ಅಮೇಠಿ: ರಾಹುಲ್ ಗಾಂಧಿ ಲೋಕಸಭಾ ಕ್ಷೇತ್ರವಾದ ಅಮೇಠಿಯಲ್ಲಿನ ಗ್ರಾಮಕ್ಕೆ ಈಗ ನೆರವು ನೀಡಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುಂದೆ ಬಂದಿದ್ದಾರೆ.  


COMMERCIAL BREAK
SCROLL TO CONTINUE READING

ಸುಮಾರು ಸರ್ಕಾರದ 200ಕ್ಕೂ ಅಧಿಕ ಡಿಜಿಟಲ್ ಇಂಡಿಯಾದ ಭಾಗವಾಗಿರುವ ಕಾರ್ಯಕ್ರಮಗಳನ್ನು ಪಿಂಡಾರಾ ಥಾಕೂರ್ ಗ್ರಾಮಕ್ಕೆ ಅಳವಡಿಸಲು ಮುಂದಾಗಿದ್ದಾರೆ ಎಂದು  ತಿಳಿದು ಬಂದಿದೆ. ಶನಿವಾರದಂದು ಡಿಜಿಟಲ್ ಅವತಾರ್ ಕಾರ್ಯಕ್ರಮದ ಮೂಲಕ ಈ ಎಲ್ಲ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.


ಇತ್ತೀಚಿಗೆ ಸ್ಮೃತಿ ಇರಾನಿ ಅಮೇತಿ ಕ್ಷೇತ್ರಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮತ್ತೆ ಸ್ಪರ್ಧಿಸುವ ಹಿನ್ನಲೆಯಲ್ಲಿ ಅವರು ನಿರಂತರವಾಗಿ ಭೇಟಿ ನಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಸ್ಥಳೀಯ ಅಧಿಕಾರಿ ಹೇಳುವಂತೆ ಪಿಂಡಾರಾ ಗ್ರಾಮದಲ್ಲಿ ವೈಪೈಯನ್ನು ಸಂಪರ್ಕಿಸಲಾಗಿದ್ದು 15 ದಿನಗಳ ಕಾಲ ಉಚಿತ 2ಜಿಬಿ ಅಂತರ್ಜಾಲವನ್ನು ಬಳಸಬಹುದೆಂದು ಹೇಳಲಾಗಿದೆ. ಇದೆ ವೇಳೆ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಅಮೆತಿಯ ಹೆಡ್ ಪೋಸ್ಟ್ ನಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.