Shocking Video: ಸಾಮಾಜಿಕ ಮಾಧ್ಯಮ ಪ್ರಪಂಚ ತುಂಬಾ ವಿಚಿತ್ರವಾಗಿದೆ. ಏಕೆಂದರೆ ಚಿತ್ರ ವಿಚಿತ್ರ ಸಂಗತಿಗಳು ಅಲ್ಲಿ ನಿಮಗೆ ನೋಡಲು ಸಿಗುತ್ತವೆ ಮತ್ತು ಆ ಘಟನೆಗಳು ನಮ್ಮ ಊಹೆಯನ್ನು ಕೂಡ ಮೇರುತ್ತವೆ. ಕೆಲವು ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ವಿಡಿಯೋ ನೋಡಿ ಮೈಮೇಲಿನ ಕೂದಲುಗಳು ನೆಟ್ಟಗಾಗುತ್ತವೆ ಮತ್ತು ಅವುಗಳನ್ನು ನೋಡಿ ಜನರು ಕೆಲ ಕ್ಷಣಗಳ ಕಾಲ ಸ್ತಬ್ಧರಾಗುತ್ತಾರೆ. ಇವುಗಳಲ್ಲಿ ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗಿನ ವಿಡಿಯೋಗಳು ಶಾಮೀಲಾಗಿವೆ. ಇದೀಗ ಅಂತಹುದೇ ಒಂದು ವೀಡಿಯೋ ಮುನ್ನೆಲೆಗೆ ಬಂದಿದ್ದು, ಅದನ್ನು ನೋಡಿದ್ರೆ ನಿಮ್ಮ ಉಸಿರು ಒಂದು ಕ್ಷಣ ನಿಲ್ಲುವುದು ಗ್ಯಾರಂಟಿ. ಏಕೆಂದರೆ, ಈ ಆಘಾತಕಾರಿ ವಿಡಿಯೋದಲ್ಲಿ ದೈತ್ಯ ಹಾವೊಂದು ಕಾಗೆಯನ್ನು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಬೇಟೆಯಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಜಿಂಕೆಯ ಅದ್ಭುತ ನಟನೆ ಅರ್ಥವಾಗದೆ ತಲೆ ಕೆರೆಸುತ್ತಾ ನಿಂತ ಕತ್ತೆಕಿರುಬ-ಚಿರತೆ...ವಿಡಿಯೋ ನೋಡಿ!


ಹಾವು ಎಷ್ಟು ಅಪಾಯಕಾರಿ ಎಂಬ ಸಂಗತಿ ಯಾರಿಗೂ ಹೇಳಬೇಕಾಗಿಲ್ಲ. ಕೆಲವೊಮ್ಮೆ ಕಣ್ಣು ಮಿಟುಕಿಸುವಷ್ಟರಲ್ಲಿ ಹಾವು ತನ್ನ ಎದುರಾಳಿಗೆ ಬೇಟೆಯಾಡುತ್ತದೆ.  ಹೀಗಾಗಿ ಜನರು ಹಾವುಗಳಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಕೆಲವೊಮ್ಮೆ ಹಾವು ದೊಡ್ಡ ದೊಡ್ಡ ಪ್ರಾಣಿಗಳನ್ನು ಕೂಡ ಮಣ್ಣುಮುಕ್ಕಿಸುತ್ತವೆ. ಆದರೆ, ಈ ವೈರಲ್ ವೀಡಿಯೊದಲ್ಲಿ, ನಿಮ್ಮ ಉಸಿರಾಟಕ್ಕೆ ಬ್ರೇಕ್ ಹಾಕುವ ಒಂದು ಸಂಗತಿಯನ್ನು ನೀವು ನೋಡುವಿರಿ. ವೀಡಿಯೋದಲ್ಲಿ ಹಾವು ಗಾಳಿಯಲ್ಲಿ ನೇತಾಡುವ ಮೂಲಕ ಕಾಗೆಯನ್ನು ಹೇಗೆ ಬೇಟೆಯಾಡುತ್ತಿದೆ ಎಂಬುದನ್ನು ನೀವು ನೋಡಬಹುದು. ಹಾವು ಆಂಟಿನಾ ಕಂಬಕ್ಕೆ ನೇತಾಡುತ್ತಿದ್ದು, ಕಾಗೆಯನ್ನು ತನ್ನ ದವಡೆಗಳಲ್ಲಿ ಹಿಡಿದುಕೊಂಡಿದೆ. ಕಾಗೆಯ ಸ್ಥಿತಿ ನೋಡಿ ನಿಮಗೂ ಒಂದು ಕ್ಷಣ ಕನಿಕರ ಬರಬಹುದು ಕೊನೆಯಲ್ಲಿ, ಹಾವು ಏನು ಮಾಡುತ್ತದೆ ಎಂಬುದನ್ನು ನೋಡಿ ನೀವೂ ಕೂಡ ನಿಬ್ಬೆರಗಾಗುವಿರಿ. ಹಾಗಾದ್ರೆ ಆ ಶಾಕಿಂಗ್ ವೀಡಿಯೋ ಇಲ್ಲಿದೆ ನೋಡಿ...



ಇದನ್ನೂ ಓದಿ-Viral Video: ಚಲಿಸುತ್ತಿರುವ ಬೈಕ್ ಮೇಲೆ ಪತಿಯಿಂದ ಏನು ಮಾಡಿಸುತ್ತಿದ್ದಾಳೆ ಪತ್ನಿ ನೋಡಿ...


ಈ ಅಪಾಯಕಾರಿ ದೃಶ್ಯವನ್ನು ನೋಡಿ ನಿಮಗೂ ಕೂಡ ಆಶ್ಚರ್ಯವಾಗಿರಬಹುದು. ಪ್ರಸ್ತುತ ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. 'memesworld1191' ಹೆಸರಿನ ಪುಟದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಇದೇ ವೇಳೆ ಸಾವಿರಾರು ಜನರು ಅದನ್ನು ಇಷ್ಟಪಟ್ಟಿದ್ದಾರೆ. ಈ ದೃಶ್ಯ ಕಂಡು ಕೆಲವರು ಅಚ್ಚರಿ ವ್ಯಕ್ತಪಡಿಸಿದರೆ, ಕೆಲವರು ಇದೇ ಮೊದಲ ಬಾರಿಗೆ ಇಂತಹ ವಿಡಿಯೋ ನೋಡಿದ್ದೇವೆ ಎನ್ನುತ್ತಿದ್ದಾರೆ. ಹಾಗಾದರೆ ಈ ವಿಡಿಯೋ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು, ಕಾಮೆಂಟ್ ಮೂಲಕ ತಿಳಿಯಪಡಿಸಲು ಮರೆಯಬೇಡಿ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.