Vande Mataram Video: ಭಾರತದ ರಾಷ್ಟ್ರೀಯ ಗೀತೆ `ವಂದೇ ಮಾತರಂ` ಹಾಡಿದ ಗ್ರೀಸ್ ಯುವತಿಯರ ಕುರಿತು ಪ್ರಧಾನಿ ಮೋದಿ ಶ್ಲಾಘನೆ
Mann Ki Baat:ವಿಡಿಯೋದಲ್ಲಿ ಮೂವರು ವಿದೇಶಿ ಯುವತಿಯರು ಭಾರತೀಯ `ರಾಷ್ಟ್ರೀಯ ಗೀತೆ` (National Song) ಹಾಡುತ್ತಿರುವುದನ್ನು ನೋಡಬಹುದು. ಈ ಯುವತಿಯರು ಗ್ರೀಸ್ ದೇಶದವರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಈ ಮೂವರು ಗ್ರೀಸ್ ಯುವತಿಯರು ಅದ್ಭುತ `ವಂದೇ ಮಾತರಂ` ಪ್ರಸ್ತುತಿಯನ್ನು ನೀಡಿದ್ದಾರೆ. ಈ ಯುವತಿಯರ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇದರಿಂದ ಉಭಯ ದೇಶಗಳ ಸಂಬಂಧ ಎಷ್ಟೊಂದು ಗಟ್ಟಿಯಾಗಿದೆ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದಿದ್ದಾರೆ.
Mann Ki Baat: ಪ್ರಧಾನಿ ನರೇಂದ್ರ ಮೋದಿ ಅವರು 2021 ರ ತಮ್ಮ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ವಿಡಿಯೋವೊಂದರ ಬಗ್ಗೆ ಹೇಳಿದ್ದಾರೆ. ಈ ವಿಡಿಯೋವನ್ನು ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಬಿತ್ತರಿಸಲಾಗಿದೆ. ಈ ವಿಡಿಯೋದಲ್ಲಿ ಕೆಲವು ವಿದೇಶಿ ಹುಡುಗಿಯರು ನಮ್ಮ ದೇಶದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' (Vande Mataram) ಹಾಡುತ್ತಿರುವುದು ಕೇಳಿಬಂದಿದೆ.
ಒಂದೇ ಮಾತರಂ ಹಾಡಿದ ಗ್ರೀಕ್ ಯುವತಿಯರು
ಮೂವರು ವಿದೇಶಿ ಹುಡುಗಿಯರು ಭಾರತದ 'ರಾಷ್ಟ್ರಗೀತೆ'ಯನ್ನು ಹಾಡುತ್ತಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಈ ಹುಡುಗಿಯರು ಗ್ರೀಸ್‌ನವರು (Greece Girls) ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗ್ರೀಸ್‌ನ ಹುಡುಗಿಯರು ವಂದೇ ಮಾತರಂ ಗೀತೆಯನ್ನು ಅದ್ಭುತವಾಗಿ ಹಾಡಿದ್ದಾರೆ. ಪ್ರಧಾನಿ ಮೋದಿ ಈ ಹುಡುಗಿಯರನ್ನು ಶ್ಲಾಘಿಸಿದರು ಮತ್ತು ಇದು ಉಭಯ ದೇಶಗಳ ನಡುವಿನ ಸಂಬಂಧ ಎಷ್ಟು ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಇದಲ್ಲದೇ, ವಿಶ್ವದಲ್ಲಿ ಭಾರತದ ಪ್ರಾಬಲ್ಯ ಎಷ್ಟು ವೇಗವಾಗಿ ಹೆಚ್ಚುತ್ತಿದೆ ಎಂಬುದನ್ನು ಪ್ರಧಾನಿ ಮೋದಿ ವಿಡಿಯೋ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ಬನ್ನಿ ವಿಡಿಯೋ ವಿಕ್ಷೀಸೋಣ...
