ಪ್ರಿಯಾಂಕ ಗಾಂಧಿಯೊಂದಿಗೆ ಇಂದು ರಾಯ್ಬರೇಲಿಗೆ ಭೇಟಿ ನೀಡಲಿರುವ ಸೋನಿಯಾಗಾಂಧಿ
ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಭುಮು ಅಥಿತಿ ಗೃಹದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ. ಮಾಹಿತಿಯ ಪ್ರಕಾರ, ಪ್ರಿಯಾಂಕಾ ಗಾಂಧಿ ಜೊತೆಗೆ ಸೋನಿಯಾ ಕೂಡ ಸುಮಾರು 9 ಗಂಟೆಗೆ ಫರ್ಸ್ಟ್ ಗಂಜ್ ಏರ್ಪೋರ್ಟ್ ತಲುಪಲಿದ್ದಾರೆ. ಇಲ್ಲಿಂದ ಸುಮಾರು 9:30ಕ್ಕೆ ಕಾರಿನಲ್ಲಿ ಅತಿಥಿ ಗೃಹಕ್ಕೆ ಸೋನಿಯಾ ಆಗಮಿಸಲಿದ್ದಾರೆ.
ರಾಯ್ಬರೇಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಇಂದು ರಾಯ್ಬರೇಲಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಉಪಸ್ಥಿತರಿರುತ್ತಾರೆ. ಮಾಹಿತಿ ಪ್ರಕಾರ, ರಾಯ್ ಬರೇಲಿಯಿಂದ ಮತ್ತೆ ಸಂಸದರಾಗಿರುವ ಸೋನಿಯಾ ಗಾಂಧಿ ಮತದಾರರಿಗೆ ಧನ್ಯವಾದ ತಿಳಿಸುವ ಸಲುವಾಗಿ ತಮ್ಮ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಸೋನಿಯಾ ಗಾಂಧಿ ಭುಮು ಅಥಿತಿ ಗೃಹದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ. ಮಾಹಿತಿಯ ಪ್ರಕಾರ, ಪ್ರಿಯಾಂಕಾ ಗಾಂಧಿ ಜೊತೆಗೆ ಸೋನಿಯಾ ಕೂಡ ಸುಮಾರು 9 ಗಂಟೆಗೆ ಫರ್ಸ್ಟ್ ಗಂಜ್ ಏರ್ಪೋರ್ಟ್ ತಲುಪಲಿದ್ದಾರೆ. ಇಲ್ಲಿಂದ ಸುಮಾರು 9:30ಕ್ಕೆ ಕಾರಿನಲ್ಲಿ ಅತಿಥಿ ಗೃಹಕ್ಕೆ ಸೋನಿಯಾ ಆಗಮಿಸಲಿದ್ದಾರೆ.
ಸೋನಿಯಾ ಗಾಂಧಿಯವರು ಈ ವೇಳೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಗ್ಗೆ ಪರಿಶೀಲನೆ ನಡೆಸಲಿದ್ದು, 2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ತಂತ್ರಗಳನ್ನು ರೂಪಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಸೋನಿಯಾ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಕಾರ್ಮಿಕರನ್ನು ಮತ್ತು ರಾಯ್ಬರೇಲಿಯ ಮತದಾರರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಾರೆ. ಈ ವೇಳೆ ಪಕ್ಷವು ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡಿದವರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಪಕ್ಷದ ಎಲ್ಲಾ ಜಿಲ್ಲಾ ಮಟ್ಟದ ಅಧ್ಯಕ್ಷರು ಸೋನಿಯಾ, ಪ್ರಿಯಾಂಕರ ಸಭೆಯಲ್ಲಿ ಹಾಜರಿರಲಿದ್ದಾರೆ.