ಮುಂಬೈ : ಮಹಾರಾಷ್ಟ್ರದ ಪುಣೆಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಹೊಸ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲೇ 4 ಅಗ್ನಿಶಾಮಕ ದಳಗಳಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. 


Corona Vaccine: Poonawalla Vs Krishna Ella, ಸರ್ಕಾರ ಹೇಳಿದ್ದೇನು?


COMMERCIAL BREAK
SCROLL TO CONTINUE READING

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute of India) ಕರೋನಾವೈರಸ್ ವಿರುದ್ಧ ಇನ್ನೂ ನಾಲ್ಕು ಲಸಿಕೆಗಳನ್ನು ತಯಾರಿಸುತ್ತಿದೆ. ಕೋವಿಶೀಲ್ಡ್ ಸೇರಿದಂತೆ ಕರೋನಾವೈರಸ್‌ನ ಐದು ಲಸಿಕೆಗಳ ಮೇಲೆ ಎಸ್‌ಐಐ ಕಾರ್ಯನಿರ್ವಹಿಸುತ್ತಿದೆ ಎಂದು ಸೀರಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ವೆಬ್‌ನಾರ್‌ನಲ್ಲಿ ತಿಳಿಸಿದ್ದಾರೆ. 


ಕೋವಿಶೀಲ್ಡ್ನ ತುರ್ತು ಬಳಕೆಯನ್ನು ಅನುಮೋದಿಸಲಾಗಿದೆ ಮತ್ತು ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಈ ಲಸಿಕೆಯನ್ನು ಸಹ ಪರಿಚಯಿಸಲಾಗುತ್ತಿದೆ. ಮೂರು ಲಸಿಕೆಗಳು ಕ್ಲಿನಿಕಲ್ ಅಧ್ಯಯನದ ವಿವಿಧ ಹಂತಗಳಲ್ಲಿವೆ, ಒಂದು ಲಸಿಕೆ ಪ್ರಸ್ತುತ ಪ್ರಯೋಗ ಪೂರ್ವ-ಕ್ಲಿನಿಕಲ್ ಹಂತದಲ್ಲಿದೆ ಎಂದು ಜಾಧವ್ ಹೇಳಿದ್ದಾರೆ.


ದೇಶದಲ್ಲಿ ಕರೋನಾ ವ್ಯಾಕ್ಸಿನೇಷನ್ ಪ್ರಾರಂಭವಾಯಿತು : (Corona vaccination started in the country)
ಮತ್ತೊಂದೆಡೆ ಭಾರತದಲ್ಲಿ ಸೀರಮ್ ಸಂಸ್ಥೆಯ ಕೋವಿಶೀಲ್ಡ್ (Coveshield) ಲಸಿಕೆಯ ಅನುಮೋದನೆಯ ನಂತರ ವ್ಯಾಕ್ಸಿನೇಷನ್ ಪ್ರಾರಂಭವಾಗಿದೆ. ಜನವರಿ 16 ರಂದು ಪ್ರಾರಂಭವಾದ ವ್ಯಾಕ್ಸಿನೇಷನ್‌ನಲ್ಲಿ ಈವರೆಗೆ ಸುಮಾರು ನಾಲ್ಕು ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.


ಇದನ್ನೂ ಓದಿ - Good News : ದೇಶವಾಸಿಗಳಿಗೆ ಶೀಘ್ರದಲ್ಲೇ ಸಿಗಲಿದೆ ಇನ್ನೂ 4 Corona vaccine


ಈ ಎರಡು ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ  (Approval given to these two vaccines) :-
ಡಿಜಿಸಿಐ (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ದೇಶದಲ್ಲಿ ಎರಡು ಕರೋನಾ ಲಸಿಕೆಗಳನ್ನು ಅನುಮೋದಿಸಿದೆ. ಅವುಗಳಲ್ಲಿ ಒಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಇನ್ನೊಂದು ಭಾರತ್ ಬಯೋಟೆಕ್ನ ಕೊವಾಕ್ಸಿನ್ (Covaxine). ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯನ್ನು ಸೀರಮ್ ಸಂಸ್ಥೆ ಅಭಿವೃದ್ಧಿಪಡಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G 
Apple Link - https://apple.co/3hEw2hy 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.