Salman Khan Hospitalised: ಸಲ್ಮಾನ್ ಖಾನ್ ಗೆ ಹಾವು ಕಡಿತ, ರಾತ್ರಿ 3 ಗಂಟೆಗೆ ಆಸ್ಪತ್ರೆಗೆ ದಾಖಲು!
ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಬಲೂಚ್ ಗಾಯಕರೊಬ್ಬರು ಭಾರತದ 'ತೇರಿ ಮಿಟ್ಟಿ ಮೇ ಮಿಲ್ ಜಾವಾ' ಎಂಬ ದೇಶಭಕ್ತಿ ಗೀತೆಯನ್ನು ಹಾಡಿದ್ದರು. ಬಲೂಚ್ ಗಾಯಕ ವಹಾಬ್ ಅಲಿ ಬುಗಾಟ್ಟಿ ಅವರ ಧ್ವನಿಯಲ್ಲಿರುವ ಈ ಹಾಡು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. ವಹಾಬ್ ಅಲಿ ಬುಗಾಟ್ಟಿ ಅವರು ಭಾರತದ ದೇಶಭಕ್ತಿ ಗೀತೆಯನ್ನು ಬಹಳ ಸುಂದರವಾಗಿ ಹಾಡಿದ್ದಾರೆ.
ಇದನ್ನೂ ಓದಿ-Aliens On Earth: ಮಾನವನ ತಪ್ಪುಗಳಿಂದ ಆಕ್ರೋಶಗೊಂಡ ಏಲಿಯನ್ ಗಳಿಂದ 2022ರಲ್ಲಿ ವಿಶ್ವ ವಿನಾಶಕ್ಕೆ ಸಂಚು!
ಈ ವಿಷಯವನ್ನು ಪ್ರಧಾನಿ ಮೋದಿ ಹೇಳಿದ್ದಾರೆ
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ದೇಶವಾಸಿಗಳೇ ನಮಸ್ಕಾರ! ಈ ಸಮಯದಲ್ಲಿ ನೀವು 2021 ರ ವಿದಾಯಕ್ಕೆ ಮತ್ತು 2022 ರ ಸ್ವಾಗತಕ್ಕಾಗಿ ಸಿದ್ಧತೆ ನಡೆಸುತ್ತಿರಬೇಕು. ಹೊಸ ವರ್ಷದಂದು, ಪ್ರತಿಯೊಬ್ಬ ವ್ಯಕ್ತಿ, ಪ್ರತಿ ಸಂಸ್ಥೆಯು, ಮುಂಬರುವ ವರ್ಷದಲ್ಲಿ ಉತ್ತಮವಾಗಲು, ಏನನ್ನಾದರೂ ಒಳ್ಳೆಯ ಕೆಲಸ ಮಾಡುವ ಸಂಕಲ್ಪವನ್ನು ತೆಗೆದುಕೊಳ್ಳುತ್ತದೆ. ಕಳೆದ ಏಳು ವರ್ಷಗಳಿಂದ ನಮ್ಮ 'ಮನ್ ಕಿ ಬಾತ್' ಕೂಡ ವ್ಯಕ್ತಿ, ಸಮಾಜದ, ದೇಶದ ಒಳಿತನ್ನು ಎತ್ತಿ ತೋರಿಸುವ ಮೂಲಕ ಒಳ್ಳೆಯದನ್ನು ಮಾಡಲು ಮತ್ತು ಒಳ್ಳೆಯವರಾಗಲು ಪ್ರೇರೇಪಿಸಿದೆ' ಎಂದು ಹೇಳಿದ್ದಾರೆ,
ಇದನ್ನೂ ಓದಿ-ಓಮಿಕ್ರಾನ್ ಹರಡುವಿಕೆ ತಡೆಗಟ್ಟಲು ಸಾಧ್ಯವಿಲ್ಲ, ಕೈ ಮೇಲಕ್ಕೆತ್ತಿದ ತಜ್ಞರ ಸಮಿತಿ ವೈದ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.