ನವದೆಹಲಿ: ತನ್ನ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಬ್ರಹ್ಮ್ ಸಿಂಗ್‌ಗಿಂತ 70,000 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿರುವ ಆಮ್ ಆದ್ಮಿ ಪಕ್ಷದ ಅಮಾನತುಲ್ಲಾ ಖಾನ್, ಫಲಿತಾಂಶಗಳ ಬಗ್ಗೆ ಕೇಳಿದಾಗ "ಓಖ್ಲಾ ಕಿ ಜಂತ ನೆ ಕರೆಂಟ್ ಲಗಾ ದಿಯಾ, (ಓಖ್ಲಾ ಜನರು ಕರೆಂಟ್ ಶಾಕ್ ನೀಡಿದ್ದಾರೆ)" ಎಂದು ಅವರು ಹೇಳಿದರು.


COMMERCIAL BREAK
SCROLL TO CONTINUE READING

ಇತ್ತೀಚಿನ ರ್ಯಾಲಿಯಲ್ಲಿ, ಬಿಜೆಪಿ ಮುಖ್ಯಸ್ಥ ಅಮಿತ್ ಶಾ, 'ಶಹೀನ್ ಬಾಗ್ ಕರೆಂಟ್ ಅನುಭವಿಸುವಂತಹ ರೀತಿಯಲ್ಲಿ ಗುಂಡಿಯನ್ನು ಒತ್ತಿ ಎಂದು ಹೇಳಿದ್ದ ಹೇಳಿಕೆಗೆ ಪ್ರತಿಯಾಗಿ ಇಂದು ದೆಹಲಿ ಫಲಿತಾಂಶದ ನಂತರ ಓಕ್ಲಾದ ಜನರು ಕರೆಂಟ್ ಶಾಕ್ ನೀಡಿದ್ದಾರೆ ಅಮಾನತುಲ್ಲಾ ಖಾನ್ ಎಂದು ಹೇಳಿದರು.


ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ನಿಂದ ಹಿಡಿದು ಕೇಂದ್ರ ಸಚಿವ ಅನುರಾಗ್ ಠಾಕೂರ್‌ರವರೆಗೆ ಹಲವಾರು ಬಿಜೆಪಿ ನಾಯಕರು ದೇಶದ್ರೋಹಿಗಳು ಮತ್ತು ಭಯೋತ್ಪಾದಕರ ವಿರುದ್ಧ ಗುಂಡುಗಳನ್ನು ಬಳಸುವಂತೆ ಸೂಚಿಸಿದ್ದರು. ಅನುರಾಗ್ ಠಾಕೂರ್ ಅವರ ರ್ಯಾಲಿಯಲ್ಲಿ "ಗೋಲಿ ಮಾರೊ ಸಾ *** ಕೋ" ಎಂಬ ಘೋಷಣೆಗಳನ್ನು ಎತ್ತಲಾಯಿತು. ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಬಿಜೆಪಿಯ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಅವರು ಭಿನ್ನಮತೀಯರನ್ನು ಎದುರಿಸಲು ಗುಂಡುಗಳನ್ನು ಬಳಸುವುದಕ್ಕೆ ಅನುಮೋದನೆ ನೀಡುವ ಹೇಳಿಕೆ ನೀಡಿದ್ದರು.


ಜನವರಿ 30 ರಂದು, ಉತ್ತರ ಪ್ರದೇಶದ 17 ವರ್ಷದ ವಿದ್ಯಾರ್ಥಿಯೊಬ್ಬ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಿರಾಯುಧ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸುತ್ತಾನೆ , ಇದು ಪೋಲೀಸರ ಸಮ್ಮುಖದಲ್ಲಿಯೇ ನಡೆಯುತ್ತದೆ. ಇದಾದ ಎರಡು ದಿನಗಳ ನಂತರ, 25 ವರ್ಷದ ಯುವಕನೊಬ್ಬ ಶಹೀನ್ ಬಾಗ್ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಿ, ಜೈ ಶ್ರೀ ರಾಮ್ ಎಂದು ಕೂಗಿದನು. ನಂತರ ಆತ ಆಮ್ ಆದ್ಮಿ ಪಕ್ಷದ ಸದಸ್ಯನೆಂದು ಪೊಲೀಸರು ಹೇಳಿದ್ದರು.