ನವದೆಹಲಿ : Viral video : ಈಗ ಕೂತರು ನಿಂತರೂ ಎಲ್ಲಾ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ (Social media) ಶೇರ್ ಮಾಡಲಾಗುತ್ತದೆ. ಯಾವಾಗ ಯಾವ ವೀಡಿಯೊ ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಮದುವೆ ಮನೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋ ರಾಜಸ್ತಾನದಲ್ಲಿ ನಡೆದ ಮದುವೆಯ ವಿಡಿಯೋ ಎಂದು ಹೇಳಲಾಗುತ್ತದೆ. ಮದುವೆ ಶಾಸ್ತ್ರದ ವೇಳೆ ವಧು ಮತ್ತು ಮೈದುನನ ನಡುವೆ ನಡೆದ ಘಟನೆ ಇದಾಗಿದೆ.
ಈ ವೀಡಿಯೊದ ಆರಂಭದಲ್ಲಿ, ಎಲ್ಲವೂ ಸಾಮಾನ್ಯವಾಗಿಯೇ ಕಾಣಿಸುತ್ತದೆ. ವಿವಾಹದ (Marriage) ವಿಧಿಯಂತೆ ಕಾಣುತ್ತದೆ. ಆದರೆ ಕೆಲವು ಸೆಕೆಂಡುಗಳ ನಂತರ ಬರುವ ದೃಶ್ಯವನ್ನು ನೋಡಿದರೆ, ಆಶ್ಚರ್ಯವೂ ಆಗುತ್ತದೆ. ನಗುವೂ ತಡೆಯುವುದಿಲ್ಲ. ವೀಡಿಯೊದಲ್ಲಿ, (video) ಕಾಣುವಂತೆ, ವಧು ಮತ್ತು ಆಕೆಯ ಮೈದುನ ಕೈಯಲ್ಲಿ ಬೆತ್ತ ಹಿಡಿದು ಸುತ್ತು ಬರುತ್ತಿರುತ್ತಾರೆ. ವಧುವಿನ ಕೈಯಲ್ಲಿ ಬೇವಿನ ಬೆತ್ತ ಕಾಣಿಸುತ್ತದೆ. ಇಬ್ಬರೂ ಒಬ್ಬರಿಗೊಬ್ಬರು ಮೆತ್ತಗೆ ಹೊಡೆದುಕೊಂಡು ಸುತ್ತು ಬರುತ್ತಿರುತ್ತಾರೆ. ಇದು ವಿವಾಹ ವಿಧಿಯ ಒಂದು ಭಾಗ. ಆದರೆ ಇದ್ದಕ್ಕಿದ್ದಂತೆ, ಮೈದುನ, ವಧುವಿಗೆ ಬೇಕಾಬಿಟ್ಟಿ ಬಾರಿಸಲು ಆರಂಭಿಸುತ್ತಾನೆ.
ಇದನ್ನೂ ಓದಿ : Viral News: ಮಾಜಿ ಪ್ರೇಯಸಿಯ ಮನೆಗೆ ನುಗ್ಗಲು ಯತ್ನಿಸಿ ಕಿಟಕಿಯಲ್ಲಿ ಸಿಲುಕಿದ ಭೂಪ!; ಮುಂದೇನಾಯ್ತು ಗೊತ್ತಾ?
ಅದೇ ಸಮಯದಲ್ಲಿ, ಅಲ್ಲೇ ನಿಂತಿದ್ದ ವರ ಮಧ್ಯೆ ಪ್ರವೇಶಿಸುತ್ತಾನೆ. ತಮ್ಮನ ಕೈಯಿಂದ ಬೆತ್ತವನ್ನು ಕಸಿದು ಆತನನ್ನು ಬೆನ್ನಟ್ಟಿಕೊಂಡು ಹೋಗುತ್ತಾನೆ. ಇದಕ್ಕೂ ಮುನ್ನ ತಾಯಿ ಮಧ್ಯಪ್ರವೇಶ ಮಾಡಿ, ಮೈದುನನನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಾನೆ. ಇದೀಗ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿದ್ದು, ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ. ಅಲ್ಲದೆ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : Viral Video: ಸನ್ಗ್ಲಾಸ್ ತೊಟ್ಟು ನಾನು ಹೇಗೆ ಕಾಣುತ್ತೇನೆ ಎಂದ ಒರಾಂಗುಟಾನ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