ಹೈದರಾಬಾದ್: ಮಾರಕ  ಕರೋನಾವೈರಸ್ (Coronavirus)  ನಿಯಂತ್ರಣಕ್ಕೆ ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್​​ಡೌನ್ ಅವಧಿಯನ್ನು ತೆಲಂಗಾಣದಲ್ಲಿ ವಿಸ್ತರಿಸಲು ಮುಖ್ಯಮಂತ್ರಿ ಕೆ. ಚಂದ್ರಶೇಖರ್​​ ರಾವ್ (K Chandrasekhar Rao) ಚಿಂತನೆ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಹಿಂದೆ ಇಡೀ ದೇಶ 21 ದಿನ  ಲಾಕ್‌ಡೌನ್ (Lockdown)  ಮಾಡಲಾಗಿದ್ದರೂ, ಈ ಅವಧಿಯಲ್ಲಿ ಯಾರೂ ಮನೆಯಿಂದ ಹೊರಗೆಬಾರದಂತೆ ಮನವಿ ಮಾಡಿದ್ದರೂ ತೆಲಂಗಾಣದಲ್ಲಿ ಜನ ಗುಂಪು ಸೇರುತ್ತಿದ್ದರು. ಇದರ ಬೆನ್ನಲ್ಲೇ ತೆಲಂಗಾಣದಲ್ಲಿ ಏ.14ರವರೆಗೆ ಇದ್ದ ಈ ಲಾಕ್​​ಡೌನ್​​ ಅವಧಿಯನ್ನು ಮೊದಲಿಗೆ ಇನ್ನೆರಡು ದಿನಕ್ಕೆ ಅಂದರೆ ಏ.16ರವರೆಗೂ ವಿಸ್ತರಿಸಲಾಗಿತ್ತು. ಆದರೀಗ ಮತ್ತೆ ಅವಧಿ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.


ಏಪ್ರಿಲ್ 7 ರೊಳಗೆ ತೆಲಂಗಾಣ Coronavirus ಮುಕ್ತವಾಗಲಿದೆ: ಸಿಎಂ ಕೆಸಿಆರ್ ವಿಶ್ವಾಸ


ಪ್ರಧಾನಿ ಮೋದಿ ಜೊತೆ ದೂರವಾಣಿಯಲ್ಲಿ ಮಾತನಾಡುವ ವೇಳೆ ಲಾಕ್ ಡೌನ್ ಅವಧಿ ವಿಸ್ತರಿಸುವುದೇ ಸೂಕ್ತ ಎಂದು ಚಂದ್ರಶೇಖರ್ ಹೇಳಿದ್ದಾರೆಂದು ತಿಳಿದುಬಂದಿದೆ. ಬಹಳಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ತೆಲಾಂಗಣದಲ್ಲಿ ಕರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಚಂದ್ರಶೇಖರ್ ರಾವ್ ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.


ಕೋವಿಡ್ 19 ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್​​ಡೌನ್ ಮಾಡಲಾಗಿದೆ. ಹಾಗಾಗಿ ಜನ ಮನೆಯಲ್ಲೇ ಇರಬೇಕು. ಒಂದು ವೇಳೆ ಜನ ಲಾಕ್​​ಡೌನ್ ಉಲ್ಲಂಘಿಸುವುದನ್ನು ಮುಂದುವರಿಸಿದಲ್ಲಿ ನಾನು ಕಂಡಲ್ಲಿ ಗುಂಡಿಕ್ಕಿ ಆದೇಶ ಜಾರಿಗೊಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ತೆಲಂಗಾಣದಲ್ಲಿ ಇಲ್ಲಿಯವರೆಗೂ ಸುಮಾರು 400 ಪ್ರಕರಣಗಳು ಕಂಡು ಬಂದಿವೆ.