ಕಾಳಧನ ಹೊಂದಿದವರ ವಿರುದ್ಧ ದೂರು ಸಲ್ಲಿಸಿ, 5 ಕೋಟಿ ರೂ.ಸಂಪಾದಿಸಿ

ಈ ಕುರಿತು ಮಾಹಿತಿ ನೀಡಿರುವ ಸಿಬಿಡಿಟಿ, ತನ್ನ ಇ-ಫೈಲಿಂಗ್ ಪೋರ್ಟಲ್ https://www.incometaxindiaefiling.gov.in ನಲ್ಲಿ ಸೋಮವಾರ, 'ತೆರಿಗೆ ವಂಚನೆ ಅಥವಾ ಬೆನಾಮಿ ಆಸ್ತಿ ಹಿಡುವಳಿ ಬಗ್ಗೆ ಮಾಹಿತಿ ನೀಡುವ' ಲಿಂಕ್ ಅನ್ನು ಸಕ್ರೀಯಗೊಳಿಸಲಾಗಿದೆ ಎಂದು ಹೇಳಿದೆ .

Written by - Nitin Tabib | Last Updated : Jan 13, 2021, 06:45 PM IST
  • ತೆರಿಗೆ ವಂಚನೆ ಮಾಡುವವರೇ ಕೂಡಲೇ ಎಚ್ಚೆತ್ತುಕೊಳ್ಳಿ.
  • ಕಪ್ಪುಹಣ ಹೊಂದಿದವರ ವಿರುದ್ಧ ಕ್ರಮಕೈಗೊಳ್ಳಲು ಪೋರ್ಟಲ್ ಬಿಡುಗಡೆ ಮಾಡಿದೆ.
  • ಈ ಪೋರ್ಟಲ್ ಮೂಲಕ ತೆರಿಗೆ ವಂಚನೆ ಮಾಡುವವರ ವಿರುದ್ಧ ಯಾರು ಬೇಕಾದರೂ ಪ್ರಕರಣ ದಾಖಲಿಸಬಹುದು.
ಕಾಳಧನ ಹೊಂದಿದವರ ವಿರುದ್ಧ ದೂರು ಸಲ್ಲಿಸಿ, 5 ಕೋಟಿ ರೂ.ಸಂಪಾದಿಸಿ title=
Black Money (ಪ್ರತಿಕಾತ್ಮಕ ಚಿತ್ರ)

ನವದೆಹಲಿ: ತೆರಿಗೆ ವಂಚನೆ ಮಾಡುವವರೇ ಕೂಡಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಕಪ್ಪುಹಣ ಹೊಂದಿದವರ ಮೇಲೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ದೊಡ್ಡ ಹೆಜ್ಜೆಯೊಂದನ್ನು ಇರಿಸಿದೆ. ಆದಾಯ ತೆರಿಗೆ ಇಲಾಖೆ ಇದೀಗ ಪೋರ್ಟಲ್ ವೊಂದನ್ನು ಬಿಡುಗಡೆ ಮಾಡಿದ್ದು,ಈ ಪೋರ್ಟಲ್ ಮೂಲಕ ತೆರಿಗೆ ವಂಚನೆ ಮಾಡುವವರ ವಿರುದ್ಧ ಯಾರು ಬೇಕಾದರೂ ಪ್ರಕರಣ ದಾಖಲಿಸಬಹುದು. ಈ ಕುರಿತು ಮಾಹಿತಿ ನೀಡಿರುವ ಸಿಬಿಡಿಟಿ, ತನ್ನ ಇ-ಫೈಲಿಂಗ್ ಪೋರ್ಟಲ್ https://www.incometaxindiaefiling.gov.in ನಲ್ಲಿ ಸೋಮವಾರ, 'ತೆರಿಗೆ ವಂಚನೆ ಅಥವಾ ಬೆನಾಮಿ ಆಸ್ತಿ ಹಿಡುವಳಿ ಬಗ್ಗೆ ಮಾಹಿತಿ ನೀಡುವ' ಲಿಂಕ್ ಅನ್ನು ಸಕ್ರೀಯಗೊಳಿಸಲಾಗಿದೆ ಎಂದು ಹೇಳಿದೆ . ಒಂದು ವೇಳೆ ಸಲ್ಲಿಸಲಾಗಿರುವ ಮಾಹಿತಿ ಸರಿ ಎಂದು ಸಾಬೀತಾದಲ್ಲಿ ಮಾಹಿತಿ ನೀಡಿದವರಿಗೆ 5 ಕೋಟಿ.ರೂ.ವರೆಗೆ ಬಹುಮಾನ ಕೂಡ ನೀಡಲಾಗುವುದು ಎಂದಿದೆ.

