Viral Video: 'ನಾವು ಸಲಿಂಗಕಾಮಿಗಳನ್ನು ತಯಾರಿಸುವ ಉದ್ಯಮ ಸ್ಥಾಪಿಸಿದ್ದೇವೆ' ಮದರಸಾಗಳ ಕುರಿತು ಪಾಕ್ ಮೌಲ್ವಿ ಹೇಳಿಕೆ ಭಾರಿ ವೈರಲ್!

Shocking Video: ವೈರಲ್ ಆಗಿರುವ ವಿಡಿಯೋದಲ್ಲಿ ಮೌಲಾನಾ ಅವರು 'ಎಲ್ಲರಿಗೂ ಗೊತ್ತು... ನಾವು ಸಲಿಂಗಕಾಮಿಗಳನ್ನು ಉತ್ಪಾದಿಸುವ ಉದ್ಯಮವನ್ನು ಸ್ಥಾಪಿಸಿದ್ದೇವೆ. ಪ್ರತಿ ಬೀದಿಯಲ್ಲೂ ಮಸೀದಿಗಳಿವೆ. ಪ್ರತಿ 200 ಮಾರುಗಳಿಗೆ ಮಸೀದಿಗಳನ್ನು ನಿರ್ಮಿಸಲಾಗುತ್ತದೆ' ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.   

Written by - Nitin Tabib | Last Updated : Apr 2, 2023, 08:56 PM IST
  • ಪಾಕಿಸ್ತಾನದಲ್ಲಿ ಮದರಸಾಗಳ ಮೇಲೆ ಪ್ರಶ್ನೆಗಳು ಎದ್ದಿರುವುದು ಇದೇ ಮೊದಲಲ್ಲ.
  • ಇದಕ್ಕೂ ಮುನ್ನ ಅಲ್ಲಿನ ಮದರಸಾಗಳ ಮೇಲೆ ಹಲವು ಗಂಭೀರ ಆರೋಪಗಳು ಕೇಳಿ ಬಂದಿವೆ.
  • ಕಳೆದ ವರ್ಷ ಆಗಸ್ಟ್‌ನಲ್ಲಿ ಪಾಕಿಸ್ತಾನದ ಪಂಜಾಬ್‌ನಲ್ಲಿ ಮದ್ರಸಾ ಶಿಕ್ಷಕನನ್ನು ಬಂಧಿಸಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
Viral Video: 'ನಾವು ಸಲಿಂಗಕಾಮಿಗಳನ್ನು ತಯಾರಿಸುವ ಉದ್ಯಮ ಸ್ಥಾಪಿಸಿದ್ದೇವೆ' ಮದರಸಾಗಳ ಕುರಿತು ಪಾಕ್ ಮೌಲ್ವಿ ಹೇಳಿಕೆ ಭಾರಿ ವೈರಲ್! title=
ಪಾಕ್ ಮೌಲ್ವಿಯ ವಿವಾದಾತ್ಮಕ ಹೇಳಿಕೆ!

Trending Video: ಪಾಕಿಸ್ತಾನದ ಮೌಲಾನಾವೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮೌಲಾನಾ ಪಾಕಿಸ್ತಾನದ ಮದರಸಾಗಳನ್ನು ಪ್ರಶ್ನಿಸುತ್ತಿದ್ದಾರೆ. ದೇಶದಲ್ಲಿ ಇಸ್ಲಾಂ ಧರ್ಮವನ್ನು ಕಲಿಸುವ ಮದರಸಾವನ್ನು ಮೌಲಾನಾ 'ಸಲಿಂಗಕಾಮಿ ಉದ್ಯಮ' ಎಂದು ಕರೆಯುತ್ತಿದ್ದಾರೆ. ಮೌಲಾನಾ ಅವರ ಈ ಹೇಳಿಕೆಯಲ್ಲಿ ಎಷ್ಟು ಸತ್ಯಾಂಶ ಅಡಗಿದೆ? ಇದು ತನಿಖೆಯ ವಿಷಯವಾಗಿರಬಹುದು ಆದರೆ ತಮ್ಮ ಮಕ್ಕಳನ್ನು ಈ ಮದರಸಾಗಳಿಗೆ ಕಳುಹಿಸುವ ಪೋಷಕರು ಈ ವೀಡಿಯೊವನ್ನು ನೋಡಿದ ನಂತರ ಆತಂಕಕ್ಕೆ ಒಳಗಾಗುವ ರೀತಿಯಲ್ಲಿ ಮೌಲಾನಾ ಅವರ ಹೇಳಿಕೆ ಇದೆ.

