ನವದೆಹಲಿ: ಮಂಗಳವಾರದಂದು ತಮಿಳುನಾಡು ಸರ್ಕಾರವು  ಈ ವರ್ಷ 63 ಟಿಎಂಸಿ ನೀರನ್ನು ಬಿಡುಗಡೆ ಕೋರಿ ಸುಪ್ರಿಂಕೋರ್ಟ್ಗೆ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತು.ಇದಕ್ಕೂ ಮುಂಚೆ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ 2000 ಕ್ಯೂಸೆಕ್ಸ್ ನೀರನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಲು ನಿರ್ದೇಶನ ನೀಡಿತ್ತು, ಅಲ್ಲದೆ ಅದು ಎರಡು ರಾಜ್ಯಗಳು ಹಾನಿಯಾಗಿರುವ ಸಂಪತ್ತಿಗೆ ಪರಿಹಾರ ಕೋರಿ ಸುಪ್ರಿಂಕೋರ್ಟ್ ಗೆ ಸಲ್ಲಿಸಿದ ಅರ್ಜಿಯನ್ನು ಸಹ ಅದು ತಿರಸ್ಕರಿಸಿತ್ತು.


COMMERCIAL BREAK
SCROLL TO CONTINUE READING

ಕಾವೇರಿ ನದಿಯ ನೀರಿನ ವಿಚಾರವಾಗಿ ಎರಡು ರಾಜ್ಯಗಳ ನಡುವೆ ಹಲವಾರು ದಶಕಗಳಿಂದ ಜಗ್ಗ್ಗಾಜಗ್ಗಿ ನಡೆಯುತ್ತಲೇ ಬಂದಿದೆ.ಹಲವಾರು ವರ್ಷಗಳ ನಿರಂತರ ಮಾತುಕತೆಯಿಂದಾಗಿ  ಕಾವೇರಿ ನದಿ ನೀರಿನ ನ್ಯಾಯಧಿಕರಣದನ್ವಯ 419 ಬಿಲಿಯನ್ ft3 ನೀರು ತಮಿಳುನಾಡಿಗೆ ಮತ್ತು 270ft3  ನೀರು ಕರ್ನಾಟಕಕ್ಕೆ ಎಂದು ಅದು ವಿಂಗಡಿಸಿತ್ತು.ಆದರೂ ಸಹ ಈ ವಿವಾದವು ಇಂದಿಗೂ ಪರಿಹಾರವನ್ನು ಕಂಡುಕೊಳ್ಳಲು ವಿಫಲವಾಗಿದೆ.


ಈ ಹಿಂದೆ ಸುಪ್ರಿಂಕೋರ್ಟ್ ಮತ್ತು ಕಾವೇರಿ ನದಿಯ ನ್ಯಾಯಾಧಿಕರಣ ತೀರ್ಪಿನ ಹೊರತಾಗಿಯೂ ಕೂಡ ಕರ್ನಾಟಕವು ತನ್ನ ಬಳಿ ಅಷ್ಟು ಪ್ರಮಾಣದ ನೀರಿಲ್ಲ ಎಂದು ಕಾರಣ ನೀಡಿ  ಕೋರ್ಟ್ ಮತ್ತು ನ್ಯಾಯಾಧಿಕರಣದ ಆದೇಶವನ್ನು ತಿರಸ್ಕರಿಸಿದ್ದನ್ನು ನಾವು ಸ್ಮರಿಸಬಹುದು.