ಅಲಿಗಢ : ಕರ್ನಾಟಕದಿಂದ ಆರಂಭವಾದ ಹಿಜಾಬ್ ವಿವಾದ (Hijab Controversy) ನಿಧಾನವಾಗಿ ಇಡೀ ದೇಶಕ್ಕೆ ಹರಡಿದೆ. ಹಿಜಾಬ್ ವಿವಾದದ ಪ್ರಕರಣ, ಕರ್ನಾಟಕ ಹೈಕೋರ್ಟ್‌ನಲ್ಲಿ (Karnataka High Court) ವಿಚಾರಣೆ ನಡೆಯುತ್ತಿದ್ದು, ತೀರ್ಪು ಬರಬೇಕಿದೆ.  ಈ ಮಧ್ಯೆ, ಉತ್ತರ ಪ್ರದೇಶದ ಅಲಿಗಢದ ಡಿಎಸ್ ಕಾಲೇಜು (DS College) ಸಮವಸ್ತ್ರ ಧರಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೋಲೆ ಹೊರಡಿಸಿದೆ. ನಿಯಮಗಳನ್ನು ಉಲ್ಲಂಘಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ಸಮವಸ್ತ್ರವಿಲ್ಲದೆ ಕಾಲೇಜಿಗಿಲ್ಲ ಪ್ರವೇಶ : 
ಅಲಿಘರ್‌ನ ಡಿಎಸ್ ಕಾಲೇಜಿನಲ್ಲಿ (DS College)ನಿಗದಿತ ಸಮವಸ್ತ್ರವಿಲ್ಲದೆ, ವಿದ್ಯಾರ್ಥಿಗಳಿಗೆ ಕಾಲೇಜು  ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ರಾಜ್ ಕುಮಾರ್ ವರ್ಮಾ, ವಿದ್ಯಾರ್ಥಿಗಳು ಮುಖ ಮುಚ್ಚಿಕೊಂಡು ಕ್ಯಾಂಪಸ್‌ಗೆ ಪ್ರವೇಶಿಸುವಂತಿಲ್ಲ ಎಂದಿದ್ದಾರೆ. ಕಾಲೇಜು ಆವರಣದೊಳಗೆ ಕೇಸರಿ ಶಾಲು ಅಥವಾ ಹಿಜಾಬ್ (Hijab) ಧರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 


ಇದನ್ನೂ ಓದಿ : ಪಂಜಾಬಿ ನಟ ದೀಪ್ ಸಿಧು ಸಾವಿನ ಪ್ರಕರಣ : ಆರೋಪಿ ಟ್ರಕ್ ಚಾಲಕ ಬಂಧನ


ಈ ಕಾಲೇಜಿನ ಆದೇಶದ ಬಗ್ಗೆ ವಿವಾದ ಪ್ರಾರಂಭವಾಗಬಹುದು :
ಡಿಎಸ್ ಕಾಲೇಜಿನ (DS College)ಈ ಆದೇಶದ ಮೇಲೆ ವಿವಾದ ಪ್ರಾರಂಭವಾಗಬಹುದು ಎಂದು ಹೇಳಲಾಗಿದೆ. ಯಾಕೆಂದರೆ ಯಾವುದೇ ವಿದ್ಯಾರ್ಥಿಗೆ ಕೇಸರಿ ಶಾಲು ಅಥವಾ ಹಿಜಾಬ್ ಧರಿಸಿ (Saffron Stole or Hijab)ಕಾಲೇಜು ಆವರಣಕ್ಕೆ ಪ್ರವೇಶಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. 


ಎಲ್ಲಿಂದ ಆರಂಭವಾಯಿತು ವಿವಾದ :
ಕರ್ನಾಟಕದ ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಮೊದಲ ಬಾರಿಗೆ 6 ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವಂತೆ ಒತ್ತಾಯಿಸಿದ್ದರು (Hijab Contraversy). ಕಳೆದ ಹಲವಾರು ವರ್ಷಗಳಿಂದ ಇಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದು,  ಇದ್ದಕ್ಕಿದ್ದಂತೆ ಅವರು ಹಿಜಾಬ್ ಧರಿಸುವ ಬಗ್ಗೆ ಒತ್ತಾಯ ಆರಂಭಿಸಿದ್ದಾರೆ. ಸ ಇಲ್ಲಿಂದ ಈ ಹಿಜಾಬ್ ವಿವಾದ ಆರಂಭವಾಗಿದೆ. 


ಇದನ್ನೂ ಓದಿ : Pension Scheme : ಅಂಗಡಿಕಾರರಿಗೆ ಸಿಗಲಿದೆ ₹3000 ಪಿಂಚಣಿ : ಇಂದೇ ಈ ಸರ್ಕಾರಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.