ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಮತ್ತೊಂದು ಭರ್ಜರಿ ಗೆಲುವಿನತ್ತ ಸಾಗುತ್ತಿರುವಾಗ ಅಭಿನಂದನಾ ಸಂದೇಶಗಳು ಹರಿಯಲಾರಂಭಿಸಿದವು.


COMMERCIAL BREAK
SCROLL TO CONTINUE READING

ಚುನಾವಣಾ ತಂತ್ರಜ್ಞ  ಪ್ರಶಾಂತ್ ಕಿಶೋರ್ ಅವರ ತಂಡ ಈ ಬಾರಿಯ ಎಎಪಿ ಅಭಿಯಾನವನ್ನು ರೂಪಿಸಿ ಪಕ್ಷವು ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ಆಮ್ ಆದ್ಮಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ ' ಭಾರತದ ಆತ್ಮ ರಕ್ಷಣೆಗೆ ನಿಂತ ದೆಹಲಿಗೆ ಧನ್ಯವಾದಗಳು' ಎಂದು ಅವರು ಟ್ವೀಟ್ ಮಾಡಿದ್ದಾರೆ.



ಕಿಶೋರ್ ಅವರು ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯಗಳನ್ನು ಮತ್ತು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ರಹಸ್ಯವಾಗಿರಿಸಿಲ್ಲ, ಅದರ ಸುತ್ತ ಬಿಜೆಪಿ ತನ್ನ ಅಭಿಯಾನವನ್ನು ನಿರ್ಮಿಸಿದೆ. ಜೆಡಿಯುನಲ್ಲಿ ನೀತಿಶ್ ಕುಮಾರ್ ಅವರ ಆಪ್ತ ಸಹಾಯಕರಾಗಿದ್ದ ಪ್ರಶಾಂತ್ ಕಿಶೋರ್ ಅವರು ಇತ್ತೀಚಿಗೆ ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ಬಗೆಗಿನ ನಿಲುವಿನ ಬಗ್ಗೆ ತಮ್ಮ ಮುಖ್ಯಸ್ಥರೊಂದಿಗೆ ವಾರಗಟ್ಟಲೆ ಆಕ್ರೋಶ ವ್ಯಕ್ತಪಡಿಸಿದ ನಂತರ ಅವರನ್ನು ಕೈಬಿಡಲಾಯಿತು.


ದೆಹಲಿಯಲ್ಲಿ, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಕುರಿತ ಪ್ರತಿಭಟನೆಗಳ ನೆರಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಪ್ರಚಾರವು ಹೆಚ್ಚು ಧ್ರುವೀಕರಣಗೊಂಡಿತು. ಬಿಜೆಪಿ ಮುಖಂಡರು ಮತ್ತು ಕೇಂದ್ರ ಸಚಿವರ ದ್ವೇಷ ಭಾಷಣಗಳೊಂದಿಗೆ ಹೊಸ ಮಟ್ಟವನ್ನು ಮುಟ್ಟಿತು. ಬಿಜೆಪಿ ಹಿರಿಯ ನಾಯಕರ ಸಾರ್ವಜನಿಕ ಸಭೆಗಳಲ್ಲಿ "ಗೋಲಿ ಮಾರೊ" ಘೋಷಣೆಗಳನ್ನು ಎತ್ತಲಾಯಿತು ಮತ್ತು ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಕೇಂದ್ರ ಸಚಿವರು ಸಾರ್ವಜನಿಕವಾಗಿ "ಭಯೋತ್ಪಾದಕ" ಎಂದು ಕರೆದರು.