ನವದೆಹಲಿ: 51 ಸದಸ್ಯ ಬಲದ ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) ಯ ಎಲ್ಲಾ ಸ್ಥಾನಗಳನ್ನು ಗೆಲ್ಲುವುದರ ಜೊತೆಗೆ ಇತರ ನಗರ ಸಂಸ್ಥೆಗಳನ್ನು ಕೂಡ ಆಡಳಿತರೂಢ ಬಿಜೆಪಿ ಪಕ್ಷವು ಗೆದ್ದಿದೆ.ಇನ್ನೊಂದೆಡೆಗೆ ಪ್ರತಿಪಕ್ಷಗಳಾದ ಟಿಎಂಸಿ ಹಾಗೂ ಸಿಪಿಎಂ ತಮ್ಮ ಖಾತೆಯನ್ನು ತೆರೆಯಲು ವಿಫಲವಾಗಿವೆ.


COMMERCIAL BREAK
SCROLL TO CONTINUE READING

15 ಸದಸ್ಯ ಬಲದ ಖೋವೈ ಮುನ್ಸಿಪಲ್ ಕೌನ್ಸಿಲ್,17 ಸ್ಥಾನಗಳ ಬೆಲೋನಿಯಾ ಮುನ್ಸಿಪಲ್ ಕೌನ್ಸಿಲ್, 15 ಸದಸ್ಯ ಕುಮಾರ್‌ಘಾಟ್ ಮುನ್ಸಿಪಲ್ ಕೌನ್ಸಿಲ್ ಮತ್ತು ಒಂಬತ್ತು ಸದಸ್ಯರ ಸಬ್ರೂಮ್ ನಗರ ಪಂಚಾಯತ್‌ನ ಎಲ್ಲಾ ವಾರ್ಡ್‌ಗಳನ್ನು ಬಿಜೆಪಿ ಪಕ್ಷವು ಪಡೆದುಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಭಾರತಕ್ಕೆ ಮೂರನೇ ಕೊರೊನಾ ಅಲೆ ಅಪ್ಪಳಿಸಲಿದೆಯೇ? ಇಲ್ಲಿದೆ ತಜ್ಞರ ಉತ್ತರ


25 ವಾರ್ಡ್‌ಗಳ ಧರ್ಮನಗರ ಪುರಸಭೆ, 15 ಸ್ಥಾನಗಳ ತೆಲಿಯಮುರ ಪುರಸಭೆ ಮತ್ತು 13 ಸದಸ್ಯ ಅಮರಪುರ ನಗರ ಪಂಚಾಯಿತಿಯಲ್ಲಿ ಬಿಜೆಪಿ ಪಕ್ಷವು ಕ್ಲೀನ್ ಸ್ವೀಪ್ ಮಾಡಿದೆ ಎಂದು ಹೇಳಿದ್ದಾರೆ.ಪಕ್ಷವು ಅಂಬಾಸಾ ಮುನ್ಸಿಪಲ್ ಕೌನ್ಸಿಲ್‌ನ 12 ಸ್ಥಾನಗಳನ್ನು ಪಡೆದುಕೊಂಡರೆ,ಟಿಎಂಸಿ ಮತ್ತು ಸಿಪಿಐ-ಎಂ ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿದೆ ಮತ್ತು ಇನ್ನೊಂದು ಸ್ವತಂತ್ರ ಅಭ್ಯರ್ಥಿಗೆ ಹೋಯಿತು.


ಇದನ್ನೂ ಓದಿ: Alert:ಕೊರೊನಾ ವೈರಸ್ ನ ಅತ್ಯಂತ ಅಪಾಯಕಾರಿ ರೂಪಾಂತರಿ ಪತ್ತೆ, ತುರ್ತು ಸಭೆ ಕರೆದ WHO, ಭಾರತದಲ್ಲೂ ಅಲರ್ಟ್


ಕೈಲಾಶಹರ್ ಮುನ್ಸಿಪಲ್ ಕೌನ್ಸಿಲ್‌ನ 16 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ ಮತ್ತು ಸಿಪಿಐ(ಎಂ) ಒಂದು ಸ್ಥಾನವನ್ನು ಪಡೆದುಕೊಂಡಿದೆ.ಪಾಣಿಸಾಗರ ನಗರ ಪಂಚಾಯತ್‌ನಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದ್ದು, ಸಿಪಿಐ (ಎಂ) ಒಂದು ಸ್ಥಾನವನ್ನು ಪಡೆದುಕೊಂಡಿದೆ.


ರಾಜ್ಯದ ಎಲ್ಲಾ 334 ಸ್ಥಾನಗಳಿಗೆ ಅಗರ್ತಲಾ ಮುನ್ಸಿಪಲ್ ಕಾರ್ಪೊರೇಶನ್, 13 ಪುರಸಭೆಗಳು ಮತ್ತು ಆರು ನಗರ ಪಂಚಾಯತ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅಲ್ಲಿ ಅದರ ನಾಮನಿರ್ದೇಶಿತರು 112 ಸ್ಥಾನಗಳಲ್ಲಿ ಅವಿರೋಧವಾಗಿ ಗೆದ್ದಿದ್ದಾರೆ. ನವೆಂಬರ್ 25 ರಂದು 222 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.


ಇದನ್ನೂ ಓದಿ: ಕೊರೊನಾ ಭೀತಿ : ಧಾರವಾಡದ ಎಸ್‌ಡಿಎಂ ಓಪಿಡಿ ಬುಧವಾರದವರೆಗೆ ಬಂದ್


ಚುನಾವಣೆಯಲ್ಲಿ ತಮ್ಮ ಪಕ್ಷದ ಪ್ರಭಾವಶಾಲಿ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಉಪಾಧ್ಯಕ್ಷ ದಿಲೀಪ್ ಘೋಷ್ ಅವರು ಕೋಲ್ಕತ್ತಾದಲ್ಲಿ ತ್ರಿಪುರಾ ನಾಗರಿಕ ಚುನಾವಣೆಯ ಫಲಿತಾಂಶಗಳು ಈಶಾನ್ಯ ರಾಜ್ಯದಲ್ಲಿ ಟಿಎಂಸಿಯ ಹೇಳಿಕೆಗಳ ಪೊಳ್ಳುತನವನ್ನು ಬಹಿರಂಗಪಡಿಸಿವೆ ಎಂದು ಹೇಳಿದರು.ಅಲ್ಲಿನ ಜನರು ಕೇಸರಿ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.