ತಮಿಳುನಾಡು: ತಮಿಳುನಾಡಿ(Tamil Nadu)ನಲ್ಲಿ ಯುವಕನೊಬ್ಬ ಟೀ ಶರ್ಟ್ ಕದಿಯಲು ಯತ್ನಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಟೀ ಶರ್ಟ್ ಗಳನ್ನು ಒಂದರ ಮೇಲೊಂದರಂತೆ ಧರಿಸಿ, ಕೆಲವನ್ನು ತನ್ನ ಧೋತಿಯಲ್ಲಿಟ್ಟುಕೊಂಡು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆದರೆ ಬಟ್ಟೆ ಅಂಗಡಿಯ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾನೆ.


COMMERCIAL BREAK
SCROLL TO CONTINUE READING

ಯುವಕ ಅಂಗಡಿಗೆ ಬಂದು ಟೀ ಶರ್ಟ್ ಕದಿಯಲು ಯತ್ನಿಸಿರುವ ವಿಡಿಯೋ ಅಲ್ಲಿನ ಸಿಸಿಟಿವಿ ಕ್ಯಾಮೆರಾ(CCTV Camera)ದಲ್ಲಿ ಸೆರೆಯಾಗಿದೆ. ಹೇಗೋ ಮಾಡಿ ಟೀ ಶರ್ಟ್ ಕದ್ದು ಎಸ್ಕೇಪ್ ಆಗಬೇಕೆಂದು ಪ್ರಯತ್ನಿಸಿದ್ದ ಯುವಕ ಅಂಗಡಿಯ ಮಾಲೀಕರ ಕೈಗೆ ಸಿಕ್ಕಿಬಿದ್ದು ಪೆಚ್ಚನಾಗಿದ್ದಾನೆ. ಆತನನ್ನು ತುತುಕುಡಿಯ ಸೆಲ್ವಮಧನ್ ಎಂದು ಗುರುತಿಸಲಾಗಿದೆ. ತಮಿಳುನಾಡಿನ ತಿಸಾಯನವಿಲೈ ಬಳಿಯ ಬಟ್ಟೆ ಅಂಗಡಿಯಲ್ಲಿ ಈ ಘಟನೆ ನಡೆದಿದೆ.


ಇದನ್ನೂ ಓದಿ: ಎರಡು ಅಗ್ಗದ Planಗಳನ್ನು ಕೈ ಬಿಟ್ಟ Jio,ಜೊತೆಗೆ ಈ ಆಫರ್ ಕೂಡಾ ಸ್ಥಗಿತ


ಗೌರಿ-ಗಣೇಶ್ ಹಬ್ಬ(Gowri-Ganesha Festival)ದ ನಿಮಿತ್ತ ಬಟ್ಟೆ ಅಂಗಡಿಗೆ ನೂರಾರು ಗ್ರಾಹಕರು ಆಗಮಿಸಿದ್ದರು. ಅಂಗಡಿ ಸಿಬ್ಬಂದಿ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಅಂಗಡಿಯಲ್ಲಿನ ಜನದಟ್ಟಣೆಯ ಲಾಭವನ್ನು ಪಡೆಯಲು ಸೆಲ್ವಮಧನ್ ಪ್ರಯತ್ನಿಸಿದ್ದಾನೆ. ಮೊದಲು ಅಂಗಡಿಗೆ ಆಗಮಿಸಿದ ಯುವಕ ಟೀ ಶರ್ಟ್ ಗಳು ಎಲ್ಲಿವೆ ಎಂದು ಕೆಲಸಗಾರರನ್ನು ಕೇಳಿದ್ದಾನೆ. ಬಳಿಕ ಕೆಲವು ಟೀ ಶರ್ಟ್ ಗಳನ್ನು ತೆಗೆದುಕೊಂಡು ಡ್ರೆಸ್ಸಿಂಗ್ ರೂಂಗೆ ಹೋಗಿದ್ದಾನೆ.


ಡೆಸ್ಸಿಂಗ್ ರೂಂಗೆ ಹೋದ ಸೆಲ್ವಮಧನ್ ಒಂದರ ಮೇಲೊಂದರಂತೆ ಟೀ ಶರ್ಟ್(T-shirts)ಧರಿಸಿ ಹೊರಗಡೆ ಬಂದಿದ್ದಾನೆ. ಈ ವೇಳೆ ನೀನು ತೆಗೆದುಕೊಂಡ ಹೋದ ಟೀ ಶರ್ಟ್ ಗಳು ಎಲ್ಲಿ ಎಂದು ಕೆಲಸಗಾರರು ಪ್ರಶ್ನಿಸಿದ್ದಾರೆ. ಟೀ ಶರ್ಟ್ ಸೈಜ್ ನನಗೆ ಹೊಂದಾಣಿಕೆಯಾಗಿಲ್ಲವೆಂದು ಅವುಗಳನ್ನು ಫಿಟ್ಟಿಂಗ್ ಕೋಣೆಯಲ್ಲಿಯೇ ಬಿಟ್ಟಿದ್ದೇನೆ ಎಂದು ಸಬೂಬು ಹೇಳಿ ಪಾರಾಗಲು ಯತ್ನಿಸಿದ್ದಾನೆ.


ಇದನ್ನೂ ಓದಿ: ಬಿಜೆಪಿ ಸಂಸದನ ಮನೆ ಸಮೀಪ ಬಾಂಬ್ ದಾಳಿ: ಟಿಎಂಸಿ ವಿರುದ್ಧ ಆಕ್ರೋಶ..!


ಸೆಲ್ವಮಧನ್ ನಡೆಯಿಂದ ಅನುಮಾನಗೊಂಡ ಕೆಲಸಗಾರರು ಅಂಗಡಿ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಕರೆದು ವಿಚಾರಿಸಿದಾಗ ಆತ 5 ಟೀ ಶರ್ಟ್ ಧರಿಸಿ, ಇನ್ನೈದು ಟೀ ಶರ್ಟ್ ಗಳನ್ನು ಧೋತಿಯಲ್ಲಿಟ್ಟುಕೊಂಡಿವುದು ಗೊತ್ತಾಗಿದೆ. ಯುವಕನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೂ ಆತನ ವಿರುದ್ಧ ಅಂಗಡಿ ಮಾಲೀಕರು ದೂರು ನೀಡಿಲ್ಲ. ಎಲ್ಲಾ ಟೀ ಶರ್ಟ್ ಬಿಚ್ಚಿಡುವಂತೆ ಹೇಳಿ ಆತನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.


ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ…


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.