ಮಧ್ಯ ಪ್ರದೇಶ: ಅನಾರೋಗ್ಯಕ್ಕೆ ಒಳಗಾದ ರೋಗಿಯನ್ನು ಆಸ್ಪತ್ರೆಗೆ ತೋರಿಸಲು ಹೋದ ಮಾವನಿಗೆ ಸ್ಟ್ರೆಚರ್ ಸಿಗದಕ್ಕೆ ಸೊಸೆ ಹಾಳೆಯಲ್ಲಿ ಎಳೆದೊಯ್ದಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಈ ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಈ ಘಟನೆಯು ಗ್ವಾಲಿಯರ್ ನ ಹೊರ ವಲಯದಲ್ಲಿ ನಡೆದಿದೆ.  ಮಾವ ವಿಪಿನ್ ಓಜಾ ಸೈಕಲ್ ಸವಾರಿ ಮಾಡುವಾಗ ಕೆಳಗೆ ಬಿದ್ದು  ಆತನ ಬಲಗಾಲು ಮುರಿದಿತ್ತು ಹೀಗಾಗಿ ಆತನ ಸೊಸೆಯು ಮಾವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾಳೆ. ಆ ವೇಳೆ  ಅವಳು ತನ್ನ ಮಾವನನ್ನು ಮತ್ತೊಂದು ಕಟ್ಟಡಕ್ಕೆ ಸಾಗಿಸಬೇಕಾಗಿತ್ತು ಆ ವೇಳೆ ಆಕೆಗೆ ಆಸ್ಪತ್ರೆ ಸ್ಟ್ರೆಚರ್ ಸಿಗದ ಕಾರಣ  ಚೀಲದಂಹ ಹಾಳೆಯಲ್ಲಿ ಮಾವನನ್ನು ಎಳೆದಿರುವ ವಿಡೀಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 


ಇದನ್ನೂ ಓದಿ: Flying Snake : ಗಾಳಿಯಲ್ಲಿ ಹಾರಾಡುವ ಹಾವು! ಮೈನವಿರೇಳಿಸುವ ವಿಡಿಯೋ ವೈರಲ್‌


ಘಟನೆ ನಡೆದಿರುವ ಈ ಆಸ್ಪತ್ರೆಯು  ಗ್ವಾಲಿಯರ್ ವಲಯದಲ್ಲಿ  ಹೊಸದಾಗಿ 397 ಕೋಟಿ ವೆಚ್ಚ ನಿರ್ಮಾಣವಾಗಿರುವ  ಈ ಆಸ್ಪತ್ರೆ  ತುರ್ತ ಪರಿಸ್ಥಿತಿಗೆ ಸ್ಟ್ರೆಚರ್ ವ್ಯವಸ್ಥೆ ಸಿಗದಿರುವುದು ದುಸ್ಥಿತಿಗೆ ಕಾರಣವಾಗಿದೆ.   ಆಸ್ಪತ್ರೆ  ದುಸ್ಥಿತಿ ಬಗ್ಗೆ  ಹಂಚಿಕೊಂಡಿರುವ ಮಧ್ಯಪ್ರದೇಶದ ಕಾಂಗ್ರೇಸ್‌ ಎಂಪಿಯಾಗಿರುವ ಶ್ರೀ ಶಿವರಾಜ್, ಮಧ್ಯಪ್ರದೇಶದ ಆಡಳಿತದ  ಮುಜುಗರಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ. ನಿಮ್ಮ ದುರಾಡಳಿತದಿಂದ  ರಾಜ್ಯವೇ  ನಾಚಿಕೆಪಡುವಂತೆ ಮಾಡಿದೆ ಎಂದು ಕಾಂಗ್ರೇಸ್‌ ಅಲ್ಲಿನ  ಸರ್ಕಾರದ ಬಗ್ಗೆ ಕಿಡಿಕಾರಿದ್ಧಾರೆ. 


ಶಾಲಾ ತಪಾಸಣೆ ವೇಳೆ ಸಾರಾಯಿ, ಕಾಂಡೋಮ್ ಪತ್ತೆ..! https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.