ಕೊರೊನಾ ಭೀತಿ : ಧಾರವಾಡದ ಎಸ್‌ಡಿಎಂ ಓಪಿಡಿ ಬುಧವಾರದವರೆಗೆ ಬಂದ್

ಸ್ಥಳೀಯ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸಾಂಕ್ರಾಮಿಕ ರೋಗ ತಡೆಗೆ ಕೈಗೊಂಡಿರುವ ಬಿಗಿ ಕ್ರಮಗಳನ್ನು ಮುಂದುವರೆಸಲಾಗಿದ್ದು.ಬುಧವಾರ ಡಿಸೆಂಬರ್ 1 ರವರೆಗೆ ಎಸ್‌ಡಿಎಂ ಆಸ್ಪತ್ರೆಯ ಓಪಿಡಿ ಹಾಗೂ ಹೊಸ ರೋಗಿಗಳ ಪ್ರವೇಶ ನಿರ್ಬಂಧಿಸಲಾಗಿದೆ.

Written by - Zee Kannada News Desk | Last Updated : Nov 28, 2021, 04:06 PM IST
  • ಕೋವಿಡ್ ವೈರಾಣುವಿನ ಜಿನೋಮ್ ಸಿಕ್ವೆನ್ಸ್ ವರದಿಗಳು ಬುಧವಾರ ಕೈಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.
ಕೊರೊನಾ ಭೀತಿ : ಧಾರವಾಡದ ಎಸ್‌ಡಿಎಂ ಓಪಿಡಿ ಬುಧವಾರದವರೆಗೆ ಬಂದ್ title=
Photo Courtesy: Facebook

ಧಾರವಾಡ: ಸ್ಥಳೀಯ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸಾಂಕ್ರಾಮಿಕ ರೋಗ ತಡೆಗೆ ಕೈಗೊಂಡಿರುವ ಬಿಗಿ ಕ್ರಮಗಳನ್ನು ಮುಂದುವರೆಸಲಾಗಿದ್ದು.ಬುಧವಾರ ಡಿಸೆಂಬರ್ 1 ರವರೆಗೆ ಎಸ್‌ಡಿಎಂ ಆಸ್ಪತ್ರೆಯ ಓಪಿಡಿ ಹಾಗೂ ಹೊಸ ರೋಗಿಗಳ ಪ್ರವೇಶ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ:Ind vs NZ: ಶ್ರೇಯಸ್ ಅಯ್ಯರ್ ತಂದೆ 4 ವರ್ಷಗಳಿಂದ ವಾಟ್ಸಾಪ್ ಡಿಪಿ ಬದಲಾಯಿಸಿಲ್ಲ, ಕಾರಣ ತಿಳಿದರೆ ಅಚ್ಚರಿ ಆಗುತ್ತೆ

ಧಾರವಾಡ ಹಾಗೂ ಸುತ್ತಲಿನ ಜಿಲ್ಲೆಗಳಿಂದ ಹುಬ್ಬಳ್ಳಿ ಧಾರವಾಡಕ್ಕೆ ಚಿಕಿತ್ಸೆಗಾಗಿ ಬರುವ ರೋಗಿಗಳು ಇದನ್ನು ಗಮನಿಸಿ ಯೋಜನೆಗಳನ್ನು ಮರು ರೂಪಿಸಿಕೊಳ್ಳಬೇಕು ಅಥವಾ ಹುಬ್ಬಳ್ಳಿಯ ಕಿಮ್ಸ್,ಧಾರವಾಡ ಜಿಲ್ಲಾ ಆಸ್ಪತ್ರೆ ಅಥವಾ ಅವಳಿ ನಗರದ ಯಾವುದಾದರೂ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು.

ಇದನ್ನೂ ಓದಿ : ಈ 5 ರಾಶಿಯವರು ಬೇರೊಬ್ಬರ ಬಗ್ಗೆ ಸದಾ ಚಾಡಿ ಹೇಳುತ್ತಲೇ ಇರುತ್ತಾರೆ..!

ಧಾರವಾಡ ಸತ್ತೂರಿನ ಎಸ್ ಡಿ ಎಂ ಸುತ್ತಲಿನ 500 ಮೀಟರ್ ವ್ಯಾಪ್ತಿಯ ಶಾಲೆ ಕಾಲೇಜುಗಳಿಗೆ ನಾಳೆಯಿಂದ ಡಿಸೆಂಬರ್1 ರವರೆಗೆ ಮೂರುದಿನಗಳ ಕಾಲ ರಜೆ ಮುಂದುವರಿಯಲಿದೆ ಎಂದು ಧಾರವಾಡದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಕೋವಿಡ್ ವೈರಾಣುವಿನ ಜಿನೋಮ್ ಸಿಕ್ವೆನ್ಸ್ ವರದಿಗಳು ಬುಧವಾರ ಕೈಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

 

 

Trending News