ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಪಾಲು ಹೆಚ್ಚಳಕ್ಕೆ ಆಗ್ರಹಿಸಿ ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಿಎಂಗಳ ಸಭೆ
ಕೋವಿಡ್-19 (COVID-19) ಮತ್ತು ಲಾಕ್‌ಡೌನ್ (Lockdown) ಕಾರಣಗಳಿಂದ ರಾಜ್ಯಗಳ ಆದಾಯಗಳಿಗೆ ಹೊಡೆತಬಿದ್ದಿರುವುದರಿಂದ ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರದ ಪಾಲನ್ನು ಹೆಚ್ಚಿಸಬೇಕೆಂಬ ಕೂಗು ಕೇಳಿಬರುತ್ತಿದೆ.
ನವದೆಹಲಿ: COVID-19 ಮತ್ತು ಲಾಕ್‌ಡೌನ್ (Lockdown) ಕಾರಣಗಳಿಂದ ರಾಜ್ಯಗಳ ಆದಾಯಗಳಿಗೆ ತೀವ್ರ ರೀತಿಯ ಹೊಡೆತಬಿದ್ದಿದ್ದು, ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ (GST) ಪರಿಹಾರದ ಪಾಲನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಕಾಂಗ್ರೆಸ್ ಹಾಗೂ ಕಾಂಗ್ರೆಸೇತರ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಿರುವ ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ (ರಾಜಸ್ಥಾನ), ಅಮರೀಂದರ್ ಸಿಂಗ್(ಪಂಜಾಬ್), ಭೂಪೇಶ್ ಬಘೇಲ್(ಛತ್ತೀಸ್ಘಡ) ಮತ್ತು ನಾರಾಯಣಸ್ವಾಮಿ (ಪುದುಚೇರಿ) ಹಾಗೂ ಕಾಂಗ್ರೆಸೇತರ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ), ಉದ್ಧವ್ ಠಾಕ್ರೆ(ಮಹಾರಾಷ್ಟ್ರ), ಹೇಮಂತ್ ಸೋರನ್ (ಜಾರ್ಖಂಡ್) ಜತೆ ಚರ್ಚೆ ನಡೆಸಲಿದ್ದಾರೆ.
ಕೋವಿಡ್-19 (COVID-19) ಮತ್ತು ಲಾಕ್‌ಡೌನ್ (Lockdown) ಕಾರಣಗಳಿಂದ ರಾಜ್ಯಗಳ ಆದಾಯಗಳಿಗೆ ಹೊಡೆತಬಿದ್ದಿರುವುದರಿಂದ ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರದ ಪಾಲನ್ನು ಹೆಚ್ಚಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಬಿಜೆಪಿ ಆಡಳಿತ ರಾಜ್ಯಗಳು ಕೂಡ ಇಂಥ ಬೇಡಿಕೆಯನ್ನೇ ಇಡುತ್ತಿವೆ. ಈ ಹಿನ್ನೆಲೆಯಲ್ಲಿ ಎಐಸಿಸಿ (AICC) ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ಹಾಗೂ ಕಾಂಗ್ರೆಸೇತರ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.
Good News!ದೀಪಾವಳಿಯಲ್ಲಿ ದ್ವಿಚಕ್ರ ವಾಹನಗಳು ಅಗ್ಗವಾಗುವ ನಿರೀಕ್ಷೆ, ವಿತ್ತ ಸಚಿವರು ಹೇಳಿದ್ದೇನು?
ಈ ಮುಖಾಮಂತರ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಪಾಲನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರದ ಒತ್ತಡ ಹೇರುವುದೂ ಅಲ್ಲದೆ ವಿರೋಧ ಪಕ್ಷಗಳ ಒಗ್ಗಟ್ಟು ಪ್ರದರ್ಶನವೂ ನಡೆಯಲಿದೆ. ಜೊತೆಗೆ ವೈದ್ಯಕೀಯ ಮತ್ತು ಇಂಜನಿಯರಿಂಗ್ ಪ್ರವೇಶ ಪರೀಕ್ಷೆಗಳಾದ ಎನ್ ಇಇಟಿ (NEET), ಮತ್ತು JEE ಪರೀಕ್ಷೆಗಳ ಬಗ್ಗೆಯೂ ಇಂದಿನ ಸಭೆಯಲ್ಲಿ ಸಮಾಲೋಚನೆ ನಡೆಸಿ ಈ ವಿಚಾರದಲ್ಲೂ ಒಗ್ಗಟ್ಟು ಪ್ರದರ್ಶಿಸಲಿವೆ.
ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ನೇತೃತ್ವದಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದೆ. ನಾಳಿನ ಸಭೆ ಹಿನ್ನಲೆಯಲ್ಲಿ ಸೋನಿಯಾ ಗಾಂಧಿ ಅವರು ಇಂದು ಕಾಂಗ್ರೆಸ್ ಹಾಗೂ ಕಾಂಗ್ರೆಸೇತರ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.