RR vs LSG: ರಾಜಸ್ಥಾನ ರಾಯಲ್ಸ್ ಇಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ಸ್ ತಂಡವು 10 ರನ್’ಗಳ ಅಂತರದಲ್ಲಿ ಸೋಲು ಕಂಡಿತು, ಈ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್, ವ್ಯಂಗ್ಯವಾಗಿ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: IPL 2023: ವಿಶ್ವದ ಈ ದಿಗ್ಗಜ ಆಟಗಾರನಿಗೆ ಅವಕಾಶ ಕೊಡುತ್ತಿಲ್ಲ ಕೆಎಲ್ ರಾಹುಲ್! ಕೊನೆಗೊಳಿಸುತ್ತಾರಾ ವೃತ್ತಿಜೀವನ?
ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳ ಬ್ಯಾಟಿಂಗ್ ಬಹಳ ನಿಧಾನವಾಗಿತ್ತು. ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಇದರ ನಂತರ ಕಣಕ್ಕಿಳಿದ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಲಕ್ನೋ ಪರ ಬೌಲಿಂಗ್ ಮಾಡಿದ ಆವೇಶ್ ಖಾನ್ 4 ಓವರ್‌ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದರು. ಲಕ್ನೋ ಪರ ಕೈಲ್ ಮೇಯರ್ಸ್, 42 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಸಹಾಯದಿಂದ 51 ರನ್’ಗಳ ಭರ್ಜರಿ ಬ್ಯಾಟಿಂಗ್ ನಡೆಸಿದರು.
ಸೋಲಿನಿಂದ ಕೋಪಗೊಂಡ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್, “ಸೋಲುವುದು ಒಳ್ಳೆಯದಲ್ಲ, ಆದರೂ ಪರವಾಗಿಲ್ಲ. ಜೈಪುರದಲ್ಲಿ ಮೊದಲ ಪಂದ್ಯ ಗೆಲ್ಲಬೇಕೆಂಬ ಆಸೆ ನಮ್ಮಲ್ಲಿತ್ತು. ಆದರೆ ಈ ಪಂದ್ಯದಿಂದ ಒಳ್ಳೆಯ ಪಾಠಗಳನ್ನು ಕಲಿತು ಮುಂದೆ ಸಾಗುತ್ತೇವೆ. ನಮ್ಮಲ್ಲಿ ಉತ್ತಮವಾದ ಬ್ಯಾಟ್ಸ್’ಮನ್’ಗಳಿದ್ದಾರೆ. ಆದರೆ ಲಕ್ನೋ ಅದಕ್ಕಿಂತಲೂ ಮಿಂಚಿ ಬೌಲಿಂಗ್ ಮಾಡಿತ್ತು” ಎಂದರು.
ಇದನ್ನೂ ಓದಿ: ಹರಿದ ಚಡ್ಡಿ ವರ್ಷಪೂರ್ತಿ ಹಾಕೋರ ಗಮನಕ್ಕೆ.. ಒಳಉಡುಪುಗಳಿಗೂ ಇದೆ Expire Date! ಹೀಗೆ ತಿಳಿಯಿರಿ
ಕ್ಯಾಪ್ಟನ್ ಸ್ಯಾಮ್ಸನ್ ಈ ಪಂದ್ಯದಿಂದ ಪಾಠ ಕಲಿತುಕೊಳ್ಳುವುದಾಗಿ ಹೇಳಿದರು. “ನೀವು ಪಂದ್ಯವನ್ನು ಗೆದ್ದರೂ ಅಥವಾ ಸೋತರೂ ಅವರಿಂದ ಪಾಠಗಳನ್ನು ಕಲಿತುಕೊಳ್ಳಬೇಕು. ಈ ಆಟದ ಸೌಂದರ್ಯ ಇದು. ಇದರಿಂದ ನಾವು ಸಾಕಷ್ಟು ಪಾಠಗಳನ್ನು ತೆಗೆದುಕೊಂಡು ಮುಂದೆ ಹೋಗುತ್ತೇವೆ. ನಮ್ಮ ಕ್ರಿಕೆಟ್ ಮಟ್ಟವನ್ನು ನಾವೆಲ್ಲರೂ ತಿಳಿದಿದ್ದೇವೆ. ಹಾಗೆಯೇ ಇನ್ನಷ್ಟು ಕಲಿತು ಮುಂದುವರಿಯಬೇಕು, ಉತ್ತಮ ಕ್ರಿಕೆಟ್ ಆಡಬೇಕು” ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.