COVID-19 ಬಗ್ಗೆ ಮತ್ತೊಮ್ಮೆ ನಿಜವಾದ ರಾಹುಲ್ ಗಾಂಧಿ ಭವಿಷ್ಯ

ಮೊದಲಿಗೆ ಫೆಬ್ರವರಿ 12ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ದೇಶದಲ್ಲಿ COVID-19 ವೈರಸ್ ತನ್ನ ಕೆನ್ನಾಲಿಗೆ ಚಾಚಲಿದೆ. ಅದು ಸುನಾಮಿ ರೂಪದಲ್ಲಿ ಇರಲಿದೆ.  ಕೂಡಲೇ ಕೇಂದ್ರ ಸರ್ಕಾರ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದಿದ್ದರು. 

Last Updated : Aug 7, 2020, 09:25 AM IST
  • ಮೊದಲಿಗೆ ಫೆಬ್ರವರಿ 12ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ COVID-19 ವೈರಸ್ ತನ್ನ ಕೆನ್ನಾಲಿಗೆ ಚಾಚಲಿದೆ ಎಂದು ಭವಿಷ್ಯ ನುಡಿದಿದ್ದರು.
  • ಸದ್ಯ 136 ಕೋಟಿ ಜನಸಂಖ್ಯೆಯುಳ್ಳ ದೇಶದಲ್ಲಿ 2 ಕೋಟಿ ಜನರಿಗೆ ಮಾತ್ರ COVID-19 ಪರೀಕ್ಷೆ ನಡೆಸಲಾಗಿದೆ.
  • ದೇಶದ COVID-19 ವೈರಸ್ ಪೀಡಿತರ ಸಂಖ್ಯೆ 20 ಲಕ್ಷದ ಗಡಿ ದಾಟಿದ್ದು 6 ಲಕ್ಷಕ್ಕೂ ಹೆಚ್ಚು ಸಕ್ರಿಯವಾಗಿರುವ ಪ್ರಕರಣಗಳಿವೆ.
COVID-19 ಬಗ್ಗೆ ಮತ್ತೊಮ್ಮೆ ನಿಜವಾದ ರಾಹುಲ್ ಗಾಂಧಿ ಭವಿಷ್ಯ title=

ನವದೆಹಲಿ: COVID-19 ವೈರಸ್ ತಂದೊಡ್ಡುವ ಅಪಾಯಗಳ ಬಗ್ಗೆ ನಿಖರವಾಗಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ಹೇಳಿದ್ದ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ.

ಮೊದಲಿಗೆ ಫೆಬ್ರವರಿ 12ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಕೋವಿಡ್ -19 (COVID-19) ವೈರಸ್ ತನ್ನ ಕೆನ್ನಾಲಿಗೆ ಚಾಚಲಿದೆ. ಅದು ಸುನಾಮಿ ರೂಪದಲ್ಲಿ ಇರಲಿದೆ. ಕೂಡಲೇ ಕೇಂದ್ರ ಸರ್ಕಾರ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದಿದ್ದರು. ಆದರೆ ಆಗ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರು ರಾಹುಲ್ ಗಾಂಧಿ ನೀಡಿದ ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸಿದವು.

ಶಾಕಿಂಗ್! ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್ ಪತ್ತೆ: ಇದುವರೆಗೆ 7 ಸಾವು

ಇದಾದ ಬಳಿಕವೂ ರಾಹುಲ್ ಗಾಂಧಿ ಅವರು COVID-19 ವೈರಸ್ ವ್ಯಾಪಕವಾಗಿ ಹರಡುವ ಬಗ್ಗೆ, ಲಾಕ್ಡೌನ್ ಬಗ್ಗೆ, ಇವುಗಳು ದೇಶದ ಜನ ಜೀವನದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ನಿರಂತರವಾಗಿ ಎಚ್ಚರಿಸುತ್ತಲೇ ಇದ್ದಾರೆ. ಎಲ್ಲವೂ ಬಹುತೇಕ ರಾಹುಲ್ ಗಾಂಧಿ ಅವರು ಹೇಳಿದಂತೆಯೇ ಆಗುತ್ತಿದೆ.‌ ಅದೇ ರೀತಿ ಜುಲೈ 17ರಂದು ರಾಹುಲ್ ಗಾಂಧಿ ಅವರು 'ದೇಶದಲ್ಲಿ  COVID-19 ವೈರಸ್ ಹರಡುವಿಕೆ ಇದೇ ರೀತಿ ಮುಂದುವರೆದರೆ ಆಗಸ್ಟ್ 10ರೊಳಗೆ ದೇಶದ COVID-19 ವೈರಸ್ ಪೀಡಿತರ ಸಂಖ್ಯೆ 20 ಲಕ್ಷದ ಗಡಿ ದಾಟಲಿದೆ' ಎಂದು ಭವಿಷ್ಯ ನುಡಿದಿದ್ದರು.

ರಾಹುಲ್ ಗಾಂಧಿ ಅವರು ಹೇಳಿದ್ದ ಮಾತಿನಂತೆ ಈಗ ದೇಶದ COVID-19 ವೈರಸ್ ಪೀಡಿತರ ಸಂಖ್ಯೆ 20 ಲಕ್ಷದ ಗಡಿ ದಾಟಿದೆ. ಅಂದು ರಾಹುಲ್ ಗಾಂಧಿ  ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲೆಂದು ಇಂಥ ಭವಿಷ್ಯ ನುಡಿದಿದ್ದರು. ಆದರೆ COVID-19 ವೈರಸ್ ಹರಡುವಿಕೆ ತಡೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರಗಳು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳದ ಕಾರಣಕ್ಕೆ ಈಗ ಅವರ ಮಾತು ನಿಜವಾಗಿದೆ.

Good News: ಕೇವಲ 35 ರೂ.ಗೆ ಕೋವಿಡ್-19 ಚಿಕಿತ್ಸೆ, ಮಾರುಕಟ್ಟೆಗೆ ಬಂತು ಔಷಧ

ದೇಶದ COVID-19 ವೈರಸ್ ಪೀಡಿತರ ಸಂಖ್ಯೆ 20 ಲಕ್ಷದ ಗಡಿ ದಾಟಿದ್ದು 6 ಲಕ್ಷಕ್ಕೂ ಹೆಚ್ಚು ಸಕ್ರಿಯವಾಗಿರುವ ಪ್ರಕರಣಗಳಿವೆ. ಹಾಗಾಗಿ ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಮತ್ತು ರಾಹುಲ್ ಗಾಂಧಿ ಮೊದಲಿನಿಂದಲೂ COVID-19 ಪರೀಕ್ಷೆಗಳನ್ನು ಹೆಚ್ಚು ಮಾಡಿ, ಸೋಂಕು ಪೀಡಿತರನ್ನು ಕ್ವಾರಂಟೈನ್ ‌ಮಾಡಿ,‌ ಇದರಿಂದ COVID-19  ಇನ್ನೊಬ್ಬರಿಗೆ ಹರಡುವುದು ಕಡಿಮೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ.‌ ಈಗಲಾದರೂ ಕೇಂದ್ರ ಸರ್ಕಾರ ಆ ಕೆಲಸ ಮಾಡಬೇಕಿದೆ. ಸದ್ಯ 136 ಕೋಟಿ ಜನಸಂಖ್ಯೆಯುಳ್ಳ ದೇಶದಲ್ಲಿ 2 ಕೋಟಿ ಜನರಿಗೆ ಮಾತ್ರ COVID-19 ಪರೀಕ್ಷೆ ನಡೆಸಲಾಗಿದೆ.

Trending News