ಸರ್ಕಾರಗಳು ದೇಶದಲ್ಲಿ ಅಕ್ರಮ ಮದರಸಾಗಳ ವಿರುದ್ಧ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿವೆ. ಅಸ್ಸಾಂ-ಯುಪಿ ನಂತರ, ಈಗ ಮತ್ತೊಂದು ರಾಜ್ಯವು ಅಕ್ರಮ ಮದ್ರಸಾಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಈ ಬಗ್ಗೆ ಮಾತನಾಡಿ ಸಿಎಂ, "ರಾಜ್ಯದಲ್ಲಿ ಮತಾಂಧತೆ ಮತ್ತು ಉಗ್ರವಾದವನ್ನು ಸಹಿಸಲಾಗುವುದಿಲ್ಲ. ಅಂತಹ ಅಕ್ರಮ ಮದರಸಾಗಳ ವಿರುದ್ಧ ಸರ್ಕಾರವು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಿದೆ” ಎಂದು ಕಟುವಾಗಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹರಿದ ಚಡ್ಡಿ ವರ್ಷಪೂರ್ತಿ ಹಾಕೋರ ಗಮನಕ್ಕೆ.. ಒಳಉಡುಪುಗಳಿಗೂ ಇದೆ Expire Date! ಹೀಗೆ ತಿಳಿಯಿರಿ


ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಬುಧವಾರ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಮುಖ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ, ರಾಜ್ಯದಲ್ಲಿ ಆಮೂಲಾಗ್ರ ಶಕ್ತಿಗಳ ಏರಿಕೆ ಮತ್ತು ಅಕ್ರಮ ಮದ್ರಸಾಗಳ ಹೆಚ್ಚಳದ ಬಗ್ಗೆ ಮಾತುಕತೆಯನ್ನು ನಡೆಸಲಾಯಿತು.


ಸಿಎಂ ಶಿವರಾಜ್ ಸಿಂಗ್ ಚೌಹಾನ್ ಮಾತನಾಡಿ, “ಇಂತಹ ಅಕ್ರಮ ಮದರಸಾಗಳು ಮತ್ತು ಧರ್ಮಾಂಧತೆಯ ಪಠ್ಯವನ್ನು ಹೇಳಿಕೊಡುತ್ತಿರುವ ಸಂಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮತಾಂಧತೆ ಹರಡುವಲ್ಲಿ ವಿಚಾರ ಕಂಡುಬಂದಲ್ಲಿ, ಅವರ ಮೇಲೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವುದೇ ಸಂದರ್ಭದಲ್ಲೂ ರಾಜ್ಯದಲ್ಲಿ ಧರ್ಮಾಂಧತೆ ಮತ್ತು ಉಗ್ರವಾದವನ್ನು ಸಹಿಸಲಾಗುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.


ಇದನ್ನೂ ಓದಿ: Fish: ಈ ಮೀನಿನ ಬೆಲೆ ಬರೋಬ್ಬರಿ 25 ಲಕ್ಷದಿಂದ 1 ಕೋಟಿ ರೂ.! ತಿನ್ನೋಕೆ ಆಗದ ಈ ದುಬಾರಿ ಫಿಶ್ ಮತ್ತೇನಕ್ಕೆ ಪ್ರಯೋಜನ?


ಏರುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ನಿರಂತರ ಕ್ರಮ:


ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೋಶಿಯಲ್ ಮೀಡಿಯಾದಲ್ಲಿ ದಾರಿತಪ್ಪಿಸುವ ಸುದ್ದಿಗಳು ಅಥವಾ ಸೂಕ್ಷ್ಮವಲ್ಲದ ಕಾಮೆಂಟ್’ಗಳು ಕಂಡುಬಂದರೆ, ಅವುಗಳನ್ನು ಬರೆದಿರುವವರನ್ನು ಗುರುತಿಸಿ, ತಕ್ಷಣವೇ ಕ್ರಮ ಕೈಗೊಳ್ಳಿ. ತಂತ್ರಜ್ಞಾನವನ್ನು ಬಳಸಿಕೊಂಡು ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ಹೆಚ್ಚಿಸುವ ಬಗ್ಗೆ ನಿರಂತರ ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.