ಈ ವಿಡಿಯೋವನ್ನು ಪಾಕಿಸ್ತಾನದ 'ಅನ್‌ಟೋಲ್ಡ್' ಹೆಸರಿನ ಟ್ವಿಟರ್ ಹ್ಯಾಂಡಲ್‌ ಮೂಲಕ ಹಂಚಿಕೊಳ್ಳಲಾಗಿದೆ. 'ಎಲ್ಲರಿಗೂ ಗೊತ್ತು... ನಾವು ಸಲಿಂಗಕಾಮಿಗಳನ್ನು ಉತ್ಪಾದಿಸುವ ಉದ್ಯಮವನ್ನು ಸ್ಥಾಪಿಸಿದ್ದೇವೆ' ಎಂದು ಮೌಲಾನಾ ಹೇಳುವುದನ್ನು ವೀಡಿಯೊದಲ್ಲಿ ನೀವು ಕಾಣಬಹುದು. 'ಪ್ರತಿ ಬೀದಿಯಲ್ಲೂ ಮಸೀದಿಗಳಿವೆ. ಪ್ರತಿ 200 ಮಾರುಗಳಿಗೆ ಮಸೀದಿಗಳನ್ನು ನಿರ್ಮಿಸಲಾಗುತ್ತದೆ' ಎಂದ ಮೌಲಾನಾ ಅವರು 'ಈ ಸಮಸ್ಯೆಯನ್ನು ತಮಾಷೆ ಮಾಡುವ ರೀತಿಯಲ್ಲಿ ಪರಿಹರಿಸಲಾಗುವುದಿಲ್ಲ' ಎಂದು ಮುಂದುವರೆದು ಹೇಳುತ್ತಾರೆ. 'ಈ ಮದರಸಾಗಳನ್ನು ರದ್ದುಪಡಿಸಬೇಕು. ಈ ಮದರಸಾ ನಡೆಸುವವರಿಂದ ಧರ್ಮ ಮುಂದಕ್ಕೆ ಬಂದಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ-Viral Video: ಜಿಂಕೆಯ ಅದ್ಭುತ ನಟನೆ ಅರ್ಥವಾಗದೆ ತಲೆ ಕೆರೆಸುತ್ತಾ ನಿಂತ ಕತ್ತೆಕಿರುಬ-ಚಿರತೆ...ವಿಡಿಯೋ ನೋಡಿ!

ಮಕ್ಕಳನ್ನು ಮದರಸಾಗಳಿಂದ ದೂರವಿಡಲು ಪೋಷಕರಿಗೆ ಮನವಿ
ವೀಡಿಯೊದಲ್ಲಿ, ಮೌಲಾನಾ ಜನರು ತಮ್ಮ ಮಕ್ಕಳನ್ನು ಮದರಸಾದಿಂದ ದೂರವಿಡಬೇಕು ಎಂದು ಮನವಿ ಮಾಡಿದ್ದಾರೆ. ಮೌಲಾನಾ ಮೆಟ್ರಿಕ್ಯುಲೇಷನ್ ನಂತರ ಮಕ್ಕಳನ್ನು ಮದರಸಗಳಿಗೆ ಕಳುಹಿಸಲು ಹೇಳುತ್ತಾರೆ. ಆರಂಭದಲ್ಲಿ ಮಗುವಿಗೆ ಮನೆಯಲ್ಲಿ ಕಲಿಸಿ. ಅದಕ್ಕೂ ಮುನ್ನ ಮಗುವನ್ನು ಅವರಿಗೆ ಒಪ್ಪಿಸಬೇಡಿ. ಅಷ್ಟೇ ಅಲ್ಲ, ಮಗು ಓದದೇ ಇದ್ದರೂ ಪರವಾಗಿಲ್ಲ ಎನ್ನುತ್ತಾರೆ ಮೌಲಾನಾ. ಆದರೆ, ಅವರನ್ನು ಮನೆಯಲ್ಲಿ ಸುರಕ್ಷಿತವಾಗಿ ಇರಿಸಿ ಎನ್ನುತ್ತಾರೆ ಮೌಲಾನಾ.

ಇದನ್ನೂ ಓದಿ-Romance In Space: ಬಾಹ್ಯಾಕಾಶದಲ್ಲಿ ಸೆಕ್ಸ್! ಟಿಕೆಟ್ ಬುಕ್ಕಿಂಗ್ ಆರಂಭ.. ಟಿಕೆಟ್ ಬೆಲೆ ಎಷ್ಟು ಗೊತ್ತಾ?

ಪಾಕಿಸ್ತಾನದಲ್ಲಿ ಮದರಸಾಗಳ ಮೇಲೆ ಪ್ರಶ್ನೆಗಳು ಎದ್ದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅಲ್ಲಿನ ಮದರಸಾಗಳ ಮೇಲೆ ಹಲವು ಗಂಭೀರ ಆರೋಪಗಳು ಕೇಳಿ ಬಂದಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಪಾಕಿಸ್ತಾನದ ಪಂಜಾಬ್‌ನಲ್ಲಿ ಮದ್ರಸಾ ಶಿಕ್ಷಕನನ್ನು ಬಂಧಿಸಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಶಿಕ್ಷಕ 10 ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅಷ್ಟೇ ಅಲ್ಲ ಆರೋಪಿ ಶಿಕ್ಷಕ ತನ್ನ ಮೇಲಿನ ಆರೋಪಗಳನ್ನು ಕೂಡ ಒಪ್ಪಿಕೊಂಡಿದ್ದ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   
 

Trending News