ನಾವು ಈಗ ನಮ್ಮ ಕರ್ತವ್ಯವನ್ನು ಪೂರೈಸಬೇಕಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾನುವಾರ ಹೇಳಿದ್ದಾರೆ. ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲು ಹೋಗುತ್ತಿರುವ ಎನ್‌ಸಿಸಿ ಕೆಡೆಟ್‌ಗಳು, ಎನ್‌ಎಸ್‌ಎಸ್ ಸ್ವಯಂಸೇವಕರು ಮತ್ತು ಕಲಾವಿದರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸವಾಲಿನ ಸಮಯವನ್ನು ನಿಭಾಯಿಸುವಲ್ಲಿ ಇಂತಹ ಸಂಸ್ಥೆಗಳು ಯಾವಾಗಲೂ ತಮ್ಮ ಪಾತ್ರವನ್ನು ವಹಿಸಿವೆ.

ಇದನ್ನು ಓದಿ-Corona Vaccine ಪಡೆದ ಬಳಿಕ ಹಲವರಲ್ಲಿ ಅಡ್ಡಪರಿಣಾಮ, ಇಲ್ಲಿದೆ ಸಂಪೂರ್ಣ ವಿವರ

Trending News