Viral News: ಮಾಜಿ ಪ್ರೇಯಸಿಯ ಮನೆಗೆ ನುಗ್ಗಲು ಯತ್ನಿಸಿ ಕಿಟಕಿಯಲ್ಲಿ ಸಿಲುಕಿದ ಭೂಪ!; ಮುಂದೇನಾಯ್ತು ಗೊತ್ತಾ?

ಕಿಟಕಿಯಲ್ಲಿ ಗಂಟೆಗಟ್ಟಲೆ ಸಿಲುಕಿದ್ದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

Written by - Puttaraj K Alur | Last Updated : Aug 5, 2021, 05:19 PM IST
  • ತನ್ನ ಜೊತೆ ಮತ್ತೆ ಸಂಬಂಧ ಹೊಂದುವಂತೆ ಮಾಜಿ ಪ್ರೇಯಸಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ
  • ರಹಸ್ಯವಾಗಿ ಗೆಳತಿಯ ಮನೆ ಪ್ರವೇಶಿಸಲು ಹೋಗಿ ಕಿಟಕಿಯಲ್ಲಿ ಸಿಲುಕಿಕೊಂಡು ಒದ್ದಾಡಿದ ಭೂಪ
  • ಗಂಟೆಗಟ್ಟಲೆ ಕಿಟಕಿಯಲ್ಲಿ ಸಿಲುಕಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದೆಂದು ಹೇಳಿದ ವೈದ್ಯರು
Viral News: ಮಾಜಿ ಪ್ರೇಯಸಿಯ ಮನೆಗೆ ನುಗ್ಗಲು ಯತ್ನಿಸಿ ಕಿಟಕಿಯಲ್ಲಿ ಸಿಲುಕಿದ ಭೂಪ!; ಮುಂದೇನಾಯ್ತು ಗೊತ್ತಾ? title=
ಮಾಜಿ ಪ್ರೇಯಸಿ ಮನೆ ಪ್ರವೇಶಿಸಲು ಹೋಗಿ ಪ್ರಾಣ ಕಳೆದುಕೊಂಡ

ನವದೆಹಲಿ: ಕುಡಿತ ಮತ್ತಿನಲ್ಲಿ ಮಾಜಿ ಪ್ರೇಯಸಿಯ ಮನೆಗೆ ರಹಸ್ಯವಾಗಿ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬ ಕಿಟಕಯಲ್ಲಿಯೇ ಸಿಲುಕಿ ಒದ್ದಾಡಿರುವ ಘಟನೆ ಉಕ್ರೇನ್‌(Ukraine)ನಲ್ಲಿ ನಡೆದಿದೆ. ಕಂಠಪೂರ್ತಿ ಕುಡಿದು ಚಿತ್ ಆಗಿದ್ದ ಯುವಕ ಕಿಟಕಿಯ ಮೂಲಕ ಮನೆಯೊಳಗೆ ಹೋಗಲು ಪ್ರಯತ್ನಿಸಿದ್ದಾನೆ. ಆದರೆ ಕಿಟಕಿಯಲ್ಲಿಯೇ ಸಿಲುಕಿಕೊಂಡು ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಂತಾ ಪೊಲೀಸರು ತಿಳಿಸಿದ್ದಾರೆ.

ಕಿಟಕಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿ ತನ್ನ ಮಾಜಿ ಗೆಳತಿಯ ಮನೆಗೆ ಪ್ರವೇಶಿಸುವುದು ಕಷ್ಟಕರವಾಗಿತ್ತು. ಪೊಲೀಸ(Police)ರು ಆತನನ್ನು ಹೊರತೆಗೆಯುವ ಮುನ್ನ ಆತ ಗಂಟೆಗಟ್ಟಲೆ ಸಿಕ್ಕಿಬಿದ್ದಿದ್ದ. ವೈದ್ಯರ ಪ್ರಕಾರ ಆರೋಪಿಗೆ ಯಾವುದೇ ದೊಡ್ಡ ಗಾಯವಾಗಿಲ್ಲ. ಆದರೆ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಅಂತಾ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Cancer: Alcohol ಹಾಗೂ Cancer ಗೆ ಸಂಬಂಧಿಸಿದ ಬೆಚ್ಚಿಬೀಳಿಸುವ ವರದಿ ಬಹಿರಂಗ

