EPFO: ನೀವು ಉದ್ಯೋಗ ಬದಲಿಸುವಾಗ ಎಂದಿಗೂ ಈ ತಪ್ಪು ಮಾಡಬೇಡಿ
EPF Passbook: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರತಿಯೊಬ್ಬ ಇಪಿಎಫ್ ಸದಸ್ಯರು ಅನುಸರಿಸಬೇಕಾದ ನಿಯಮಗಳನ್ನು ಹೊಂದಿದೆ. ಅದರಲ್ಲೂ ವಿಶೇಷವಾಗಿ ಉದ್ಯೋಗಗಳನ್ನು ಬದಲಾಯಿಸುವಾಗ...
ನವದೆಹಲಿ: EPF Passbook: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರತಿಯೊಬ್ಬ ಇಪಿಎಫ್ ಸದಸ್ಯರು ಅನುಸರಿಸಬೇಕಾದ ನಿಯಮಗಳನ್ನು ಹೊಂದಿದೆ. ಅದರಲ್ಲೂ ವಿಶೇಷವಾಗಿ ಉದ್ಯೋಗಗಳನ್ನು ಬದಲಾಯಿಸುವಾಗ... ಸಾಮಾನ್ಯವಾಗಿ, ಇಪಿಎಫ್‌ಒ ಚಂದಾದಾರರು ತಮ್ಮ ಇಪಿಎಫ್ ಖಾತೆ ಸಂಖ್ಯೆ ಮತ್ತು ಯುಎಎನ್(UAN) ಹೊಂದಿರಬೇಕು. ಇದು ಅವರ ಅಸ್ತಿತ್ವದಲ್ಲಿರುವ ಇಪಿಎಫ್ ಖಾತೆ ಅಥವಾ ಭವಿಷ್ಯ ನಿಧಿ ಖಾತೆಯನ್ನು ಮುಂದುವರಿಸಲು ಸಾಕು ಎಂದು ಭಾವಿಸಿದ್ದಾರೆ ಈ ಕಲ್ಪನೆ ಸಂಪೂರ್ಣವಾಗಿ ತಪ್ಪಾಗಿದೆ.
ಉದ್ಯೋಗ ಬದಲಾಯಿಸುವ ಸಮಯದಲ್ಲಿ, ಉದ್ಯೋಗಿಗಳು ತಮ್ಮ ಇಪಿಎಫ್ ಪಾಸ್‌ಬುಕ್ ಅನ್ನು ಉದ್ಯೋಗದಾತರಿಂದ ನವೀಕರಿಸಬೇಕಾಗಿರುವುದರಿಂದ ಹೊಸ ನೇಮಕಾತಿಯಲ್ಲಿ ಅದೇ ಇಪಿಎಫ್ ಖಾತೆಯೊಂದಿಗೆ ಮುಂದುವರಿಯಬಹುದು. ಇಪಿಎಫ್‌ಒ ನಿಯಮಗಳ ಪ್ರಕಾರ, ನೌಕರರು ತಮ್ಮ ಕೆಲಸದಿಂದ ನಿರ್ಗಮಿಸದ ಹೊರತು, ಅವರು ಇಪಿಎಫ್ ಬ್ಯಾಲೆನ್ಸ್ ವರ್ಗಾಯಿಸಲು ಅಥವಾ ಹಿಂಪಡೆಯಲು ಸಾಧ್ಯವಿಲ್ಲ.
