ಲಡಾಖ್ ಹಿಂಸಾಚಾರದ ನಂತರ ಪರಿಸ್ಥಿತಿ ನಿರ್ಣಾಯಕ, LAC ಬಳಿ ಚೀನೀ ಹೆಲಿಕಾಪ್ಟರ್‌ಗಳು
ಮೂಲಗಳ ಪ್ರಕಾರ ಚೀನಾದ ಹತ್ಯೆಗೀಡಾದ ಸೈನಿಕರು ಗಾಯಗೊಂಡ ಸೈನಿಕರನ್ನು ಏರ್ ಲಿಫ್ಟ್ ಮಾಡುವ ಉದ್ದೇಶದಿಂದ ಈ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿವೆ ಎಂದು ನಂಬಲಾಗಿದೆ.
ನವದೆಹಲಿ: ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಭಾರತ ಮತ್ತು ಚೀನಾ ನಡುವೆ ಚಕಮಕಿ ನಡೆದ ಹಿನ್ನೆಲೆಯಲ್ಲಿ ಚೀನಾದ ಹೆಲಿಕಾಪ್ಟರ್‌ಗಳು ಎಲ್‌ಎಸಿ ದಾಟುತ್ತಿರುವುದು ಕಂಡುಬಂದಿದೆ. ಘಟನೆಯ ನಂತರ ಚೀನಾದ ಹೆಲಿಕಾಪ್ಟರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಚೀನಾದ ಹತ್ಯೆಗೀಡಾದ ಸೈನಿಕರು ಗಾಯಗೊಂಡ ಸೈನಿಕರನ್ನು ಏರ್ ಲಿಫ್ಟ್ ಮಾಡುವ ಉದ್ದೇಶದಿಂದ ಈ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿವೆ ಎಂದು ನಂಬಲಾಗಿದೆ.
ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾ (China) ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ ಒಟ್ಟು 20 ಸೈನಿಕರು ಸಾವನ್ನಪ್ಪಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಚೀನಾದ 20 ಸೈನಿಕರು ಸಹ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಚೀನಾದ ಕಡೆಯಿಂದ ಸಾವನ್ನಪ್ಪಿದವರ ಸಂಖ್ಯೆ 43 ಆಗಿದೆ. ಈ ಸಂಖ್ಯೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಊಹಿಸಲಾಗಿದ್ದು ಈ ಘಟನೆಯೊಂದಿಗೆ ನಡೆಯುತ್ತಿರುವ ಡೆಡ್ಲಾಕ್ನ ಪರಿಸ್ಥಿತಿ ಹೆಚ್ಚು ಗಂಭೀರವಾಗಿದೆ.
ಭಾರತ-ನೇಪಾಳ ನಡುವಿನ 'ರೋಟಿ-ಬೇಟಿ' ಸಂಬಂಧವನ್ನು ಯಾರೂ ಮುರಿಯಲಾರರು: ರಾಜನಾಥ್ ಸಿಂಗ್
ಗಾಲ್ವಾನ್ ಪ್ರದೇಶದಲ್ಲಿ 2020ರ ಜೂನ್ 15/16 ರಂದು ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದ ಸ್ಥಳದಿಂದ ಎರಡೂ ಸೇನೆಗಳ ಸೈನಿಕರು ಹಿಂದೆ ಸರಿದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ರಕ್ಷಿಸಲು ಭಾರತೀಯ ಸೇನೆ ದೃಢವಾಗಿ ಬದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
1975 ರ ನಂತರದ ಮೊದಲ ಪ್ರಮುಖ ಘಟನೆ:
ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ (Bipin Rawat) ಮತ್ತು ಮೂರು ಸೇನೆಗಳ ಮುಖ್ಯಸ್ಥರು ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಉನ್ನತ ಮಟ್ಟದ ಸಭೆಯ ನಂತರ ಕಳೆದ ರಾತ್ರಿ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರಿಗೆ ಇಡೀ ಘಟನೆ ಬಗ್ಗೆ ವಿವರಣೆ ವಿವರಿಸಿದ್ದಾರೆ.
ಸೇನೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ 1975 ರಲ್ಲಿ ಅರುಣಾಚಲ ಪ್ರದೇಶದ ತುಲುಂಗ್ ಲಾದಲ್ಲಿ ನಡೆದ ಘರ್ಷಣೆಯಲ್ಲಿ ನಾಲ್ಕು ಭಾರತೀಯ ಸೈನಿಕರ ಹುತಾತ್ಮರ ನಂತರ ನಡೆದ ಮೊದಲ ಘಟನೆ ಇದಾಗಿದೆ.