ದೂರು ಸಲ್ಲಿಸುವವರು ತಮ್ಮ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ನೀಡುವ ಆವಶ್ಯಕತೆ ಇಲ್ಲ
ಈ ಪೋರ್ಟಲ್ ನಲ್ಲಿ ದೂರು ನೀಡುವವರ ಮಾಹಿತಿ ಗೌಪ್ಯವಾಗಿಡಲಾಗುವುದು ಎಂದಿರುವ ಇಲಾಖೆ, ಮಾಹಿತಿ ನೀಡುವವರಿಂದ ಪ್ಯಾನ್ ಕಾರ್ಡ್ ಆಗಲಿ ಅಥವಾ ಆಧಾರ್ ಕಾರ್ಡ್ ಆಗಲಿ ಪಡೆಯಲಾಗುವುದಿಲ್ಲ ಎಂದು ಹೇಳಿದೆ. ಆದರೆ ದೂರು ನೀಡುವವರು ತಮ್ಮ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಬೇಕು. ಏಕೆಂದರೆ ದೂರು ದಾಖಲಿಸಲು OTP ಆವಶ್ಯಕತೆ ಇದೆ. OTP ಇಲ್ಲದೆ ಪೋರ್ಟಲ್ ನಲ್ಲಿ ಯಾವುದೇ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ .

ಇದನ್ನು ಓದಿ-ಮೊದಲ ಬಾರಿಗೆ ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಪಡೆದ ಭಾರತ

ಮೂರು ವಿವಿಧ ಫಾರ್ಮ್ ಗಳನ್ನು ಜಾರಿಗೊಳಿಸಲಾಗಿದೆ
ಆದಾಯ ತೆರಿಗೆ ಕಾಯ್ದೆ 1961ರ ಅಡಿ ಅಘೋಷಿತ ಆಸ್ತಿ ಹಾಗೂ ಬೇನಾಮಿ ವ್ಯವಹಾರ ತಡೆ ಕಾನೂನಿನ ಅಡಿ ಮೂರು ವಿವಿಧ ಫಾರ್ಮ್ ನಲ್ಲಿ ದೂರು ದಾಖಲಿಸಬಹುದು. ಮೂರು ಫಾರ್ಮ್ ಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಇದನ್ನು ಓದಿ- ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ನಾವೆಂದೂ ಹೇಳಿಲ್ಲ: ರಾಜನಾಥ್ ಸಿಂಗ್

5 ಕೋಟಿ ರೂ.ಬಹುಮಾನ
ವರ್ತಮಾನದಲ್ಲಿ ಜಾರಿಗೊಳಿಸಲಾಗಿರುವ ಯೋಜನೆಯ ಪ್ರಕಾರ ಬೇನಾಮಿ ಆಸ್ತಿ ಪ್ರಕರಣದಲ್ಲಿ 1 ಕೋಟಿ ಹಾಗೂ ವಿದೇಶಗಳಲ್ಲಿ ಕಪ್ಪುಹಣ (Black Money) ಹೊಂದುವಿಕೆ ಸೇರಿದಂತೆ ಇತರೆ ತೆರಿಗೆ ಕಳ್ಳತನ ಪ್ರಕರಣಗಳಲ್ಲಿ ಕೆಲ ಷರತ್ತುಗಳೊಂದಿಗೆ 5 ಕೋಟಿ ರೂ. ಬಹುಮಾನ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹೊಸ ವ್ಯವಸ್ಥೆಯ ಅಡಿಯಲ್ಲಿ ಯಾವುದೇ ವ್ಯಕ್ತಿ ಇನ್ಫಾರ್ಮರ್ ಆಗಬಹುದು ಹಾಗೂ ಬಹುಮಾನ ಕೂಡ ಗೆಲ್ಲಬಹುದು.

ಇದನ್ನು ಓದಿ-ಚುನಾವಣೆಯಲ್ಲಿ ಕಪ್ಪುಹಣದ ಬಳಕೆ ಮೇಲೆ ನೋಟು ನಿಷೇಧ ಯಾವುದೇ ಪ್ರಭಾವ ಬೀರಿಲ್ಲ-ಒಪಿ ರಾವತ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News