ನವದೆಹಲಿ :  ಮದುವೆಯ ನಂತರ ನವ ವಧು ಅತ್ತೆಯ ಮನೆಗೆ ಬಂದಾಗ, ಅವಳಿಗೆ ಅದ್ದೂರಿ ಸ್ವಾಗತ ಸಿಗುತ್ತದೆ. ಅತ್ತೆ, ಸೊಸೆ ಮತ್ತು ಮಾವ ಹೀಗೆ ಇಡೀ ಪರಿವಾರ ಸೇರಿ ಭವ್ಯ ಸ್ವಾಗತ ನೀಡುತ್ತದೆ. ಇದಷ್ಟೇ ಅಲ್ಲ, ನೆರೆಹೊರೆಯ ಜನರು ಕೂಡ ನವ ವಧುವನ್ನು ಸ್ವಾಗತಿಸಲು, ಅಲ್ಲಿ ಸೇರುತ್ತಾರೆ. ಒಂದು ವೇಳೆ, ಮನೆಗೆ ಬರುವ ವಧುವಿಗೆ ಸರಿಯಾದ ಸ್ವಾಗತ ಸಿಕ್ಕಿಲ್ಲ ಎಂದಾದರೆ ಆಕೆಗೆ ಸಾಕಷ್ಟು ಬೇಸರವೂ ಆಗುತ್ತದೆ. ಪ್ರಸ್ತುತ, ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಅತ್ತೆ ಮನೆಗೆ ಬಂದ ವಧು ನಯ ನಾಜೂಕಿನಿಂದ ಇರುವುದನ್ನು ಕಾಣುತ್ತೇವೆ. ಆದರೆ ಈ ವಧು ಮಾತ್ರ ಉಗ್ರ ರೂಪವನ್ನೇ ತಾಳಿದ್ದಾಳೆ.  ವಧು ಹೀಗೆ ಮಾಡಬಹುದು ಎನ್ನುವುದನ್ನು ಅಲ್ಲಿದ್ದ ಯಾರೂ ಯೋಚಿಸಿರಲಿಲ್ಲ. 


COMMERCIAL BREAK
SCROLL TO CONTINUE READING

 ಕೋಪಗೊಂಡು ಛಾವಣಿ ಏರಿದ ವಧು : 
 ಕೋಪಗೊಂಡ ವಧುವನ್ನು ಮನವೊಲಿಸುವುದು ತುಂಬಾ ಕಷ್ಟ. ಹೌದು, ಅಂತರ್ಜಾಲದಲ್ಲಿ (Internet) ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ (Viral video) ಇದನ್ನೇ ಕಾಣಬಹುದು. ವಧು ತನ್ನ ಅತ್ತೆಯ ಮನೆಗೆ ಬಂದಾಗ, ಅವಳು ತುಂಬಾ ಕೋಪಗೊಂಡಂತೆ ಕಾಣುತ್ತಾಳೆ. ಅತ್ತೆಯ ಮನೆಯಲ್ಲಿದ್ದ ಎಲ್ಲರೂ ಆಕೆಯ ಮನವೊಲಿಸಲು ಯತ್ನಿಸುತ್ತಿರುವುದನ್ನು ಕಾಣಬಹುದು.  ವರ ಕೂಡಾ ಆಕೆಯ ಮನವೊಲಿಕೆಗೆ ಸರ್ವ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಕೋಪದಿಂದ ಏಣಿಯ ಮೂಲಕ   ಮನೆಯ ಪ್ರವೇಶ ದ್ವಾರದ ತಾರಸಿ ಮೇಲೆ ಏರಿ ಕುಳಿತ ವಧು (Bride) ಅಲ್ಲಿಂದ ಕದಲುವಂತೆ ಕಾಣುತ್ತಿಲ್ಲ. 



 


ಇದನ್ನೂ ಓದಿ : Viral Video: ವರ ತಾಳಿ ಕಟ್ಟುತ್ತಿದ್ದ ವೇಳೆ ವಧು ಏಕೆ ಹೀಗೆ ಮಾಡಿದಳು..?
  
ಇಷ್ಟು ಮಾತ್ರವಲ್ಲ, ಛಾವಣಿ ಏರಿದ ನಂತರ ವಧು, ಏಣಿಯನ್ನು ಕಾಲಿನಿಂದ ಒದ್ದು ದೂರ ತಳ್ಳುತ್ತಾಳೆ. ಕೆಳಗಿನಿಂದ ವರ ಸೇರಿದಂತೆ ಇಡೀ ಕುಟುಂಬವು ಆತನ ಮನವೊಲಿಸಲು ಶ್ರಮಿಸುತ್ತಿದೆ. , ಆದರೆ ವಧು ಯಾವುದಕ್ಕೂ ಕ್ಯಾರೇ ಅನ್ನುತ್ತಿಲ್ಲ. ಕೆಲವು ಸೆಕೆಂಡುಗಳ ಈ ವಿಡಿಯೋ ಅಂತರ್ಜಾಲದಲ್ಲಿ ತೀವ್ರ ವೈರಲ್ (Viral video) ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ನಿರಂಜನ್ ಮೊಹಾಪಾತ್ರ ಎಂಬ ಖಾತೆಯಿಂದ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಈ ವೀಡಿಯೊ ಅಪ್‌ಲೋಡ್ ಮಾಡಲಾಗಿದೆ.  ಜನರು ಅದನ್ನು ತುಂಬಾ ಇಷ್ಟಪಟ್ಟಿದ್ದಾರೆ. 


ಇದನ್ನೂ ಓದಿ :Video Viral- ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ವಿಶೇಷ ರೀತಿಯಲ್ಲಿ ಪ್ರೇರೇಪಿಸುತ್ತಿರುವ ವ್ಯಕ್ತಿ ವಿಡಿಯೋ ವೈರಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.