ಚೆನ್ನೈ: ಡಿಎಂಕೆ ವರಿಷ್ಠ ನಾಯಕ ಎಂ.ಕೆ.ಸ್ಟಾಲಿನ್‌ ಅವರ ಪುತ್ರ ಉದಯನಿಧಿ ಸ್ಟಾಲಿನ್‌ ಈ ಬಾರಿ ಚುನಾವಣೆ ಅಖಾಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಡಿಎಂಕೆ ಯುವ ಘಟಕದ ಮುಖ್ಯಸ್ಥರೂ ಆಗಿರುವ ಅವರು ಚೆಪಾಕ್‌ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಸ್ಟಾಲಿನ್‌ ಅವರು ಪಕ್ಷದ 173 ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದರು. ಕೊಳತ್ತೂರು ಕ್ಷೇತ್ರದಿಂದಲೇ ಸ್ಟಾಲಿನ್(MK Stalin)‌ ಪುನರಾಯ್ಕೆ ಬಯಸಿದ್ದಾರೆ. ಉಪ ಮುಖ್ಯಮಂತ್ರಿ ಓ.ಪನ್ನೀರ್‌ ಸೆಲ್ವಂ ಸ್ಪರ್ಧಿಸಿರುವ ಭೋದಿನಾಯಕನೂರು ಕ್ಷೇತ್ರದಿಂದ ಟಿ.ತಮಿಳ್‌ ಸೆಲ್ವನ್‌ ಡಿಎಂಕೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿಸೆಲ್ವನ್‌ ಅವರು ಥೇಣಿ ಕ್ಷೇತ್ರದಲ್ಲಿ ಸೆಲ್ವಂ ಪುತ್ರನ ವಿರುದ್ಧ ಸ್ಪರ್ಧಿಸಿ ಸೋತಿದ್ದರು.


Bengal Elections 2021: ಪ. ಬಂಗಾಳ ಎಲೆಕ್ಷನ್ : 'ಕಾಂಗ್ರೆಸ್ ಸ್ಟಾರ್ ಪ್ರಚಾರಕ'ರಾಗಿ ಖರ್ಗೆ, ಹರಿಪ್ರಸಾದ್!


ಹಿರಿಯ ನಾಯಕ ಟಿ.ಆರ್‌.ಬಾಲು ಅವರ ಪುತ್ರ ಟಿ.ಆರ್‌.ಬಿ. ರಾಜಾ ಅವರಿಗೆ ಮುನ್ನಾರ್‌ಗುಡಿ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ವೈಕೊ ಅವರ ಎಂಡಿಎಂಕೆ(ADMK)ಯ ಆರು ಮತ್ತು ಇತರ ಸಣ್ಣಪುಟ್ಟ ಪಕ್ಷಗಳ ಎಂಟು ಅಭ್ಯರ್ಥಿಗಳು ಸಹ ಡಿಎಂಕೆ ಚಿಹ್ನೆ ಅಡಿಯಲ್ಲಿಯೇ ಸ್ಪರ್ಧಿ ಸಲಿದ್ದಾರೆ. ''ಡಿಎಂಕೆ ಚಿಹ್ನೆಯಲ್ಲಿ ಒಟ್ಟು 187 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನಾವು ಎಲ್ಲ234 ಕ್ಷೇತ್ರಗಳಲ್ಲಿಸ್ಪರ್ಧೆ ಮಾಡುತ್ತಿದ್ದೇವೆ ಎಂಬ ಭಾವನೆಯಿಂದಲೇ ಕೆಲಸ ಮಾಡಬೇಕು. ತಲೈವರ್‌ ಕಲೈಗ್ನರ್‌ (ಎಂ.ಕರುಣಾನಿಧಿ) ನಮ್ಮೊಂದಿದೇ ಇದ್ದಾರೆ ಎಂಬುದಾಗಿ ಭಾವಿಸಿಕೊಂಡು ಪಕ್ಷದ ಯಶಸ್ಸಿಗಾಗಿ ಶ್ರಮಿಸಬೇಕು,'' ಎಂದು ಪಟ್ಟಿ ಬಿಡುಗಡೆ ಬಳಿಕ ಸ್ಟಾಲಿನ್‌ ಮನವಿ ಮಾಡಿದರು.


Yashwant Sinha: ಬಿಜೆಪಿ ಮಾಜಿ ನಾಯಕ 'ಯಶವಂತಸಿನ್ಹಾ' ಟಿಎಂಸಿ ಪಾರ್ಟಿ ಸೇರ್ಪಡೆ!


ಇದಕ್ಕೂ ಮುನ್ನ ಅವರು ಕರುಣಾನಿಧಿ ಅವರ ಸಮಾಧಿಗೆ ತೆರಳಿ ಪಟ್ಟಿಯನ್ನು ಸಮಾಧಿ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿದರು. ಕೋವಿಲಪಟ್ಟಿಯಿಂದ ದಿನಕರನ್‌: ಅಮ್ಮಾ ಮಕ್ಕಳ ಮುನ್ನೇತ್ರ ಕಳಗಂ (AMMK) ಮುಖ್ಯಸ್ಥ ಟಿ.ಟಿ.ವಿ. ದಿನಕರನ್‌ ಅವರು ಕೋವಿಲಪಟ್ಟಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ತಾವೂ ಸೇರಿದಂತೆ 130 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ದಿನಕರನ್‌ ಬಿಡುಗಡೆ ಮಾಡಿದ್ದಾರೆ.


NEET UG 2021 Exam: ಆಗಸ್ಟ್ 1 ರಿಂದ NEET ಪರೀಕ್ಷೆ, ಹಿಂದಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.