ಸಂಸತ್ತಿನ ಹೊರಗೆ ರೈತರ ಪ್ರತಿಭಟನೆಗೆ ಅವಕಾಶ ಕಲ್ಪಿಸದ ದೆಹಲಿ ಪೊಲೀಸರು
ಸಂಸತ್ತು ಕಟ್ಟಡದ ಹೊರಗೆ ಪ್ರತಿಭಟನೆ ನಡೆಸಲು ಸಿಂಘು ಗಡಿಯ ರೈತರಿಗೆ ಅನುಮತಿ ನೀಡಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ನವದೆಹಲಿ: ಸಂಸತ್ತು ಕಟ್ಟಡದ ಹೊರಗೆ ಪ್ರತಿಭಟನೆ ನಡೆಸಲು ಸಿಂಘು ಗಡಿಯ ರೈತರಿಗೆ ಅನುಮತಿ ನೀಡಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ದೆಹಲಿ ಪೊಲೀಸ್ (Delhi Police) ವಕ್ತಾರರು ಸಿಂಗು ಗಡಿಯ ಬಳಿ ರೈತ ಮುಖಂಡರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ.ಆದರೆ ಯಾವುದೇ ಇತ್ಯರ್ಥವಾಗಿಲ್ಲ ಎಂದು ಹೇಳಿದರು.ಇನ್ನೊಂದೆಡೆಗೆ ಜುಲೈ 22 ರಿಂದ ಮಾನ್ಸೂನ್ ಅಧಿವೇಶನ ಮುಗಿಯುವವರೆಗೆ ಪ್ರತಿದಿನ ಸದನದ ಹೊರಗೆ ಧರಣಿ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ.
ಯಮುನಾ ಬಳಿಯಂತಹ ಪರ್ಯಾಯ ಸ್ಥಳದಲ್ಲಿ ಪ್ರತಿಭಟನೆಗಳನ್ನು ನಡೆಸಬೇಕೆಂದು ಪೊಲೀಸರು ಸೂಚಿಸಿದರು. ಆದರೆ ರೈತರು ಇದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ.ಭಾನುವಾರ, ಸಂಯುಕ್ತ ಕಿಸಾನ್ ಮೋರ್ಚಾದ ಒಂಬತ್ತು ಸದಸ್ಯರ ಸಮನ್ವಯ ಸಮಿತಿಯು ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಪ್ರತಿಭಟನೆಯ ಮಾರ್ಗಗಳು ಮತ್ತು ಯೋಜನೆಗಳ ಬಗ್ಗೆ ಚರ್ಚಿಸಿತು.
ಇದನ್ನೂ ಓದಿ:ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಶಂಕಿತ ರಾಜಸ್ತಾನದ ವ್ಯಕ್ತಿ ಬಂಧಿಸಿದ ದೆಹಲಿ ಪೋಲಿಸ್
'ಸಂಸತ್ತಿನ ಪ್ರತಿ ಕೆಲಸದ ದಿನದಂದು ವಿವಿಧ ರಾಜ್ಯಗಳ 200 ರೈತರ ತುಕಡಿಗಳಿಂದ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ರೈತರ ಪಟ್ಟಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇದನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲಾಗುವುದು.ರೈತರ ಚಳವಳಿಗೆ ಸಂಸತ್ತಿಗೆ ಘೆರಾವ್ / ಮುತ್ತಿಗೆ ಹಾಕುವ ಅಥವಾ ಬಲವಂತವಾಗಿ ಪ್ರವೇಶಿಸುವ ಯಾವುದೇ ಯೋಜನೆಗಳಿಲ್ಲ ಎಂದು ನಾವು ಪೊಲೀಸ್ರಿಗೆ ಭರವಸೆ ನೀಡಿದ್ದೇವೆ"ಎಂದು ಎಸ್‌ಕೆಎಂ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನೊಂದೆಡೆಗೆ ಪೊಲೀಸರು ಸಂಸತ್ತಿನ ಬಳಿ ಪ್ರತಿಭಟಿಸಲು 200 ರೈತರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಸಂಖ್ಯೆಯನ್ನು ಕಡಿಮೆ ಮಾಡಲು ರೈತರಿಗೆ ಮನವಿ ಮಾಡಿದ್ದಾರೆ, ಆದರೆ ಇದಕ್ಕೆ ಅವರು ತಮ್ಮ ಯೋಜನೆಗಳನ್ನು ಬದಲಾಯಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ನೆರವಾಗುತ್ತಿದ್ದ ಕನ್ನಡಿಗ ಬಿ.ವಿ ಶ್ರೀನಿವಾಸ್ ಪ್ರಶ್ನಿಸಿದ ದೆಹಲಿ ಪೊಲೀಸರು, ವ್ಯಾಪಕ ಖಂಡನೆ
ಅಗತ್ಯವಿದ್ದಲ್ಲಿ ನವದೆಹಲಿಯ ಏಳು ಮೆಟ್ರೋ ನಿಲ್ದಾಣಗಳನ್ನು ಮುಚ್ಚಿ, ಜನಪಥ್, ಲೋಕ ಕಲ್ಯಾಣ್ ಮಾರ್ಗ, ಪಟೇಲ್ ಚೌಕ್, ರಾಜೀವ್ ಚೌಕ್, ಕೇಂದ್ರ ಸಚಿವಾಲಯ, ಮಂಡಿ ಹೌಸ್ ಮತ್ತು ಉದ್ಯೋಗ್ ಭವನದಲ್ಲಿ ಸೋಮವಾರದಿಂದ ಪ್ರತಿಭಟನೆಗಳು ಮುಗಿಯುವವರೆಗೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ಪೊಲೀಸರು ದೆಹಲಿ ಮೆಟ್ರೋ ರೈಲು ನಿಗಮವನ್ನು ಕೋರಿದ್ದಾರೆ.