ವರದಿಗಳ ಪ್ರಕಾರ, ಉಕ್ರೇನ್‌ನ ಖೇರ್ಸನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆ ವ್ಯಕ್ತಿ ತನ್ನ ಮಾಜಿ ಗೆಳತಿಗೆ ಮತ್ತೆ ಸಂಬಂಧ ಹೊಂದುವಂತೆ ಒತ್ತಡ ಹೇರುತ್ತಿದ್ದ. ಆದರೆ ಇದಕ್ಕೆ ಆಕೆ ನಿರಾಕರಿಸಿದ್ದಳು. ಹೀಗಾಗಿ ಕುಡಿದು ಫುಲ್ ಟೈಟ್(Drunk Man) ಆದ ಆ ವ್ಯಕ್ತಿ ಆಕೆಯ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ರಹಸ್ಯವಾಗಿ ಮನೆಮೇಲೆ ಹತ್ತಿದ ಆತ ಕಿಟಕಿ ಸರಿಸಿ ಒಳಹೋಗಲು ಪ್ರಯತ್ನಿಸಿದ್ದಾನೆ. ಆದರೆ ಕುಡಿದ ಅಮಲಿನಲ್ಲಿದ್ದ ಆತನಿಗೆ ಕಿಟಕಿಯನ್ನು ಸರಿಯಾಗಿ ಸರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆತ ಗಂಟೆಗಳ ಕಾಲ ಅದರಲ್ಲಿಯೇ ಸಿಲುಕಿಕೊಂಡು ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ ಅಂತಾ ತಿಳಿದುಬಂದಿದೆ.

ಈ ಘಟನೆ ನಡೆದಾಗ ವ್ಯಕ್ತಿಯ ಮಾಜಿ ಪ್ರೇಯಸಿ ಮನೆಯಲ್ಲಿಯೇ ಇದ್ದಳು. ಆತ ಕಿರುಚುತ್ತಾ ಮನೆಯೊಳಗೆ ಪ್ರವೇಶಿಸಲು ಯತ್ನಿಸುತ್ತಿರುವುದನ್ನು ಕಂಡು ಹೌಹಾರಿದ ಆಕೆ ತಕ್ಷಣ ಪೊಲೀಸರಿಗೆ ಕರೆ ಮಾಡಿದಳು. ಕಿಟಕಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಹೊರತರಲು ಪೋಲಿಸರು ಹರಸಾಹಸ ಪಡಬೇಕಾಯಿತು. ‘ನಾವು ತುಂಬಾ ಕಷ್ಟಪಟ್ಟು ಆತನನ್ನು ಹೊರತೆಗೆದೆವು. ಆದರೆ ಆ ವ್ಯಕ್ತಿ ತುಂಬಾ ಕುಡಿದು ಪ್ರಜ್ಞಾಹೀನನಾಗಿದ್ದ.ಅಷ್ಟೇ ಅಲ್ಲದೆ ಆತ ಉಸಿರಾಡುತ್ತಿರಲಿಲ್ಲ ಅಂತಾ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಸನ್‌ಗ್ಲಾಸ್‌ ತೊಟ್ಟು ನಾನು ಹೇಗೆ ಕಾಣುತ್ತೇನೆ ಎಂದ ಒರಾಂಗುಟಾನ್..!

ನಂತರ ಆತನನ್ನು ಪೊಲೀಸರು ಆಸ್ಪತ್ರೆ(Hospital)ಗೆ ದಾಖಲಿಸಿದರು. ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಆಸ್ಪತ್ರೆಗೆ ದಾಖಲಿಸುವುದು ವಿಳಂಬವಾಗಿದ್ದರಿಂದ ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ತಿಳಿಸಿದರು. ಕಿಟಕಿಯಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡಿದ್ದರಿಂದ ಆತನಿಗೆ ಉಸಿರಾಡಲು ಸಾಧ್ಯವಾಗಿಲ್ಲ. ಆತನ ಪ್ರೇಯಸಿ ಅವನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದರೂ ಆತ ನಿರಂತರವಾಗಿ ಕಿರುಕುಳ ನೀಡುತ್ತಿದ್ದನಂತೆ. ಆಕೆಗೆ ಏನಾದರೂ ಮಾಡಲೇಬೇಕೆಂದು ಯೋಚಿಸಿ ರಹಸ್ಯವಾಗಿ ಮನೆ ಪ್ರವೇಶಿಸಿಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News