ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ವಿಷಯದಲ್ಲೂ ಕೋಮುವಾದವನ್ನು ಸೃಷ್ಟಿಯಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ವಿಷಾಧ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಇಂದು ಕಾಂಗ್ರೆಸ್ ವರ್ಕಿಂಗ್ ಸಮಿತಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸೋನಿಯಾಗಾಂಧಿ ಅವರು ದೇಶದಲ್ಲಿ ಲಾಕ್​ಡೌನ್ ನಡುವೆಯೂ ಕೊರೊನಾವೈರಸ್ (Coronavirus)   ಕೋವಿಡ್-19 ಸೋಂಕು ಹೆಚ್ಚಾಗುತ್ತಲೆ ಇದೆ. ಇದು ಆತಂಕಕಾರಿ ಬೆಳವಣಿಗೆ. ಇದರೊಟ್ಟಿಗೆ ಕೊರೋನಾ ಸಾಂಕ್ರಾಮಿಕ ರೋಗದ ವಿಷಯವನ್ನು ಕೋಮುಭಾವ ಮೂಡಿಸಲು ಬಳಸಿಕೊಳ್ಳುತ್ತಿರುವ ಮತ್ತೊಂದು ಆತಂಕಕಾರಿ ಬೆಳವಣಿಗೆ ಆಗುತ್ತಿದೆ ಎಂದರು.


ಕೋವಿಡ್-19 (Covid-19) ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ದೇಶದ ಜನರನ್ನು ತೀವ್ರವಾಗಿ ಬಾಧಿಸುತ್ತಿದೆ. ಆದರೆ ಈ ಪರಿಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ. ಲಾಕ್ ಡೌನ್ ನಿಂದ ರೈತರು,‌ ಕಾರ್ಮಿಕರು, ವಲಸೆ ಕಾರ್ಮಿಕರು ತೀವ್ರ ತೊಂದರೆಗೀಡಾಗಿದ್ದಾರೆ. ವ್ಯಾಪಾರ, ವಾಣಿಜ್ಯ, ಕೈಗಾರಿಕೆಗಳು ವಾಸ್ತವ ಸ್ಥಗಿತಗೊಂಡಿವೆ. ಇದರಿಂದಾಗಿ ಕೋಟ್ಯಂತರ ಜನರ ಬದುಕು ಬೀದಿಗೆ ಬಂದಿದೆ. ಇವುಗಳೆಲ್ಲವನ್ನೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.


ಲಾಕ್‌ಡೌನ್ (Lockdown)  ವೇಳೆ ಅಪಾರ ಉದ್ಯೋಗ ನಷ್ಟವಾಗಿದೆ.‌ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ಲಾಕ್ ಡೌನ್ ನಿಭಾಯಿಸಲು ಪ್ರತಿ ಕುಟುಂಬಕ್ಕೆ 7,500 ರೂಪಾಯಿ ನೀಡಬೇಕು. ಲಾಕ್ ಡೌನ್ ಆರಂಭ ಆದಾಗಿನಿಂದಲೂ ನಾನು ಪ್ರಧಾನಿ ನರೇಂದ್ರ ಮೋದಿ  ಅವರಿಗೆ ಪತ್ರಗಳನ್ನು ಬರೆದು ಪರಿಸ್ಥಿತಿ ನಿಭಾಯಿಸುವ ಬಗ್ಗೆ ರಚನಾತ್ಮಕ ಸಲಹೆ ನೀಡಿದ್ದೇನೆ.‌ ಜೊತೆಗೆ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದೇನೆ. ಆದರೆ ಸರ್ಕಾರ ನಮ್ಮ ಸಲಹೆ ಮತ್ತು ಮನವಿಗಳಿಗೆ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.

ಲಾಕ್​ಡೌನ್ ನಡುವೆಯೂ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ಪರೀಕ್ಷೆಗಳ ಪ್ರಮಾಣವನ್ನು‌ ಹೆಚ್ಚಿಸಬೇಕು. ವೈದ್ಯರು ಮತ್ತು ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ವೈಯಕ್ತಿಕ ರಕ್ಷಣಾ ಉಪಕರಣಗಳ ಕಿಟ್ ಗಳನ್ನು ಕೊಡಬೇಕು. ಆದರೆ ಈಗ ವಿತರಿಸಿರುವ ಪಿಪಿಇ ಕಿಟ್ ಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಆಪಾದಿಸಿದರು.



ವೈದ್ಯರ, ಅರೆವೈದ್ಯರು, ಆರೋಗ್ಯ ಸೇವಾ ಕಾರ್ಯಕರ್ತರು, ಪೌರ ಕಾರ್ಮಿಕರು ಮತ್ತು ಅಗತ್ಯ ಸೇವಾ ಪೂರೈಕೆದಾರರು, ಎನ್‌ಜಿಒಗಳು ದೇಶದಲ್ಲಿ ಈಗ ದೊಡ್ಡ ಮಟ್ಟದಲ್ಲಿ ನಿರ್ಗತಿಕರಿಗೆ ನೆರವಾಗಿದ್ದಾರೆ. ಪರಿಹಾರ‌ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ‌. ಅವರಿಗ ಎಲ್ಲಾ ನಾಗರಿಕರು ಧನ್ಯವಾದ ಹೇಳಬೇಕೆಂದು ಕರೆ ಕೊಟ್ಟರು.