ನವದೆಹಲಿ: ಕುಟುಂಬ ರಾಜಕಾರಣದ ರಾಜಕೀಯದ ಅತಿದೊಡ್ಡ ವಿಭಾಗವೆಂದು ಪರಿಗಣಿಸಲ್ಪಟ್ಟ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಕುಟುಂಬದ ಅಧ್ಯಕ್ಷರನ್ನು ಆಯ್ಕೆ ಮಾಡುವ ಊಹಾಪೋಹಗಳು ತೀವ್ರಗೊಂಡಿವೆ. ಸುಮಾರು 1 ವರ್ಷದ ನಂತರ ಕಾಂಗ್ರೆಸ್ (Congress) ಪಕ್ಷವು ಪೂರ್ಣ ಸಮಯದ ಅಧ್ಯಕ್ಷರನ್ನು ಪಡೆಯಬಹುದು. 11 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ಆರಂಭವಾಗಿದ್ದು ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್‌ನಲ್ಲಿ ಸಂಘರ್ಷ, ಯಾರಿಗೆ ಒಲಿಯಲಿದೆ ಅಧ್ಯಕ್ಷರ ಪಟ್ಟ?
ಇಂದು ಸಿಡಬ್ಲ್ಯೂಸಿ (CWC) ಸಭೆಯಲ್ಲಿ ಹೊಸ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಸಂಭಾವ್ಯರ ಹೆಸರನ್ನು ಸೂಚಿಸುವ ಸಾಧ್ಯತೆ ಇದೆ. ಸಿಡಬ್ಲ್ಯೂಸಿ ಸಭೆಯ ಮೊದಲು ನಾನು ಮತ್ತೊಮ್ಮೆ ಅಧ್ಯಕ್ಷೆ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ (Sonia Gandhi) ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ಮತ್ತೊಮ್ಮೆ ರಾಹುಲ್ ಗಾಂಧಿಯವರನ್ನೇ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಬೇಡಿಕೆ ಹೆಚ್ಚಾಗಿದೆ. 


ಯೂತ್ ಕಾಂಗ್ರೆಸ್ ವತಿಯಿಂದ 'ಕೆಲಸ ನೀಡಿ' ಅಭಿಯಾನ


ಏತನ್ಮಧ್ಯೆ ಸೋನಿಯಾ ಗಾಂಧಿ ಈ ಹುದ್ದೆಯಿಂದ ಹೊರಗುಳಿಯುವ ಸುದ್ದಿಯನ್ನು ಕಾಂಗ್ರೆಸ್ ವಕ್ತಾರ ನಿರಾಕರಿಸಿದ್ದಾರೆ. ಈ ಸಭೆಯಲ್ಲಿ ಪಕ್ಷದ ಹೊಸ ಅಧ್ಯಕ್ಷರನ್ನು ನಿರ್ಣಯಿಸಬಹುದು ಎಂದು ವರದಿಯಾಗಿದೆ. 


ಕಾಂಗ್ರೆಸ್‌ನಲ್ಲಿ 'ಕುಟುಂಬ ರಾಜಕಾರಣ'?


  • ಸೋನಿಯಾ ಗಾಂಧಿ: ಅಧ್ಯಕ್ಷರು - 1998 ರಿಂದ 2017 ರವರೆಗೆ

  • ರಾಹುಲ್ ಗಾಂಧಿ: ಅಧ್ಯಕ್ಷರು - 2017 ರಿಂದ 2019 ರವರೆಗೆ

  • ಸೋನಿಯಾ ಗಾಂಧಿ: ಹಂಗಾಮಿ ಅಧ್ಯಕ್ಷರು - 2019


ಕಾಂಗ್ರೆಸ್ ಪಕ್ಷದಲ್ಲಿ ಹಲವು ದಶಕಗಳಿಂದ ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಿದ್ದು ಕುಟುಂಬ ರಾಜಕಾರಣದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಈ ಮಧ್ಯೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕ ಗಾಂಧಿ ಕಾಂಗ್ರೆಸ್ ಪಟ್ಟ ವಹಿಸಿಕೊಳ್ಳಲು ಸ್ಪಷ್ಟವಾಗಿ ನಿರಾಕರಿಸಿರುವುದರಿಂದ ಪಕ್ಷದ ಹಲವು ನಾಯಕರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಮುಖ್ಯವಾಗಿ ದಲಿತ ನಾಯಕರಿಗೆ ಈ ಸ್ಥಾನ ಸಿಗುವ ಸಾಧ್ಯತೆ ಇದೆ. ಅದರಲ್ಲೂ ಕರ್ನಾಟಕದವರೇ  ಆದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ. 


COVID-19 ಬಗ್ಗೆ ಮತ್ತೊಮ್ಮೆ ನಿಜವಾದ ರಾಹುಲ್ ಗಾಂಧಿ ಭವಿಷ್ಯ


ಇವೆಲ್ಲದರ ನಡುವೆಯೂ ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆ ಯಾರೇ ಕಾಂಗ್ರೆಸ್ ಅಧ್ಯಕ್ಷರಾದರೂ ಪಕ್ಷ ಹರಿದು ಹಂಚಿ ಹೋಗುವ ಭೀತಿ ಇದೆ. ಹಾಗಾಗಿ ರಾಹುಲ್ ಗಾಂಧಿಯವರೇ ಪಕ್ಷದ ಚುಕ್ಕಾಣಿ ಹಿಡಿಯಬೇಕು ಎಂಬ ಬೇಡಿಕೆಯೂ ಹೆಚ್ಚಾಗಿದೆ.


ಎಲ್ಲಾ ಊಹಾಪೋಹಗಳ ಮಧ್ಯೆ ಯಾರು ಮುಂದಿನ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ? ಸೋನಿಯಾ ಗಾಂಧಿಯವರೇ ಮುಂದುವರೆಯುವರೋ? ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ (Priyanka Gandhi)ಯವರಿಗೆ ಪಟ್ಟ ಕಟ್ಟಲಾಗುತ್ತದೆಯೋ? ಅಥವಾ ಹಲವು ವರ್ಷಗಳಿಂದ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ದುಡಿಯುತ್ತಿರುವ ನಾಯಕರಿಗೆ ಅಧ್ಯಕ್ಷಗಿರಿ ಒಲಿಯುವುದೋ ಎಂಬುದನ್ನು ಕಾದುನೋಡಬೇಕಿದೆ.