Cold Wave Alert: ಈ ದಿನದಿಂದ ಮೈಕೊರೆಯುವ ಚಳಿ ಪ್ರಾರಂಭ: ಎಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚನೆ
Cold Wave Alert: ಹವಾಮಾನ ಇಲಾಖೆಯ ಇತ್ತೀಚಿನ ಅಪ್ಡೇಟ್ ಪ್ರಕಾರ, ಡಿಸೆಂಬರ್ 15 ರಿಂದ ದೆಹಲಿಯಲ್ಲಿ ಚಳಿಗಾಲ ಪ್ರಾರಂಭವಾಗಬಹುದು. ಹೀಗಾಗಿಯೇ ಚಳಿಗಾಲಕ್ಕೆ ಬೇಕಾದ ಎಲ್ಲಾ ಅವಶ್ಯಕ ವಸ್ತುಗಳನ್ನು ಈಗಲೇ ಖರೀದಿಸಿ ಎಂದು ಸೂಚನೆ ನೀಡಲಾಗಿದೆ.
Cold Wave Alert: ಪರ್ವತಗಳಲ್ಲಿನ ಹಿಮಪಾತವು ಬಯಲು ಪ್ರದೇಶದ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಉತ್ತರ ಭಾರತದ ಕೆಲವೆಡೆ ಮೈ ಕೊರೆಯುವ ಚಳಿ ಪ್ರಾರಂಭವಾಗುವ ಬಗ್ಗೆ ದೊಡ್ಡ ಅಪ್ಡೇಟ್ ಬಂದಿದೆ. ಹವಾಮಾನ ಇಲಾಖೆಯ (IMD) ಇತ್ತೀಚಿನ ಅಪ್ಡೇಟ್ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ತೀವ್ರ ಚಳಿ ಇರುತ್ತದೆ. ದೆಹಲಿಯಲ್ಲಿ ಶುಷ್ಕ ವಾತಾವರಣವಿದ್ದರೂ ಡಿಸೆಂಬರ್ 15 ರಿಂದ ಇಲ್ಲಿ ಚಳಿ ತೀವ್ರವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಮಧ್ಯೆ, ಗರಿಷ್ಠ ಮತ್ತು ಕನಿಷ್ಠ ತಾಪಮಾನದ ಎರಡರಿಂದ ಮೂರು ಡಿಗ್ರಿ ಇಳಿಕೆಯಾಗುವ ಮುನ್ಸೂಚನೆ ಇದೆ.
ಇದನ್ನೂ ಓದಿ: Himachal Pradesh: ನೂತನ ಮುಖ್ಯಮಂತ್ರಿಯಾಗಿ ಇಂದು ಸುಖ್ವಿಂದರ್ ಸಿಂಗ್ ಸುಖು ಪ್ರಮಾಣವಚನ
ಹವಾಮಾನ ಇಲಾಖೆಯ ಇತ್ತೀಚಿನ ಅಪ್ಡೇಟ್ ಪ್ರಕಾರ, ಡಿಸೆಂಬರ್ 15 ರಿಂದ ದೆಹಲಿಯಲ್ಲಿ ಚಳಿಗಾಲ ಪ್ರಾರಂಭವಾಗಬಹುದು. ಹೀಗಾಗಿಯೇ ಚಳಿಗಾಲಕ್ಕೆ ಬೇಕಾದ ಎಲ್ಲಾ ಅವಶ್ಯಕ ವಸ್ತುಗಳನ್ನು ಈಗಲೇ ಖರೀದಿಸಿ ಎಂದು ಸೂಚನೆ ನೀಡಲಾಗಿದೆ.
ಇನ್ನೊಂದೆಡೆ ಕನಿಷ್ಠ ತಾಪಮಾನ 5 ರಿಂದ 6 ಡಿಗ್ರಿ ಇಳಿಕೆ ಕಂಡು ಬಂದಿದೆ. ರಾಜಧಾನಿ ಭೋಪಾಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡುಗುವ ಚಳಿ ಪ್ರಾರಂಭವಾಗುದೆ. ಡಿಸೆಂಬರ್ 15 ರವರೆಗೆ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮಳೆಯ ಎಚ್ಚರಿಕೆಯನ್ನು ಸಹ ನೀಡಲಾಗಿದೆ.
ಇದನ್ನೂ ಓದಿ: Trending Video: ಪೆಟ್ರೋಲ್ ಬಾಂಬ್ ಜೊತೆ ಸ್ಟಂಟ್ ಮಾಡಲು ಹೋಗಿ ಬ್ಯಾಕ್ ಸುಟ್ಟಿಕೊಂಡ ಬಾಲಕ: ವಿಡಿಯೋ ನೋಡಿ
ಉತ್ತರ ಪ್ರದೇಶದಲ್ಲಿ ಸದ್ಯ ತೀವ್ರ ಚಳಿಯ ಪ್ರಭಾವ ಕಂಡುಬರುತ್ತಿಲ್ಲ. ಒಣ ಹವೆ ಹಾಗೂ ಕಡಲ ಮಾರುತಗಳ ಪ್ರಭಾವದಿಂದಾಗಿ ಬಯಲು ಸೀಮೆಯ ಇದುವರೆಗೆ ಸಹಜ ಸ್ಥಿತಿಯಲ್ಲಿದೆ. ಮಂಜಿನ ಗಮನಾರ್ಹ ಪರಿಣಾಮ ಇಲ್ಲಿಯವರೆಗೆ ಕಂಡುಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ತೀವ್ರ ಚಳಿಗೆ ಇನ್ನೂ 15 ದಿನ ಕಾಯಬೇಕಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.