ಕೆಲಸ ಬದಲಾಯಿಸುವ ಸಮಯದಲ್ಲಿ ಇಪಿಎಫ್ ಸದಸ್ಯನು ಮಾಡುವ ಸಾಮಾನ್ಯ ತಪ್ಪುಗಳ ಬಗ್ಗೆ ವಿವರಿಸುತ್ತಾ, SEBI ನೋಂದಾಯಿತ ತೆರಿಗೆ ಮತ್ತು ಹೂಡಿಕೆ ತಜ್ಞ ಜಿತೇಂದ್ರ ಸೋಲಂಕಿ, "ಉದ್ಯೋಗವನ್ನು ಬದಲಾಯಿಸುವಾಗ, ನೌಕರರು ಪ್ರಸ್ತುತ ನೇಮಕಾತಿಯ ನಿರ್ಗಮನ ನಿಯಮಗಳನ್ನು ಪಾಲಿಸಬೇಕು ಮತ್ತು ಪ್ರಸ್ತುತ ಉದ್ಯೋಗದಾತರಿಂದ ರಿಲೀವಿಂಗ್ ಲೆಟರ್ ಅನ್ನು ಪಡೆಯಬೇಕು. ಆದರೆ, ರಿಲೀವಿಂಗ್ ಲೆಟರ್ ಮತ್ತು ಪೂರ್ಣ ಮತ್ತು ಅಂತಿಮ ಪಾವತಿಯನ್ನು ಪಡೆದರಷ್ಟೇ ಸಾಕಾಗುವುದಿಲ್ಲ. ಈಗ, ಇಪಿಎಫ್ ಸದಸ್ಯರೊಬ್ಬರು ನಿರ್ಗಮನ ಔಪಚಾರಿಕ ಸಮಯದಲ್ಲಿ ಪ್ರಸ್ತುತ ಉದ್ಯೋಗದಾತರಿಂದ ಒಬ್ಬರ ಇಪಿಎಫ್ ಪಾಸ್‌ಬುಕ್ ಅನ್ನು ನವೀಕರಿಸಬೇಕಾಗಿದೆ. ಏಕೆಂದರೆ ಉದ್ಯೋಗದಾತರು ಸೇರ್ಪಡೆ ಮತ್ತು ನಿರ್ಗಮನ ದಿನಾಂಕದ ಬಗ್ಗೆ ಇಪಿಎಫ್‌ಒ ಅನ್ನು ನವೀಕರಿಸಬೇಕಾಗುತ್ತದೆ. ಉದ್ಯೋಗದಾತ ಇದನ್ನು ಮಾಡದಿದ್ದರೆ, ಉದ್ಯೋಗಿ ಪಿಎಫ್ ಖಾತೆ ಸಂಖ್ಯೆ ಮತ್ತು ಯುಎಎನ್ ಹೊಂದಿದ್ದರೂ ಸಹ, ಹೊಸ ನೇಮಕಾತಿಯೊಂದಿಗೆ ಪ್ರಸ್ತುತ ಭವಿಷ್ಯ ನಿಧಿ ಖಾತೆಯನ್ನು ಮುಂದುವರಿಸಲು ತೊಂದರೆ ಎದುರಿಸಬೇಕಾಗುತ್ತದೆ. "
ಹಿಂದಿನ ಉದ್ಯೋಗದಾತರಿಂದ ಇಪಿಎಫ್ ಪಾಸ್‌ಬುಕ್ ಅನ್ನು ನವೀಕರಿಸದಿದ್ದಲ್ಲಿ ಇಪಿಎಫ್ ಸದಸ್ಯನು ಕಳೆದುಕೊಳ್ಳಬಹುದಾದ ಭವಿಷ್ಯ ನಿಧಿ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ ಟ್ರಾನ್ಸ್‌ಸೆಂಡ್ ಕನ್ಸಲ್ಟೆಂಟ್ಸ್‌ನ ವೆಲ್ತ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಕಾರ್ತಿಕ್ ಜಾವೇರಿ, ಇಪಿಎಫ್ ಪಾಸ್‌ಬುಕ್ ನವೀಕರಿಸದಿದ್ದರೆ, ಇಪಿಎಫ್ ಸದಸ್ಯರು ಭಾಗಶಃ ಪಿಎಫ್ ಹಿಂಪಡೆಯುವಿಕೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಇಪಿಎಫ್ ಖಾತೆದಾರನು ಇನ್ನು ಮುಂದೆ ಇಪಿಎಫ್‌ಒನ ಖಾಯಂ ಸದಸ್ಯನಾಗಿ ಉಳಿಯುವುದಿಲ್ಲ. ಅದಲ್ಲದೆ ಅವರ ಮಾಸಿಕ ಪಿಎಫ್ ಕಡಿತವು ಸಾಧ್ಯವಾಗುವುದಿಲ್ಲ - ಅಂದರೆ ನೌಕರರ ಪಿಎಫ್ ಖಾತೆಯನ್ನು ನಿಲ್ಲಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ಮಾನದಂಡಗಳಲ್ಲಿ ನೌಕರರು ಕೆಲಸದಿಂದ ನಿರ್ಗಮಿಸದ ಹೊರತು, ಅವರು ಪಿಎಫ್ ಹಿಂಪಡೆಯಲು ಅಥವಾ ಪಿಎಫ್ ವರ್ಗಾವಣೆಗೆ ಹೋಗಲು ಸಾಧ್ಯವಿಲ್ಲ ಎಂದು ಸೋಲಂಕಿ ತಿಳಿಸಿದ್ದಾರೆ. ಆದ್ದರಿಂದ, ಉದ್ಯೋಗ ಬದಲಾಯಿಸುವ ಸಮಯದಲ್ಲಿ ನೇಮಕಾತಿ ಮಾಡುವವರಿಂದ ಇಪಿಎಫ್ ಸದಸ್ಯರ ಇಪಿಎಫ್ ಪಾಸ್ಬುಕ್ ನವೀಕರಣವು ಕಡ್ಡಾಯವಾಗಿದೆ ಎಂದವರು ತಿಳಿಸಿದ್ದಾರೆ.