ನವದೆಹಲಿ :Wedding viral video : ಮದುವೆಯ ಬಂಧ ಎಂದರೆ, ಅದು ಏಳು ಜನುಮದ ಅನುಬಂಧ ಎಂಬ ಮಾತಿದೆ. ಮದುವೆಯ ಶಾಸ್ತ್ರಗಳಲ್ಲಿ ಬಹಳ ಮುಖ್ಯವಾದದ್ದು, ಸಪ್ತಪದಿ. ಮಂತ್ರ ಘೋಷಗಳೊಂದಿಗೆ ಅಗ್ನಿಯನ್ನು ಸಾಕ್ಷಿಯಾಗಿಟ್ಟುಕೊಂಡು,  ವಧು ಮತ್ತು ವರ ಏಳು ಸುತ್ತುಗಳನ್ನು ತೆಗೆದುಕೊಳ್ಳುತ್ತಾರೆ. ಇದು ವಿವಾಹ ಶಾಸ್ತ್ರದಲ್ಲಿ ಬಹಳ ಮುಖ್ಯವಾದ ಶಾಸ್ತ್ರ. ಆದರೆ, ಇಲ್ಲಿ ಈ ಶಾಸ್ತ್ರದ ವೇಳೆಯ ವಿಡಿಯೋವೊಂದು ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ವಧುವನ್ನು ಬೆಂಕಿಯಿಂದ ರಕ್ಷಿಸಿದ ವರ : 
ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿರುವ ವೀಡಿಯೋದಲ್ಲಿ(Viral video), ಮದುವೆಯ ಮಂಟಪದಲ್ಲಿ ವಧು ಮತ್ತು ವರನನ್ನು ಕಾಣಬಹುದು. ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದ ನಂತರ, ಸಪ್ತಪದಿಗಾಗಿ ವಧು-ವರರು ಎದ್ದು ನಿಲ್ಲುತ್ತಾರೆ. ಇನ್ನೇನು ಇಬ್ಬರೂ ಅಗ್ನಿಯ ಸುತ್ತ ಸುತ್ತ ಹಾಕಲು ಆರಂಭಿಸಬೇಕು. ಅಷ್ಟರಲ್ಲಿ, ವಧುವಿನ (Bride) ಉಡುಪಿಗೆ ಬೆಂಕಿ ತಗುಲುತ್ತದೆ ಎನ್ನುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಆದರೆ, ಅನಾಹುತ ಆಗುವುದಕ್ಕೆ ಮುನ್ನವೇ ವರ ಸಮಯ ಪ್ರಜ್ಞೆ ಮೆರೆಯುತ್ತಾನೆ. ವಧುವಿನ ಉಡುಪನ್ನು ಪಕ್ಕಕ್ಕೆ ಸರಿಸಿಬಿಡುತ್ತಾನೆ.  



 


ಇದನ್ನೂ ಓದಿ : Caught on CCTV: ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಮನಬಂದಂತೆ ಥಳಿಸಿದ ಗ್ರಾಹಕ..!


ವೈರಲ್ ಆಗುತ್ತಿದೆ ವೀಡಿಯೊ : 
ಸಪ್ತಪದಿ ವೇಳೆ ವಧುವಿನ ಬಗ್ಗೆ ವರನ ಕಾಳಜಿಯನ್ನು ನೋಡಿ, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೈರಲ್ ವಿಡಿಯೋವನ್ನು 4  ಲಕ್ಷಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.  ಈ ವಿಡಿಯೋವನ್ನು ಕಪಲ್ ಗೋಲ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಅಪ್‌ಲೋಡ್ ಮಾಡಲಾಗಿದೆ. 


ಇದನ್ನೂ ಓದಿ : Viral News: ಮಾಜಿ ಪ್ರೇಯಸಿಯ ಮನೆಗೆ ನುಗ್ಗಲು ಯತ್ನಿಸಿ ಕಿಟಕಿಯಲ್ಲಿ ಸಿಲುಕಿದ ಭೂಪ!; ಮುಂದೇನಾಯ್ತು ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