ನವದೆಹಲಿ : Viral video : ವಧು ವರರ ಹಾರ ಬದಲಾವಣೆ ಮದುವೆಯ ಮುಖ್ಯ ಶಾಸ್ತ್ರಗಳಲ್ಲಿ ಒಂದು. ಈ ಶಾಸ್ತ್ರ ಇಲ್ಲದೆ ಮದುವೆ ಅಪೂರ್ಣ ಎಂದು  ಪರಿಗಣಿಸಲಾಗುತ್ತದೆ. ಹಾರ ಬದಲಾಯಿಸುವ ವೇಳೆಯ ಅನೇಕ ವಿಡಿಯೋಗಳು ವೈರಲ್ (Viral video) ಆಗುತ್ತವೆ.  ಈ ಆಚರಣೆಯಲ್ಲಿ ಎರಡೂ ಕಡೆಯವರ ಪ್ರಯಾಸ ಕಾಣುತ್ತದೆ. ಎಲ್ಲರೂ ಮೋಜಿನ ಮನಸ್ಥಿತಿಯಲ್ಲಿರುತ್ತಾರೆ. ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಲು ಮಾತ್ರವಲ್ಲ ಸಾಮಾನ್ಯ ಮದುವೆಗಳಲ್ಲಿಯೂ, ಆಚರಣೆಗಳ ಮೋಜಿನ ಅಂಶಗಳನ್ನು ಸೇರಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಹಾರ ಬದಲಾವಣೆಯ ವೇಳೆ ವಿನೋದ : 
ಸಾಮಾಜಿಕ ಜಾಲತಾಣ (Social media) ಇನ್ಸ್ಟಾಗ್ರಾಮ್ ನಲ್ಲಿ ಹಾರ ಬದಲಾವಣೆಯ ವೇಳೆಯ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ  ವಧುವರರು (Bride) ತಮ್ಮ ಕೈಯಲ್ಲಿ ಹೂಮಾಲೆಯನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬರುತ್ತದೆ. ವಧು ಇನ್ನೇನು ಹಾರ ಬದಲಾಯಿಸಬೇಕು  ವರ ಅದನ್ನು ತಪ್ಪಿಸಲು ಪ್ರಯತ್ನ ಪಡುತ್ತಾನೆ. ಹೀಗೆ ಸ್ವಲ್ಫ ಹೊತ್ತು ಮುಂದುವರೆಯುತ್ತದೆ. ವಧು ಅಲ್ಲೇ ಇದ್ದ ಕುರ್ಚಿಯ ಮೇಲೆ ಹತ್ತುತ್ತಾಳೆ. ವರ ಕೂಡಾ ಕುರ್ಚಿ ಮೇಲೇರುತ್ತಾನೆ. 


 

 

 

 



 

 

 

 

 

 

 

 

 

 

 

A post shared by ShaadiSaga.com (@shaadisaga)


 


ಇದನ್ನೂ ಓದಿ : Viral video : ರಸ್ತೆ ಮಧ್ಯೆ ಸ್ಥಿಮಿತ ಕಳೆದು ಕೊಂಡವರಂತೆ ಆಡುತ್ತಿದ್ದ ಪೋಲಿಸ್..! ವಿಚಿತ್ರ ವಾಗಿತ್ತು ಪೋಲಿಸಪ್ಪನ ನಡವಳಿಕೆ


ಇನ್ನೇನು ವಧು ಹಾರ ಹಾಕಿಯೇ ಬಿಟ್ಟಳು ಎನ್ನುವಾಗ ಕುಟುಂಬಸ್ಥರು ಹೂ ಸುರಿಯಲು ಆರಂಭಿಸುತ್ತಾರೆ. ಕೊನೆಗೆ ವರ ವಧುವಿನೆದುರು ತಲೆ ಬಾಗಿಸುತ್ತಾನೆ. ವಧು ಕೊನೆಗೂ ಹಾರ ಬದಲಿಸುತ್ತಾಳೆ. ಈ ಇಡೀ ಪ್ರಕ್ರಿಯೆ ಬಹಳ ತಮಾಷೆಯಾಗಿ ಕಂಡಿದ್ದು, ವಧು ವರರ ಅನ್ಯೊನ್ಯತೆ ಕೂಡಾ ಇಲ್ಲಿ ಕಾಣಿಸುತ್ತದೆ. ಈ ವಿಡಿಯೋ (video) ನೋಡುಗ ಮೆಚ್ಚುಗೆಗೆ ಪಾತ್ರವಾಗಿದೆ. 


ಇದನ್ನೂ ಓದಿ : Viral Video: ನಾಗರಹಾವಿಗೆ ರಾಖಿ ಕಟ್ಟಲು ಹೋದ ಭೂಪ ಕೊನೆಗೆ ಏನಾದ ಗೊತ್ತಾ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