Swiss Bank Account List - ಸ್ವಿಟ್ಜರ್ಲೆಂಡ್ (Switzerland) ಸ್ವಿಸ್ ಬ್ಯಾಂಕಿನಲ್ಲಿ  ಭಾರತೀಯರು ಹೊಂದಿರುವ ಬ್ಯಾಂಕ್ ಖಾತೆಗಳ ವಿವರಗಳ ಮೂರನೇ ಪಟ್ಟಿಯನ್ನು (Swiss Bank Account List) ಭಾರತಕ್ಕೆ (India) ಹಸ್ತಾಂತರಿಸಿದೆ. ಯುರೋಪಿಯನ್ ದೇಶವು ಸುಮಾರು 33 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು 96 ದೇಶಗಳೊಂದಿಗೆ ವಾರ್ಷಿಕ  ಆಯಾಮದಲ್ಲಿ ಹಂಚಿಕೊಂಡಿದೆ. ಈ ವರ್ಷ ಮಾಹಿತಿ (Swiss Bank) ವಿನಿಮಯದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ, ಅಜೆರ್ಬೈಜಾನ್, ಡೊಮಿನಿಕಾ, ಘಾನಾ, ಲೆಬನಾನ್, ಮಕಾವು, ಪಾಕಿಸ್ತಾನ, ಕತಾರ್, ಸಮೋವಾ ಮತ್ತು ವುವಾಟು ಗಳಂತಹ ಹೆಚ್ಚುವರಿ 10 ದೇಶಗಳು ಭಾಗಿಯಾಗಿವೆ ಎಂದು ಸ್ವಿಟ್ಜರ್ಲೆಂಡ್‌ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (FTA) ಹೇಳಿಕೆಯಲ್ಲಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಒಟ್ಟು 70 ದೇಶಗಳೊಂದಿಗೆ ಮಾಹಿತಿ ವಿನಿಮಯ
ಸ್ವಿಟ್ಜರ್ಲೆಂಡ್ ಸ್ವಿಸ್ ಬ್ಯಾಂಕ್ ಖಾತೆಗಳ ಪಟ್ಟಿಯನ್ನು 70 ದೇಶಗಳೊಂದಿಗೆ ಹಂಚಿಕೊಂಡಿದ್ದು, 26 ದೇಶಗಳ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಏಕೆಂದರೆ ಆ ದೇಶಗಳು (14 ದೇಶಗಳು) ಗೌಪ್ಯತೆ ಮತ್ತು ದತ್ತಾಂಶ ಭದ್ರತೆಯ ಕುರಿತು ಅಂತರರಾಷ್ಟ್ರೀಯ ಅವಶ್ಯಕತೆಗಳನ್ನು ಇನ್ನೂ ಪೂರೈಸಿಲ್ಲ ಅಥವಾ ಅವು (12 ದೇಶಗಳು) ಡೇಟಾವನ್ನು ಪಡೆದುಕೊಳ್ಳುವುದು ಅಗತ್ಯವೆಂದು ಪರಿಗಣಿಸಲಿಲ್ಲ. ಆದರೆ, ಎಲ್ಲಾ 96 ದೇಶಗಳ ಹೆಸರುಗಳು ಮತ್ತು ಹೆಚ್ಚಿನ ವಿವರಗಳನ್ನು FTA ಬಹಿರಂಗಪಡಿಸಲಿಲ್ಲ.


