ಬಿಜೆಪಿ ಸಂಸದನ ಮನೆ ಸಮೀಪ ಬಾಂಬ್ ದಾಳಿ: ಟಿಎಂಸಿ ವಿರುದ್ಧ ಆಕ್ರೋಶ..!

ಕೋಲ್ಕತಾದಿಂದ 100 ಕಿ.ಮೀ ದೂರದಲ್ಲಿರುವ ಜಗತ್ದಾಲ್ ಪ್ರದೇಶದಲ್ಲಿರುವ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಮನೆ ಸಮೀಪವೇ ಕಚ್ಚಾ ಬಾಂಬ್ ಗಳನ್ನು ಎಸೆಯಲಾಗಿದೆ.

Written by - Puttaraj K Alur | Last Updated : Sep 8, 2021, 12:10 PM IST
  • ಕೋಲ್ಕತಾದಿಂದ 100 ಕಿ.ಮೀ ದೂರದಲ್ಲಿರುವ ಜಗತ್ದಾಲ್ ಪ್ರದೇಶದಲ್ಲಿರುವ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಮನೆ
  • ಬೈಕ್ ನಲ್ಲಿ ಮೂವರು ದುಷ್ಕರ್ಮಿಗಳು ಮನೆ ಸಮೀಪವೇ 3 ಕಚ್ಚಾ ಬಾಂಬ್ ಎಸೆದು ಪರಾರಿಯಾಗಿದ್ದಾರೆ
  • ಟಿಎಂಸಿ ಕಾರ್ಯಕರ್ತರೇ ಬಾಂಬ್ ದಾಳಿ ನಡೆಸಿದ್ದಾರೆಂದು ಆರೋಪಿಸಿದ ಬಿಜೆಪಿ, ಪೊಲೀಸರಿಂದ ತನಿಖೆ
ಬಿಜೆಪಿ ಸಂಸದನ ಮನೆ ಸಮೀಪ ಬಾಂಬ್ ದಾಳಿ: ಟಿಎಂಸಿ ವಿರುದ್ಧ ಆಕ್ರೋಶ..! title=
ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಬಳಿ ಬಾಂಬ್ ದಾಳಿ (Photo Courtesy: @ANI)

ಕೋಲ್ಕತಾ​: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಸಂಸದ ಅರ್ಜುನ್ ಸಿಂಗ್(BJP MP Arjun Singh) ನಿವಾಸದ ಸಮೀಪ ಬುಧವಾರ ನಸುಕಿನ ವೇಳೆ 3 ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲವೆಂದು ತಿಳಿದುಬಂದಿದೆ.  

ಕೋಲ್ಕತಾ(Kolkata)ದಿಂದ 100 ಕಿ.ಮೀ ದೂರದಲ್ಲಿರುವ ಜಗತ್ದಾಲ್ ಪ್ರದೇಶದಲ್ಲಿರುವ ಬಿಜೆಪಿ(BJP) ಸಂಸದ ಅರ್ಜುನ್ ಸಿಂಗ್ ಮನೆ ಸಮೀಪವೇ ಕಚ್ಚಾ ಬಾಂಬ್(Bomb) ಗಳನ್ನು ಎಸೆಯಲಾಗಿದೆ. ಇಂದು ಬೆಳಗ್ಗೆ 6.30ರ ವೇಳೆ ಬೈಕ್ ನಲ್ಲಿ ಆಗಮಿಸಿದ್ದ ಮೂವರು ದುಷ್ಕರ್ಮಿಗಳು 3 ಬಾಂಬ್ ಗಳನ್ನು ಎಸೆದು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆಂದು ತಿಳಿದುಬಂದಿದೆ. ಘಟನೆ ನಡೆದ ಸಂದರ್ಭದಲ್ಲಿ ಅರ್ಜುನ್ ಸಿಂಗ್ ಅವರು ಮನೆಯಲ್ಲಿರಲಿಲ್ಲ. ಆದರೆ ಅವರ ಕುಟುಂಬ ಸದಸ್ಯರು ಮಾತ್ರ ಮನೆಯೊಳಗೆ ಇದ್ದರು. ಸಿಂಗ್ ನಿವಾಸದ ಹೊರಗೆ ಪೊಲೀಸ್ ಕಾವಲಿದ್ದರೂ ಈ ಘಟನೆ ನಡೆದಿದೆ ಅಂತಾ ತಿಳದುಬಂದಿದೆ.

ಇದನ್ನೂ ಓದಿ: Sukanya Samriddhi Yojana: ಈ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದು ಡಬಲ್ ಲಾಭ ಪಡೆಯಿರಿ

ಬಾಂಬ್ ದಾಳಿಯ ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ದೆಹಲಿಯಲ್ಲಿರುವ  ಸಂಸದ ಅರ್ಜುನ್ ಸಿಂಗ್(Arjun Singh) ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬುಧವಾರ ಸಂಜೆ ವೇಳೆಗೆ ಅವರು ಕೋಲ್ಕತಾ(Kolkata)ಗೆ ವಾಪಸ್ ಆಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಬಳಿ ಬಾಂಬ್ ದಾಳಿ ನಡೆಸಿದವರು ಬಹುಶಃ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿರಬಹುದು ಎಂದು ಬಿಜೆಪಿ ಅಧ್ಯಕ್ಷ ದಿಲೀಫ್ ಘೋಷ್ ಆರೋಪಿಸಿದ್ದಾರೆ.  ಆದಾಗ್ಯೂ, ಟಿಎಂಸಿ ಬಿಜೆಪಿಯ ಆರೋಪವನ್ನು ನಿರಾಕರಿಸಿದೆ ಮತ್ತು ಈ ದಾಳಿಯು ಬಂಗಾಳ ಬಿಜೆಪಿಯಲ್ಲಿನ ಆಂತರಿಕ ವೈಷಮ್ಯದ ಪರಿಣಾಮ ಎಂದು ಹೇಳಿದೆ.

ಇದನ್ನೂ ಓದಿ: PM Kisan: ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯುವುದು ಇನ್ನೂ ಸುಲಭ, ಎಸ್‌ಬಿಐನಲ್ಲಿ ಕೆಸಿಸಿಗೆ ಈ ರೀತಿ ಅರ್ಜಿ ಸಲ್ಲಿಸಿ

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್(Jagdeep Dhankhar) ಕೂಡ ಟ್ವೀಟ್ ಮಾಡುವ ಮೂಲಕ ಈ ಘಟನೆಯನ್ನು ಖಂಡಿಸಿದ್ದಾರೆ. ‘ಬಾಂಬ್ ದಾಳಿ ನಡೆದಿರುವುದು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ಮೂಡಿಸಿದೆ’ ಎಂದಿರುವ ಅವರು, ತಪ್ಪಿತಸ್ಥರ ವಿರುದ್ಧ ತ್ವರಿತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಅಪರಾಧಿಗಳನ್ನು ಗುರುತಿಸಲು ಮತ್ತು ದಾಳಿಯ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಲು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಂಗ್ ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News