Salman Khan Hospitalised: ಸಲ್ಮಾನ್ ಖಾನ್ ಗೆ ಹಾವು ಕಡಿತ, ರಾತ್ರಿ 3 ಗಂಟೆಗೆ ಆಸ್ಪತ್ರೆಗೆ ದಾಖಲು!

Snake Bites Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿದೆ. ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಪನ್ವೆಲ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿದೆ ಎಂದು ಮೂಲಗಳು ವರದಿ ಮಾಡಿವೆ.

Written by - Nitin Tabib | Last Updated : Dec 26, 2021, 01:42 PM IST
  • ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾವು ಕಡಿತ.
  • ರಾತ್ರಿ ಮೂರುಗಂಟೆಗೆ ಆಸ್ಪತ್ರೆಗೆ ದಾಖಲು.
  • ಸದ್ಯ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಪನ್ವೇಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
Salman Khan Hospitalised: ಸಲ್ಮಾನ್ ಖಾನ್ ಗೆ ಹಾವು ಕಡಿತ, ರಾತ್ರಿ 3 ಗಂಟೆಗೆ ಆಸ್ಪತ್ರೆಗೆ ದಾಖಲು! title=
Salman Khan Hospitalised (File Photo)

Snake Bites Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್  (Salman Khan) ಅವರಿಗೆ ಹಾವು ಕಚ್ಚಿದೆ. ಪನ್ವೇಲ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ(Salman Khan Panvel Farmhouse) ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಸಲ್ಮಾನ್ ಖಾನ್‌ಗೆ ಹಾವು ಕಚ್ಚಿದೆ (Snake Bites Salman Khan) ಎನ್ನಲಾಗಿದೆ.  ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಸಲ್ಮಾನ್ ಖಾನ್ ಗೆ ವಿಷ ರಹಿತ ಹಾವು ಕಚ್ಚಿದೆ ಹಾಗಾಗಿ ಸಲ್ಮಾನ್ ಮೇಲೆ ಅಷ್ಟೊಂದು ಪರಿಣಾಮ ಬೀರಿಲ್ಲ ಎಂದೂ ಕೂಡ ಹೇಳಲಾಗಿದೆ. ಹಾವು ಕಚ್ಚಿದ ನಂತರ, ಸಲ್ಮಾನ್ ಖಾನ್ ಅವರನ್ನು ನವಿ ಮುಂಬೈನ ಕಮೋಥೆ ಪ್ರದೇಶದ ಎಂಜಿಎಂ (ಮಹಾತ್ಮ ಗಾಂಧಿ ಮಿಷನ್) ಆಸ್ಪತ್ರೆಗೆ (Salman Khan Hospitalise) ದಾಖಲಿಸಲಾಗಿದೆ.

ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ
ಚಿಕಿತ್ಸೆ ಬಳಿಕ ಸಲ್ಮಾನ್ ಖಾನ್ ಅವರನ್ನು ಇಂದು ಬೆಳಗ್ಗೆ 9 ಗಂಟೆಗೆ ಪನ್ವೇಲ್ ಫಾರ್ಮ್‌ಹೌಸ್‌ಗೆ ಮರಳಿದ್ದಾರೆ. ಸದ್ಯ ಸಲ್ಮಾನ್ ಖಾನ್ ಅಪಾಯದಿಂದ ಪಾರಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಅಭಿಮಾನಿಗಳಿಂದ ಪ್ರಾರ್ಥನೆ
ಈ ಸುದ್ದಿಯ ನಂತರ ಸಲ್ಮಾನ್ ಖಾನ್ ಅಭಿಮಾನಿಗಳು ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದ್ರೆ, ಸಲ್ಮಾನ್ ಆರೋಗ್ಯಕ್ಕೆ ಯಾವುದೇ ಧಕ್ಕೆ ಆಗಿಲ್ಲ ಅನ್ನೋದು ಅಭಿಮಾನಿಗಳ ಪಾಲಿಗೆ ಸಮಾಧಾನಕರ ಸಂಗತಿ. 

ಇದನ್ನೂ ಓದಿ-HD Kumaraswamy: ನಿಖಿಲ್ ನಿನಗೆ ರಾಜಕೀಯ ಬೇಡ ಎಂದ ಎಚ್.ಡಿ.ಕುಮಾರಸ್ವಾಮಿ

ಸಲ್ಮಾನ್ ಖಾನ್ ಹುಟ್ಟುಹಬ್ಬ (Salman Khan Birthday)
ಡಿಸೆಂಬರ್ 27 ಸಲ್ಮಾನ್ ಖಾನ್ ತಮ್ಮ 56 ನೇ ಆಚರಿಸಿಕೊಳ್ಳಲಿದ್ದಾರೆ. ಹೀಗಿರುವಾಗ  ಸಲ್ಮಾನ್ ಖಾನ್ ಅದ್ಧೂರಿ ಆಚರಣೆ ಮಾಡುತ್ತಾರೆ ಎಂದು ಹೇಳುವುದು ಸ್ವಲ್ಪ ಕಷ್ಟಸಾಧ್ಯ,  ಪ್ರಸ್ತುತ ಅವರು ತಮ್ಮ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕ್ರಿಸ್‌ಮಸ್ ಆಚರಿಸಲು ಸಲ್ಮಾನ್ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಮ್ಮ ತೋಟದ ಮನೆಗೆ ಆಗಮಿಸಿದ್ದಾರೆ. ಗಮನಾರ್ಹವಾಗಿ, ಈ ಪ್ರದೇಶವು ಬೆಟ್ಟ ಮತ್ತು ಅರಣ್ಯ ಪ್ರದೇಶದಿಂದ ಆವೃತವಾಗಿದೆ.

ಇದನ್ನೂ ಓದಿ-ಕಪಿಲ್ ದೇವ್ ಅವರ ಆ ಕ್ಯಾಚ್ ಅನುಕರಿಸಲು 6 ತಿಂಗಳ ತೆಗೆದುಕೊಂಡಿದ್ದ ರಣವೀರ್ ಸಿಂಗ್...!

ಸಲ್ಮಾನ್ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ,  ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಅವರೇ ಖುದ್ದಾಗಿ ತಮ್ಮ 'ಬಜರಂಗಿ ಭಾಯಿಜಾನ್' ಚಿತ್ರದ ಸೀಕ್ವೆಲ್ ಕುರಿತು ಮಾಹಿತಿ ನೀಡಿದ್ದರು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-RRR Star Cast Fees: RRR ಚಿತ್ರದ ತಾರಾಗಣದ ಮೇಲೆ ಹಣದ ಸುರಿಮಳೆ, ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ, ವಿವರ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News