'ಮಾನ್ಸೂನ್ ಅಧಿವೇಶನದ ಎಲ್ಲಾ ದಿನಗಳವರೆಗೆ ಗುರುವಾರದಿಂದ ನಮ್ಮ ಪ್ರತಿಭಟನೆಗಳು ಪ್ರಾರಂಭವಾಗಲಿವೆ. ಪೊಲೀಸರೊಂದಿಗಿನ ನಮ್ಮ ಸಭೆಯಲ್ಲಿ, ನಾವು ಜನರ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿದೆ ಮತ್ತು ಅವರು ಸಂಸತ್ತಿನ ಬಳಿ ನಮಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಸಂಸತ್ತಿನ ಹೊರಗೆ ಜಂತರ್ ಮಂತರ್ ಆಗಿರಲಿ ಅಥವಾ ಇನ್ನೊಂದು ಪ್ರದೇಶವಾಗಲಿ ನಮಗೆ ಸ್ಥಾನ ನೀಡುವಂತೆ ನಾವು ಅವರಿಗೆ ಹೇಳಿದ್ದೇವೆ. ಇನ್ನೂರು ಈಗಾಗಲೇ ಕಡಿಮೆ ಸಂಖ್ಯೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಲಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಾಲ್ ಹೇಳಿದ್ದಾರೆ.
ಇದನ್ನೂ ಓದಿ: Shocking News: ಮಾಜಿ ಕೇಂದ್ರ ಸಚಿವ ಪಿ.ಆರ್.ಕುಮಾರಮಂಗಲಂ ಪತ್ನಿಯ ಹತ್ಯೆ..!
ಭಾನುವಾರ ರಾತ್ರಿ ದೆಹಲಿ ಪೊಲೀಸ್ ಆಯುಕ್ತ ಬಾಲಾಜಿ ಶ್ರೀವಾಸ್ತವ ಅವರು ಮೂರು ಗಡಿಗಳಾದ ಸಿಂಗು, ಟಿಕ್ರಿ ಮತ್ತು ಗಾಜಿಪುರಕ್ಕೆ ಭೇಟಿ ನೀಡಿ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಪೊಲೀಸ್ ವ್ಯವಸ್ಥೆಗಳನ್ನು ಪರಿಶೀಲಿಸಲು ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.
ಗಸ್ತು ಮತ್ತು ಕರ್ತವ್ಯಕ್ಕಾಗಿ ನಗರದಾದ್ಯಂತ 30,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸ್ ಪಿಆರ್‌ಒ ಚಿನ್ಮೊಯ್ ಬಿಸ್ವಾಲ್ ತಿಳಿಸಿದ್ದಾರೆ.ಸಿಪಿ ಶ್ರೀವಾಸ್ತವ ಅವರು ರೈತರ ಪ್ರತಿಭಟನೆಗೆ ಮುನ್ನ ಕೆಂಪು ಕೋಟೆ ಮತ್ತು ಸಂಸತ್ತಿನ ಬಳಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.ಸರಿಯಾದ ಆಹಾರ, ಆಶ್ರಯ ಮತ್ತು ರೋಸ್ಟರ್ ಡ್ಯೂಟಿ ವ್ಯವಸ್ಥೆಗಳನ್ನು ಮಾಡುವ ಮೂಲಕ ಬಲವನ್ನು ನೋಡಿಕೊಳ್ಳುವಂತೆ ಅವರು ಡಿಸಿಪಿಗಳಿಗೆ ನಿರ್ದೇಶನ ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.