Viral Video: ಅತ್ತಿಗೆ ಮತ್ತು ಮೈದುನನ ಸಂಬಂಧ ತಾಯಿ ಮಗನಿಗೆ ಸಮಾನ ಎನ್ನುತ್ತಾರೆ. ಅಷ್ಟೊಂದು ಪರಿಶುದ್ಧವಾಗಿರುತ್ತದೆ. ಇದರ ಹೊರತಾಗಿ ಕೂಡ ಪರಸ್ಪರ ಆತ್ಮೀಯ ಸ್ನೇಹಿತರಂತೆ ಜೊತೆಯಾಗಿರುತ್ತಾರೆ. ಇವೆಲ್ಲದಕ್ಕೂ ಮೀರಿ ಅತ್ತಿಗೆಯ ಜೊತೆ ಮೈದುನ ಜಗಳವಾಡುವುದನ್ನು ಸಹ ನೀವು ಅನೇಕ ಬಾರಿ ನೋಡಿರಬಹುದು. ಆದರೆ ಇಂದು ನಾವು ನಿಮಗಾಗಿ ಈ ಸಂಬಂಧದ ಅತ್ಯುತ್ತಮ ಬಾಂಧವ್ಯದ ವೀಡಿಯೊವನ್ನು ತೋರಿಸಲಿದ್ದೇವೆ.
ಇದನ್ನೂ ಓದಿ: Transgender salon: ದೇಶದಲ್ಲಿ ಆರಂಭವಾಯ್ತು ಮಂಗಳ ಮುಖಿಯರ ಮೊದಲ ಹೇರ್ ಸಲೂನ್!
ಹೌದು, ಪ್ರತಿನಿತ್ಯ ನೀವು ಸೋಶಿಯಲ್ ಮೀಡಿಯಾದಲ್ಲಿ ಗಂಡ-ಹೆಂಡತಿ, ಅಣ್ಣ-ತಂಗಿ ಹೀಗೆ ಎಲ್ಲಾ ರೀತಿಯ ಸಂಬಂಧಗಳಿಗೆ ಸಂಬಂಧಿಸಿದ ಫನ್ನಿ ವೀಡಿಯೋಗಳನ್ನು ನೋಡುತ್ತಿರಬಹುದು. ಆದರೆ ಇಂದು ನಾವು ತಂದಿರುವ ವಿಡಿಯೋ ಅತ್ತಿಗೆ ಮೈದುನನ ಡ್ಯಾನ್ಸ್’ಗೆ ಸಂಬಂಧಿಸಿದ್ದು. ಈ ವಿಡಿಯೋದಲ್ಲಿ ಇಬ್ಬರೂ ಸಖತ್ ಆಗಿ ಕುಣಿಯುತ್ತಿದ್ದಾರೆ. ಇವರ ಪರಿಶುದ್ಧ ಬಾಂಧವ್ಯ ಕಂಡರೆ ಮನಸ್ಸು ತೃಪ್ತಿಯಾಗುತ್ತದೆ.
ಹಳ್ಳಿಯ ಮನೆಗಳಲ್ಲಿ ಸೊಸೆಯಂದಿರು ಪರ್ದಾವನ್ನು ಅನುಸರಿಸಬೇಕು. ಪರ್ದಾ ಅಂದರೆ ಮುಖಕ್ಕೆ ಸೀರೆಯ ಸೆರಗನ್ನು ಪರದೆಯಂತೆ ಹಾಕಿಕೊಳ್ಳುವುದು. ಇದರ ಅರ್ಥ ಪರರು ಆ ಮಹಿಳೆಯನ್ನ ನೋಡಬಾರದು ಎಂಬುದಾಗಿದೆ. ಆದರೆ ಇಂದು ಈ ವಿಡಿಯೋದಲ್ಲಿ ಅತ್ತಿಗೆ ಡ್ಯಾನ್ಸ್ ಮಾಡುತ್ತಿದ್ದರೆ ಮೈದುನ ರಕ್ಷಕನಂತೆ ಕಾಯುತ್ತಿದ್ದಾನೆ. ನೆರೆಹೊರೆಯವರು ಇವರ ಡ್ಯಾನ್ಸ್’ನ್ನು ಕಿಟಕಿಗಳ ಮೂಲಕ ಇಣುಕಿ ನೋಡುತ್ತಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ ಟ್ರೆಂಡ್ ಆಗಿದೆ.
ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುವ ಈ ವೈರಲ್ ವೀಡಿಯೋದಲ್ಲಿ ಮೈದುನ ಮತ್ತು ಅತ್ತಿಗೆ ಮಧ್ಯರಾತ್ರಿ ರಸ್ತೆಗೆ ಬರುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ಹಾಡೊಂದು ಪ್ಲೇ ಆಗುತ್ತಿದೆ. ಬಹುಶಃ ಆ ಮಹಿಳೆಗೆ ಹಗಲಿನಲ್ಲಿ ಹೊರಗೆ ಬರಲು ಅವಕಾಶ ಇಲ್ಲ ಅನಿಸುತ್ತೆ. ಇದೇ ಕಾರಣದಿಂದ ಮೈದುನನ ಸಹಾಯದಿಂದ ಬಂದು ಡ್ಯಾನ್ಸ್ ಮಾಡುತ್ತಿದ್ದಾಳೆ.
ಇದನ್ನೂ ಓದಿ: Team India : ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ವಾರ್ನಿಂಗ್ ಮಾಡಿದ ಶ್ರೀಲಂಕಾ ಆಟಗಾರ!
ಇನ್ನು ಆ ಮಹಿಳೆಯ ನೃತ್ಯ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಈ ವೀಡಿಯೊವನ್ನು @gsrajasthaniblogger ಹೆಸರಿನ YouTube ಚಾನಲ್’ನಲ್ಲಿ ಹಂಚಿಕೊಳ್ಳಲಾಗಿದೆ. ಜನರು ಈ ಬಗ್ಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ಲೈಕ್ ಕೂಡ ಕೊಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.