Shocking News: ಮಾಜಿ ಕೇಂದ್ರ ಸಚಿವ ಪಿ.ಆರ್.ಕುಮಾರಮಂಗಲಂ ಪತ್ನಿಯ ಹತ್ಯೆ..!

ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕಾಗಿ ಬಲೆ ಬಿಸಿದ್ದಾರೆ. 

Written by - Zee Kannada News Desk | Last Updated : Jul 7, 2021, 12:55 PM IST
  • ದೆಹಲಿಯ ವಸಂತ ವಿಹಾರ ನಿವಾಸದಲ್ಲಿ ಕಿಟ್ಟಿ ಕುಮಾರಮಂಗಲಂ ಹತ್ಯೆ
  • 24 ವರ್ಷದ ರಾಜು ಎಂಬಾತನ ಬಂಧಿಸಿರುವ ಪೊಲೀಸರು
  • ದರೋಡೆ ಮಾಡುವ ಉದ್ದೇಶದಿಂದ ಕೊಲೆ ಮಾಡಿರುವ ಶಂಕೆ
Shocking News: ಮಾಜಿ ಕೇಂದ್ರ ಸಚಿವ ಪಿ.ಆರ್.ಕುಮಾರಮಂಗಲಂ ಪತ್ನಿಯ ಹತ್ಯೆ..! title=
ಕೇಂದ್ರದ ಮಾಜಿ ಸಚಿವ ಪಿ.ಆರ್.ಕುಮಾರಮಂಗಲಂ ಪತ್ನಿಯ ಹತ್ಯೆ

ನವದೆಹಲಿ: ಕೇಂದ್ರದ ಮಾಜಿ ಸಚಿವ, ದಿವಂಗತ ಪಿ.ಆರ್.ಕುಮಾರಮಂಗಲಂ ಅವರ ಪತ್ನಿಯನ್ನು ದೆಹಲಿಯ ನಿವಾಸದಲ್ಲಿ ಹತ್ಯೆ(Mrder) ಮಾಡಲಾಗಿದೆ.
ನೈಋತ್ಯ ದೆಹಲಿ(Delhi)ಯ ವಸಂತ ವಿಹಾರ ನಿವಾಸದಲ್ಲಿ ಪಿ.ರಂಗರಾಜನ್ ಕುಮಾರಮಂಗಲಂ ಅವರ ಪತ್ನಿ ಕಿಟ್ಟಿ ಕುಮಾರಮಂಗಲಂ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ದರೋಡೆ ಮಾಡಲು ಬಂದ ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕಾಗಿ ಬಲೆ ಬಿಸಿದ್ದಾರೆ. ಬಂಧಿತ ರಾಜು ವಸಂತವಿಹಾರದಲ್ಲಿ ದೋಬಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. 
ಇದನ್ನೂಓದಿ - Ministry of Cooperation: ಸಹಕಾರಿ ಆಂದೋಲನವನ್ನು ಬಲಪಡಿಸಲು ಹೊಸ ಸಚಿವಾಲಯವನ್ನು ರಚಿಸಿದ ಮೋದಿ ಸರ್ಕಾರ
ಮಂಗಳವಾರ ರಾತ್ರಿ 9 ಗಂಟೆ ವೇಳೆಗೆ ಕಿಟ್ಟಿ ಕುಮಾರಮಂಗಲಂ ಅವರ ನಿವಾಸಕ್ಕೆ ದೋಬಿ ರಾಜು ಆಗಮಿಸಿದ್ದ. ಮನೆಕೆಲಸದವರೇ ಬಾಗಿಲು ತೆರೆದಿದ್ದರು. ಬಳಿಕ ಮನೆಯೊಳಗೆ ನುಗ್ಗಿದ್ದ ಆರೋಪಿಯು ಒಂಟಿಯಾಗಿದ್ದ ಕಿಟ್ಟಿಯವರನ್ನು ಎಳೆದು ರೂಮಿನಲ್ಲಿ ಕೂಡಿಹಾಕಿದ್ದ. ಬಳಿಕ ಇನ್ನಿಬ್ಬರು ಆರೋಪಿಗಳ ಜೊತೆಗೆ ಸೇರಿ ತಲೆದಿಂಬಿನಿಂದ ಉಸಿರುಗಟ್ಟಿಸಿ 67 ವರ್ಷದ ಕಿಟ್ಟಿಯವರನ್ನು  ಹತ್ಯೆಗೈದಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು(Police) ಪರಿಶೀಲನೆ ನಡೆಸಿದ್ದಾರೆ. ನಿವಾಸದಲ್ಲಿ ಬ್ರಿಫ್ ಕೇಸ್ ಸೇರಿದಂತೆ ಕೆಲವು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹೀಗಾಗಿ ಕಳ್ಳತನ ಮಾಡುವ ಉದ್ದೇಶದಿಂದ ಆರೋಪಿಗಳು ಕಿಟ್ಟಿಯವರನ್ನು ಹತ್ಯೆ ಮಾಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ನಡೆಸುತ್ತಿದ್ದಾರೆ.
ಇದನ್ನೂಓದಿ Central Government Jobs: 2022ರಿಂದ ಸರ್ಕಾರಿ ನೌಕರಿ ಪಡೆಯಲು CET Exam, ಕೇಂದ್ರ ಸರ್ಕಾರದ ಮಹತ್ವದ ಘೋಷಣೆ
ಕಿಟ್ಟಿ ಕುಮಾರಮಂಗಲಂ ಅವರು ಸುಪ್ರೀಂಕೋರ್ಟ್ ನ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. 1984ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದ ಪಿ.ರಂಗರಾಜನ್ ಕುಮಾರಮಂಗಲಂ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee) ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.  ಕೇಂದ್ರ ಸರ್ಕಾರದ ವಿವಿಧ ಖಾತೆಗಳನ್ನು ಅವರು ನಿಭಾಯಿಸಿದ್ದರು. 2000ರ ಆಗಸ್ಟ್ ತಿಂಗಳಿನಲ್ಲಿ ಅವರು ಮೃತಪಟ್ಟಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News