ಇದನ್ನೂ ಓದಿ-Swiss Bankನಲ್ಲಿ ಭಾರತೀಯರು ಹೊಂದಿರುವ ಕಪ್ಪು ಹಣ ಎಷ್ಟು? ನಿಜಾಂಶ ಹೊರಹಾಕಿದ ಸರ್ಕಾರ


ಭಾರತಕ್ಕೆ ಸತತ ಮೂರನೇ ಬಾರಿಗೆ ದೊರೆತ ಮಾಹಿತಿ 
ಭಾರತವು ಸತತ ಮೂರನೇ ವರ್ಷ ಮಾಹಿತಿಯನ್ನು ಪಡೆದ ದೇಶಗಳಲ್ಲಿ ಒಂದಾಗಿದೆ ಮತ್ತು ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾದ ವಿವರಗಳು ಹೆಚ್ಚಿನ ಸಂಖ್ಯೆಯಲ್ಲಿ  ವೈಯಕ್ತಿಕ ಮತ್ತು ಕಂಪನಿಗಳ ಖಾತೆಗಳಿಗೆ ಸಂಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿನಿಮಯವು ಕಳೆದ ತಿಂಗಳು ನಡೆದಿದೆ ಮತ್ತು ಸ್ವಿಟ್ಜರ್ಲೆಂಡ್ ಮುಂದಿನ ಪಟ್ಟಿಯನ್ನು ಸೆಪ್ಟೆಂಬರ್ 2022 ರಲ್ಲಿ ಹೆಂಚಿಕೊಳ್ಳಲಿದೆ. ಭಾರತವು 2019 ರ ಸೆಪ್ಟೆಂಬರ್‌ನಲ್ಲಿ ಸ್ವಯಂಚಾಲಿತ ಮಾಹಿತಿ ವಿನಿಮಯ (AEOI) ಅಡಿಯಲ್ಲಿ ಸ್ವಿಟ್ಜರ್ಲೆಂಡ್‌ನಿಂದ ಮೊದಲ ಪಟ್ಟಿಯನ್ನು ಪಡೆದಿತ್ತು. ಈ ಮಾಹಿತಿಯನ್ನು ಕಳೆದ ವರ್ಷ 86 ದೇಶಗಳಿಗೆ ನೀಡಲಾಗಿದೆ.


ಇದನ್ನೂ ಓದಿ-ಕಾಳಧನ ಹೊಂದಿದವರ ವಿರುದ್ಧ ದೂರು ಸಲ್ಲಿಸಿ, 5 ಕೋಟಿ ರೂ.ಸಂಪಾದಿಸಿ


ಈ ಪಟ್ಟಿಯಲ್ಲಿ NRIಗಳೂ ಕೂಡ ಶಾಮೀಲಾಗಿದ್ದಾರೆ
ತಜ್ಞರ ಪ್ರಕಾರ, ಭಾರತ ಪಡೆದ AEOI ದತ್ತಾಂಶವು ದೊಡ್ಡ ಆಸ್ತಿ ಹೊಂದಿರುವವರ ವಿರುದ್ಧ ಬಲವಾದ ಪ್ರಕರಣವನ್ನು ನಿರ್ಮಿಸುವಲ್ಲಿ ಬಹಳ ಸಹಾಯಕವಾಗಿದೆ. ಸ್ವಿಸ್ ಬ್ಯಾಂಕ್ ನಿಂದ ಎಲ್ಲಾ ರೀತಿಯ ವಹಿವಾಟು ಮತ್ತು ಆಸ್ತಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅನಾಮಧೇಯ ಸ್ಥಿತಿಯಲ್ಲಿ, ಹೆಚ್ಚಿನ ಉದ್ಯಮಿಗಳ ಹೆಸರುಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳಲ್ಲಿ ಇದೀಗ ಅನೇಕರು ಆಗ್ನೇಯ ಏಷ್ಯಾದ ದೇಶಗಳು ಹಾಗೂ ಯುಎಸ್, ಯುಕೆ ಮತ್ತು ಕೆಲವು ಆಫ್ರಿಕನ್ ಮತ್ತು ದಕ್ಷಿಣ ಅಮೆರಿಕನ್ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾಗಿದ್ದಾರೆ. 


ಇದನ್ನೂ ಓದಿ -ಮೊದಲ ಬಾರಿಗೆ ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಪಡೆದ ಭಾರತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